ತಮ್ಮ ಕೊನೆಯ ಐಪಿಎಲ್ ಆವೃತ್ತಿಯಲ್ಲಿ ಮಿಂಚಿನ ಆಟ: ಆದರೂ ಬಳಿಕ ಅವಕಾಶ ವಂಚಿತವಾದ 4 ಕ್ರಿಕೆಟಿಗರು!

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್‌ನ ಅತ್ಯುನ್ನತ ಲೀಗ್ ಟೂರ್ನಿ. ಪ್ರತಿಯೊಬ್ಬ ಕ್ರಿಕೆಟರ್ ಕೂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪೊಮ್ಮೆಯಾದರೂ ಭಾಗಿಯಾಗಬೇಕು ಎಂಬ ಕನಸು ಕಾಣುತ್ತಿರುವುದು ಸಹಜ. ಈ ಪ್ರತಿಷ್ಠಿತ ಲೀಗ್ ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಭಾಗಿಯಾಗುತ್ತಿರುವುದು ಇದಕ್ಕೆ ಕಾರಣ. ಇಂಥಾ ಸಂದರ್ಭದಲ್ಲಿ ಆಟಗಾರರಿಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಜೊತೆಗೆ ಇಂಥಾ ದೊಡ್ಡ ಲೀಗ್‌ನಲ್ಲಿ ದೊಡ್ಡ ಮೊತ್ತದ ಸಂಭಾವನೆಯನ್ನು ಕೂಡ ಪಡೆಯುವ ಅವಕಾಶ ದೊರೆಯುತ್ತದೆ ಎಂಬುದು ಮತ್ತೊಂದು ಕಾರಣ.
ಇಂಥಾ ಟೂರ್ನಿಯಲ್ಲಿ ಆಟಗಾರರ ಮಧ್ಯೆ ಸಾಕಷ್ಟು ಪೈಪೋಟಿಗಳು ನಡೆಯುತ್ತವೆ. ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರೂ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಕೂಡ ಬಹಳ ಕಠಿಣವಾಗಿರುತ್ತದೆ. ಕೆಲ ಸಂದರ್ಭಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಕೂಡ ಫ್ರಾಂಚೈಸಿಗಳ ಕಾಂಟ್ರಾಕ್ಟ್ ಕಳೆದುಕೊಳ್ಳಬೇಕಾಗುತ್ತದೆ. ಹೀಗೆ ಐಪಿಎಲ್ ಟೂರ್ನಿಯಲ್ಲಿ ತಾವು ಆಡಿದ ಅಂತಿಮ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಕೂಡ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಅವಕಾಶ ಪಡೆಯಲು ವಿಫಲವಾಗಿರುವ ನಾಲ್ವರು ವಿದೇಶಿ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಆಸಿಸ್ ಆಲ್‌ರೌಂಡರ್ ಜೇಮ್ಸ್ ಫಾಲ್ಕ್ನರ್
ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಲ್ಕ್ನರ್ ಐಪಿಎಲ್ ಟೂರ್ನಿಯ ಪ್ರಮುಖ ಮ್ಯಾಚ್‌ವಿನ್ನರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುವಾಗ ತಮ್ಮ ಅತ್ಯುತ್ತಮ ಪ್ರದರ್ಶನ ನಿಡಿದ್ದರು ಈ ಆಸಿಸ್ ಆಟಗಾರ. 2017ರಲ್ಲಿ ಇವರು ಗುಜರಾತ್ ಲಯನ್ಸ್ ತಂಡದ ಪಾಲಾಗಿ ಇಲ್ಲಿ 8 ಪಂದ್ಯಗಳನ್ನು ಆಡಿ 6 ವಿಕೆಟ್ ಪಡೆದುಕೊಂಡಿದ್ದರು ಹಾಗೂ 54 ರನ್‌ಗಳಿಸಿದ್ದರು. ಆದರೆ ಮುಂದಿನ ಆವೃತ್ತಿಯಲ್ಲಿ ಇವರು ಕಾಂಟ್ರಾಕ್ಟ್ ಕಳೆದುಕೊಳ್ಳಬೇಕಾಯಿತು.

ಕೆವೊನ್ ಕೂಪರ್
ಕೆವೊನ್ ಕೂಪರ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕೆಲ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕೆರಿಬಿಯನ್ ಮೂಲದ ಆಟಗಾರ ಬ್ಯಾಟಿಂಗ್‌ನಲ್ಲಿ ಬಿಗ್ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದರೆ ಬೌಲಿಂಗ್‌ನಲ್ಲಿಯೂ ವಿಕೆಟ್ ಟೇಕರ್ ಆಗಿದ್ದರು. 2014ರ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4 ವಿಕೆಟ್ ಪಡೆದುಕೊಂಡಿದ್ದರೆ 150ರ ಸ್ಟ್ರೈಕ್‌ರೇಟ್‌ನಲ್ಲಿ 39 ರನ್ ಗಳಿಸಿದ್ದರು. ಆದರೆ ಅದಾದ ಬಳಿಕ ಮತ್ತೊಂದು ಅವಕಾಶ ಕೂಪರ್‌ಗೆ ದೊರೆಯಲೇ ಇಲ್ಲ.

ಹಾಶಿಮ್ ಆಮ್ಲ
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಹಾಶಿಮ್ ಆಮ್ಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 2 ಆವೃತ್ತಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2-17ರ ಆವೃತ್ತಿಯಲ್ಲಿ ಅವರು ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. 10 ಇನ್ನಿಂಗ್ಸ್‌ಗಳಲ್ಲಿ 420 ರನ್‌ಗಳನ್ನು ಆ ಆರ್ವೃತ್ತಿಯಲ್ಲಿ ಗಳಿಸಿದ್ದರು ಹಾಶೀಮ್ ಆಮ್ಲ. ಎರಡು ಶತಕಗಳನ್ನು ಕೂಡ ಅವರು ಬಾರಿಸಿದ್ದಾರೆ. ಅಚ್ಚರಿಯೆಂಬಂತೆ ಅವರು ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ.

ಮಾರ್ನೆ ವ್ಯಾನ್ ವ್ಯಾಕ್
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಮಾರ್ನೆ ವ್ಯಾನ್ ವ್ಯಾಕ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಆಟಗಾರ. 2009ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಮಾರ್ನೆ ವ್ಯಾನ್ ವ್ಯಾಕ್ ಆಡಿದ್ದರು. ಆಡಿದ ಐದು ಪಂದ್ಯಗಳಲ್ಲಿ 55.67ರ ಸರಾಸರಿಯಲ್ಲಿ ಮಾರ್ನೆ ವ್ಯಾನ್ ವ್ಯಾಕ್ 167 ರನ್‌ಗಳನ್ನು ಆ ಆವೃತ್ತಿಯಲ್ಲಿ ಗಳಿಸಿದರು. ಆದರೆ ಆ ಆವೃತ್ತಿಯ ಬಳಿಕ ಅವರು ಮತ್ತೆಂದೂ ಐಪಿಎಲ್‌ನಲ್ಲಿ ಆಡಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications