Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲೋ ಹುಟ್ಟಿದ ನಾಯಕರು!: ಬೇರೆ ದೇಶದಲ್ಲಿ ಹುಟ್ಟಿ ಮತ್ತೊಂದು ದೇಶದ ನಾಯಕತ್ವ ವಹಿಸಿಕೊಂಡ ಹಾಲಿ ಕ್ರಿಕೆಟಿಗರು

ವಿಶ್ವದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಟಿ20 ಮಾದರಿ ಹುಟ್ಟಿದ ಬಳಿಕ ಕ್ರಿಕೆಟ್‌ನ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಸ್ತುತ 100ಕ್ಕೂ ಅಧಿಕ ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಟಿ10 ಕ್ರಿಕೆಟ್ ಕೂಡ ಹೆಚ್ಚಾಗುತ್ತಿದ್ದು ಕ್ರಿಕೆಟ್‌ನ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಸಾಕಷ್ಟು ದೇಶಗಳು ಕ್ರಿಕೆಟನ್ನು ಮೆಚ್ಚಿಕೊಂಡು ಈ ಕ್ರೀಡೆಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ತವರಿನಲ್ಲಿ ಪ್ರತಿಭಾನ್ವಿತ ಆಟಗಾರರ ಕೊರತೆಯಿದ್ದಾಗ ಬೇರೆ ದೇಶದ ಪ್ರತಿಭಾವಂತ ಕ್ರಿಕೆಟರ್‌ಗಳನ್ನು ತಮ್ಮತ್ತ ಸೆಳೆದುಕೊಂಡು ತಮ್ಮ ದೇಶದಲ್ಲಿ ಆಡಿಸುವ ಮೂಲಕ ತನ್ನ ನೆಲದ ಯುವಕರಲ್ಲಿ ಕ್ರಿಕೆಟ್‌ನ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡುವ ಪ್ರಕ್ರಿಯೆಗಳು ಕೂಡ ನಡೆಯುತ್ತಿದೆ.

These 4 present international cricket skippers not born in the nation they lead

ಹಾಗಂತ ಬೇರೆ ದೇಶದ ಆಟಗಾರರು ಮತ್ತೊಂದು ದೇಶದ ಪರವಾಗಿ ಆಡುವುದು ಹೊಸತೇನೂ ಅಲ್ಲ. ಈಗಾಗಲೇ ಕ್ರಿಕೆಟ್ ದೊಡ್ಡ ಮಟ್ಟದಲ್ಲಿ ಬೆಳೆದಿರುವ ದೇಶಗಳಲ್ಲಿಯೂ ವಿದೇಶದಲ್ಲಿ ಹುಟ್ಟಿದ ಹಲವಾರು ಆಟಗಾರರು ಇದ್ದಾರೆ. ಅಲ್ಲದೆ ಕೆಲ ದೇಶಗಳ ತಂಡದ ನಾಯಕರು ಕೂಡ ಬೇರೆ ದೇಶದಲ್ಲಿ ಹುಟ್ಟಿದ ಆಟಗಾರರು ಎಂಬುದು ಕುತೂಹಲಕಾರಿ ಅಂಶ. ಪ್ರಸ್ತುತ ನಾಲ್ಕು ದೇಶದ ನಾಯಕರು ಬೇರೆ ದೇಶದಲ್ಲಿ ಹುಟ್ಟು ಇನ್ನೊಂದು ದೇಶದ ನಾಯಕರಾಗಿ ಮಿಂಚುತ್ತಿದ್ದಾರೆ. ಅಂಥಾ ನಾಲ್ವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..

ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್

ಇಂಗ್ಲೆಂಡ್ ತಂಡದ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೂಲತಃ ನ್ಯೂಜಿಲೆಂಡ್‌ನವರು. ಆದರೆ ಬೆನ್ ಸ್ಟೋಕ್ಸ್ ಕುಟುಂಬ ಯುನೈಟೆಡ್ ಕಿಂಗ್‌ಡಮ್‌ಗೆ ಸ್ಥಳಾಂತರಗೊಂಡಿತು. ಸ್ಟೋಕ್ಸ್ ಈಗ ಕ್ರಿಕೆಟ್ ತಂಡದಪ್ರಮುಖ ಭಾಗವಾಗಿದ್ದಾರೆ. ಕಳೆದ ವರ್ಷ ಅವರು ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದು ಅತ್ಯುತ್ತಮ ದಾಖಲೆ ಹೊಂದಿದ್ದಾರೆ.

ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪೈಕಿ ನೆದರ್ಲೆಂಡ್ಸ್ ಕೂಡ ಒಂದು. ಈ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಅಸೊಸಿಯೇಟ್ ರಾಷ್ಟ್ರ ಎನಿಸಿಕೊಂಡಿದೆ ನೆದರ್ಲೆಂಡ್ಸ್. ಈ ನೆದರ್ಲೆಂಡ್ಸ್ ತಂಡದ ನಾಯಕತ್ವವನ್ನು ಸ್ಕಾಟ್ ಎಡ್ವರ್ಡ್ಸ್ ವಹಿಸಿಕೊಳ್ಳಲಿದ್ದಾರೆ. ಆದರೆ ಎಡ್ವರ್ಡ್ಸ್ ಮೂಲತಃ ಯೂರೋಪ್ ರಾಷ್ಟ್ರವಾದ ನೆದರ್ಲೆಂಡ್ಸ್‌ನವರಲ್ಲ. ಅವರು ದೂರದ ಒಶೇನಿಯಾ ಭಾಗದ ಟೊಂಗಾ ಎಂಬ ದೇಶದವರು.

ಮೊನಾಂಕ್ ಪಟೇಲ್

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡದ ನಾಯಕ ಮೊನಾಂಕ್ ಪಟೇಲ್ ಮೂಲತಃ ಭಾರತದವರು. ದೇಶೀಯ ಕ್ರಿಕೆಟ್‌ನಲ್ಲಿ ಮೊನಾಂಕ್ ಪಟೇಲ್ ಗುಜರಾತ್ ಕ್ರಿಕೆಟ್ ತಂಡದಲ್ಲಿಯೂ ಆಡಿದ್ದರು. ಆದರೆ ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ನಡೆದ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಪಟೇಲ್ ಯುಎಸ್‌ಎ ತಂಡವನ್ನು ಮುನ್ನಡೆಸಿದ್ದಾರೆ.

ಮೊಹಮ್ಮದ್ ವಾಸೀಮ್

ಪಾಕಿಸ್ತಾನ ಮೂಲದ ಮುಹಮ್ಮದ್ ವಾಸೀಮ್ ಇತ್ತೀಚೆಗಷ್ಟೇ ಯುಎಇ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವರ್ಷಾರಂಭದಲ್ಲಿ ಏಕದಿನ ತಂಡದ ನಾಯಕನಾಗಿಯೂ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿಯೂ ಯುಎಇ ತಂಡವನ್ನು ಮುನ್ನಡೆಸಿದ್ದಾರೆ.

Story first published: Wednesday, August 16, 2023, 21:20 [IST]
Other articles published on Aug 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+