Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World cup 2023: 4 ದಿಗ್ಗಜ ಕ್ರಿಕೆಟಿಗರಿಗೆ ಇದು ಅಂತಿಮ ವಿಶ್ವಕಪ್!: ಭಾರತದ ದಿಗ್ಗಜನಿಗೂ ಇದೇ ಕೊನೆಯ ಅವಕಾಶ

ಭಾರತ ಈ ವರ್ಷಾಂತ್ಯದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲು ಸಿದ್ಧವಾಗುತ್ತಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕದನದಲ್ಲಿ ಮೇಲುಗೈ ಸಾಧಿಸಲು ಎಲ್ಲಾ ತಂಡಗಳು ಕೂಡ ಭರದ ಸಿದ್ಧತೆ ನಡೆಸುತ್ತಿದೆ. ಟೂರ್ನಿಯ ಆರಂಭಕ್ಕೆ ಇನ್ನು ಊರು ತಿಂಗಳುಗಳು ಮಾತ್ರವೇ ಬಾಕಿಯಿರುವ ಕಾರಣ ಬಲಿಷ್ಠ ತಂಡಗಳನ್ನು ಸಿದ್ದಪಡಿಸುತ್ತಿವೆ.

1975ರಿಂದ ಪ್ರಾರಂಭವಾದ ಈ ಏಕದಿನ ವಿಶ್ವಕಪ್ ಟೂರ್ನಿ ಎಂಟು ತಂಡಗಳೊಂದಿಗೆ ಪ್ರಾರಂಭವಾಯಿತು. ಆದರೆ ಈ ವರ್ಷ ICC ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದುಈ ಬಾರಿ 10 ತಂಡಗಳು ಕದನ ನಡೆಸಲಿದೆ. ಈ ವಿಶ್ವಕಪ್ ಟೂರ್ನಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾರಣ ಈ ವಿಶ್ವಕಪ್ ಅನ್ನು ಅತ್ಯಂತ ಪ್ರತಿಷ್ಠಿತವೆಂದು ಪರಿಗಣಿಸುತ್ತಾರೆ. ಇಂಥಾ ಮಹತ್ವದ ಟೂರ್ನಿಯಲ್ಲಿ ಕ್ರಿಕೆಟಿಗ ಕೂಡ ಆಡುವ ಕನಸು ಕಾಣುತ್ತಾರೆ.

 4 popular cricketers might play their last Cricket World Cup

ವಿಶ್ವ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಕೆಲ ದಿಗ್ಗಜ ಆಟಗಾರರು ವೃತ್ತ ಜೀವನದ ಕೊನೆಯ ಹಂತದಲ್ಲಿದ್ದು ಈ ವಿಶ್ವಕಪ್ ಈ ಆಟಗಾರರ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಾಗಿರುವ ಸಾಧ್ಯತೆಯಿದೆ. ಅಂಥಾ ನಾಲ್ವರು ದಿಗ್ಗಜ ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ

ಈ ಪಟ್ಟಿಯಲ್ಲಿ ಬರುವ ಮೊದಲ ಆಟಗಾರ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ. ಪ್ರಸ್ತುತ 36 ವರ್ಷದ ರೋಹಿತ್ ಶರ್ಮಾ ಮುಂದಿನ ವಿಶ್ವಕಪ್ ಬರುವ ವೇಳೆಗೆ 40ರ ಹರೆಯಕ್ಕೆ ಕಾಲಿಟ್ಟಿರುತ್ತಾರೆ. ಹಾಗಾಗಿ ಅವರಿಗೆ ಇದು ಕೊನೆಯ ಏಕದಿನ ವಿಶ್ವಕಪ್ ಆಗಿರುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಶರ್ಮಾ ಬಹುಶಃ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು 2025ರ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಬಹುದು. ಆದರೆ 2027ರಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡುವುದು ದೂರದ ಮಾತು.

ವಾರ್ನರ್‌ಗೂ ಇದು ಕೊನೆಯ ವಿಶ್ವಕಪ್

ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಆರಂಭಿಕ ಬ್ಯಾಟರ್ ಆಸ್ಟ್ರೇಲಿಯಾದ ದಾಂಡಿಗ ಡೇವಿಡ್ ವಾರ್ನರ್. ಈ ಎಡಗೈ ಬ್ಯಾಟರ್ ಜನವರಿ 2024ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡುವುದಾಗಿ ಘೋಷಣೆ ಮಾಡಿದ್ದಾರೆ. ವಾರ್ನರ್ ಕೂಡ ಪ್ರಸ್ತುತ 36ರ ಹರೆಯದಲ್ಲಿದ್ದು 2027ರ ವಿಶ್ವಕಪ್ ವೇಳೆಗೆ ನಿವೃತ್ತಿ ಪಡೆದುಕೊಂಡಿರುವ ಸಾಧ್ಯತೆ ಹೆಚ್ಚಿದೆ.

ಇಂಗ್ಲೆಂಡ್ ಆಲ್‌ರೌಂಡರ್ ಮೊಯೀನ್ ಅಲಿ

ಇಂಗ್ಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ಮೊಯೀನ್ ಅಲಿ ಪ್ರಸ್ತುತ 35ರ ಹರೆಯದಲ್ಲಿದ್ದಾರೆ. 2027ರ ವಿಶ್ವಕಪ್ ವೇಳೆಗೆ ಆಲ್‌ರೌಂಡರ್ ಮೊಯಿನ್ ಅಲಿಗೆ 39 ವರ್ಷ ವಯಸ್ಸಾಗಲಿದೆ. ಪ್ರಸ್ತುತ ಮೊಯೀನ್ ಅಲಿ ಫಿಟ್ ಆಗಿರುವ ಆಟಗಾರನಾಗಿದ್ದರೂ ಯುವ ಆಟಗಾರರ ಸ್ಪರ್ಧೆಯ ಮಧ್ಯೆ 39ನೇ ವಯಸ್ಸಿನಲ್ಲಿ ಆಲ್‌ರೌಂಡರ್ ಆಗಿ ಅತ್ಯುನ್ನತ ಮಟ್ಟದಲ್ಲಿ ಆಡುವುದು ಕಷ್ಟ. ಹೀಗಾಗಿ ಮೊಯೀನ್ ಅಲಿಗೆ ಕುಡ ಇದು ಕೊನೆಯ ವಿಶ್ವಕಪ್ ಏಕದಿನ ಟೂರ್ನಿಯಾಗಿರುವ ಸಾಧ್ಯತೆಯಿದೆ.

ಅಫ್ಘಾನ್ ಆಲ್‌ರೌಂಡರ್ ಮೊಹಮ್ಮದ್ ನಬಿ

ಅಫ್ಘಾನಿಸ್ತಾನದ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಮೊಹಮ್ಮದ್ ನಬಿ ಈಗಲೂ ತಂಡದ ಪ್ರಮುಖ ಅಸ್ತ್ರ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಯಾವಾಗಲೂ ನೆರವು ನೀಡುವ ಆಟಗಾರ. ಆದರೆ ಪ್ರಸ್ತುತ 38 ಹರೆಯದವರಾದ ನಬಿಗೆ 2027ರ ವಿಶ್ವಕಪ್ ವೇಳೆಗೆ ಅವರಿಗೆ 42 ವರ್ಷ ವಯಸ್ಸಾಗಲಿದೆ. ಹೀಗಾಗಿ ಅಷ್ಟರಲ್ಲಿ ನಬಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ನಿಶ್ಚಿತ.

Story first published: Wednesday, July 5, 2023, 18:22 [IST]
Other articles published on Jul 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+