ಟಿ20 ವಿಶ್ವಕಪ್‌ನಲ್ಲಿ ಗೆದ್ದು ಬಿದ್ದವರು!: ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿ ಮರೆಯಾದ 5 ಆಟಗಾರರು

ಆಸ್ಟ್ರೇಲಿಯಾ ನೆಲದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಈಗಾಗಲೇ ಆರಂಭವಾಗಿದ್ದು ಸೂಪರ್ 12 ಹಂತದ ಪಂದ್ಯಗಳ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ಎಲ್ಲಾ ವಿಶ್ವಕಪ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಬೇಕು ಎಂದು ಎಲ್ಲಾ ತಂಡಗಳ ಆಟಗಾರರು ಕೂಡ ಸಿದ್ಧತೆ ನಡೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಕಪ್ ಇತಿಹಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿ ಬಳಿಕ ಮರೆಯಾದ ಕೆಲ ಆಟಗಾರರ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ನೋಡೋಣ.
ಟಿ20 ವಿಶ್ವಕಪ್ ಕ್ರಿಕೆಟ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಇರುವ ಅದ್ಭುತವಾದ ವೇದಿಕೆಯಾಗಿದೆ. 2007ರಿಂದ ಈ ಚುಟುಕು ಮಾದರಿಯ ವಿಶ್ವಕಪ್ ಅನ್ನು ಐಸಿಸಿ ಆರಂಭಿಸಿತು. ಮೊದಲ ಆವೃತ್ತಿಯಲ್ಲಿ ಭಾರತ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
ಇನ್ನು ಈವರೆಗಿನ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನಿಸಿದರೆ ಕೆಲ ಆಟಗಾರರು ಮಹತ್ವದ ಘಟ್ಟಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರೂ ಬಳಿಕ ತಮ್ಮ ತಂಡದಿಂದ ಹೊರಬಿದ್ದಿದ್ದಾರೆ. ಹೀಗೆ ತಂಡದ ಪರವಾಗಿ ಮಿಂಚಿ ಮರೆಯಾದ ಐವರು ಆಟಗಾರರು ಯಾರು ಎಂಬುದರ ಬಗ್ಗೆ ಇಲ್ಲಿದೆ ವರದಿ..

2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
2007ರಲ್ಲಿ ಟೀಮ್ ಇಂಡಿಯಾ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ ಗೆದ್ದಾಗ ಭಾರತದ ಪರವಾಗಿ ಹೀರೋ ಆಗಿ ಮಿಂಚಿದ್ದವರು ಜೋಗಿಂದರ್ ಶರ್ಮಾ. ಮಧ್ಯಮವೇಗದ ಆಲ್‌ರೌಂಡರ್ ಆಗಿಉ ಗುರುತಿಸಿಕೊಂಡಿದ್ದ ಜೋಗಿಂದರ್ ಶರ್ಮಾ ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಂತಿಮ ಓವರ್ ಎಸೆದಿದ್ದರು. ಈ ಓವರ್‌ನಲ್ಲಿ ಪಾಕಿಸ್ತಾನದ ಅಂದಿನ ನಾಯಕ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಭಾರತ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಕಾರಣವಾಗಿದ್ದರು. ದುರಂತವೆಂದರೆ ಈ ಪಂದ್ಯವೇ ಜೋಗಿಂದರ್ ಶರ್ಮಾ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಯಿತು. ಬಳಿಕ ಯಾವುದೇ ಪಂದ್ಯಕ್ಕೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಜೋಗಿಂದರ್ ಶರ್ಮಾಗೆ ದೊರೆಯಲೇ ಇಲ್ಲ.

ಅಫ್ತಾಬ್ ಅಹ್ಮದ್, ಬಾಂಗ್ಲಾದೇಶ
2007ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಸೂಪರ್ 8 ಹಂತಕ್ಕೇರಲು ಪ್ರಮುಖ ಕಾರಣವಾಗಿದ್ದು ಅಫ್ತಾಬ್ ಅಹ್ಮದ್ ಅವರ ಸ್ಥಿರ ಪ್ರದರ್ಶನ. ಈ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಅಫ್ತಾಬ್ ಅಹ್ಮದ್ 162 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಅಜೇಯ 62 ರನ್ ಕೂಡ ಸೇರಿದೆ. ಆದರೆ ಈ ಟೂರ್ನಿಯ ಬಳಿಕ ಅಹ್ಮದ್‌ಗೆ ಕೇವಲ ಮೂರು ಟಿ20 ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶ ದೊರೆಯಿತು.

ಪಾಕಿಸ್ತಾನದ ವೇಗಿ ಮೊಹಮ್ಮದ್ ಆಸಿಫ್
ಪಾಕಿಸ್ತಾನದ ಪ್ರತಿಭಾವಂತ ವೇಗದ ಬೌಲರ್‌ಗಳ ಪೈಕಿ ಮೊಹಮ್ಮದ್ ಅಸಿಫ್ ಕೂಡ ಒಬ್ಬರು ಎಂದು ಸಾಕಷ್ಟು ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. 2007ರಲ್ಲಿ ಪಾಕಿಸ್ತಾನದ ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಸಿಫ್ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರು. ಮಾತ್ರವಲ್ಲದೆ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಆದರೆ ಬಳಿಕ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ ಆಸಿಫ್ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಅಂತ್ಯವಾಯಿತು.

ಆರೋನ್ ರೆಡ್ಮಾಂಡ್, ನ್ಯೂಜಿಲೆಂಡ್
2009ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಆಟಗಾರ ಆರೋನ್ ರೆಡ್ಮಾಂಡ್. ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ರೆಡ್ಮಾಂಡ್ 101 ರನ್‌ಗಳಿಸಿದ್ದರು. 170ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಅಚ್ಚರಿಯೆಂದರೆ ಈ ವಿಶ್ವಕಪ್‌ನ ಮುಕ್ತಾಯದ ಬಳಿಕ ಕೇವಲ ನಾಲ್ಕು ಟಿ20i ಪಂದ್ಯಗಳನ್ನಷ್ಟೇ ಆಡಿದರು.

ಕ್ರೇಗ್ ಕೀಸ್ವೆಟ್ಟರ್, ಇಂಗ್ಲೆಂಡ್
2010ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು ಕ್ರೇಗ್ ಕೀಸ್ವೆಟ್ಟರ್. ಆ ಪಂದ್ಯದ ಬಳಿಕ ಕಿಸ್ವೆಟ್ಟರ್ ಅಸ್ಥಿರ ಪ್ರದರ್ಶನ ನಿಡಲು ಆರಂಬಿಸಿದ್ದರು. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್‌ನ ಬಳಿಕ ತಂಡದಿಂದಲೇ ಹೊರಬಿದ್ದರು. ನಂತರ ಕಣ್ಣಿಗೆ ಗಂಭೀರವಾಗಿ ಗಾಯವಾದ ಕಾರಣ ಇಂಗ್ಲೆಂಟ್ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications