2019ರ ವಿಶ್ವಕಪ್ ಬಳಿಕ ನಾಪತ್ತೆ!: ವಿಶ್ವಕಪ್ ಆಡಿದ ಬಳಿಕ ಮರೆಯಾದ ಆಟಗಾರರು ಇವರು!!
2019ರ ಏಕದಿನ ವಿಶ್ವಕಪ್ ಟೂರ್ನಿ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಮೆಗಾ ಟೂರ್ನಿಗಳಲ್ಲಿ ಒಂದು. ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 10 ರಾಷ್ಟ್ರಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಿದ್ದವು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಧಿಕ ಬೌಂಡರಿ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.
2019ರ ಈ ವಿಶ್ವಕಪ್‌ನಲ್ಲಿ ಸಾಕಷ್ಟು ಆಟಗಾರರು ಅದ್ಭುತ ಪ್ರದರ್ಶನ ನೀಡಿ ಸೂಪರ್‌ಸ್ಟಾರ್‌ಗಳಾಗಿ ಮಿಂಚಿದ್ದಾರೆ. ಆದರೆ ಕುತೂಹಲಕಾರಿ ಎನ್ನುವಂತೆ ಕೆಲ ಕ್ರಿಕೆಟಿಗರು ಈ ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಬೇರೆ ಬೇರೆ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಮರೆಯಾಗಿದ್ದಾರೆ. ಹೀಗೆ ಮರೆಯಾದ ಐವರು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ.

ವಿಶ್ವಕಪ್‌ನಲ್ಲಿಯೇ ಕೊನೆಯ ಬಾರಿ ಕಾಣಿಸಿಕೊಂಡ ಲಿಯಾಮ್ ಪ್ಲಂಕೆಟ್
ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್2019ರ ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡಗ್ ವಿರುದ್ಧ ಇಂಗ್ಲೆಂಡ್‌ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಪ್ಲಂಕೆಟ್‌ಗೆ ಮತ್ತೊಂದು ಬಾರಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಸಿಗಲೇ ಇಲ್ಲ. ಪ್ಲಂಕೆಟ್ ಈಗ ಯುಎಸ್‌ಎನಲ್ಲಿ ಆಡುತ್ತಿದ್ದಾರೆ.
ನಿವೃತ್ತಿ ಘೋಷಿಸಿದ ತಿಸರ ಪೆರೆರ
ಶ್ರೀಲಂಕಾದ ಮಾಜಿ ನಾಯಕ ತಿಸಾರಾ ಪೆರೆರಾ ಅವರು 2019ರ ವಿಶ್ವಕಪ್ ಟೂರ್ನಿಯಲ್ಲಿ ದ್ವೀಪ ರಾಷ್ಟ್ರದ ತಂಡದ ಸದಸ್ಯರಾಗಿದ್ದರು. ಆದರೆ ಈ ವಿಶ್ವಕಪ್‌ನ ಬಳಿಕ ಶ್ರೀಲಂಕಾ ಮಂಡಳಿಯೊಂದಿಗಿನ ವಿವಾದದ ಕಾರಣ ತಿಸರ ಪೆರೆರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಲಂಕಾ ಆಟಗಾರ ಮಿಲಿಂದ ಸಿರಿವರ್ದನ
ಶ್ರೀಲಂಕಾದ ಮತ್ತೋರ್ವ ಕ್ರಿಕೆಟಿಗ ಮಿಲಿಂದ ಸಿರಿವರ್ಧನ ಕೂಡ 2019ರ ವಿಶ್ವಕಪ್‌ನಲ್ಲಿಯೇ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದರು. ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಮುಖಾಮುಖಿಯಾಗಿದ್ದು ಸಿರಿವರ್ದನ ಪಾಲಿಗೆ ಕೊನೆಯ ಪಂದ್ಯವಾಗಿತ್ತು. ಇದೀಗ ಸಿರಿವರ್ದನ ನೇಪಾಳದ ಟಿ20 ಲೀಗ್ ಫಾರ್ ವೆಸ್ಟ್ ಯುನೈಟೆಡ್‌ನಲ್ಲಿ ಕಾಣಿಸಿಕೊಂಡಿದ್ದರು.
ಬಾಂಗ್ಲಾ ವೇಗಿ ಅಬು ಜಾಯೇದ್
ಬಾಂಗ್ಲಾದೇಶದ ವೇಗದ ಬೌಲರ್ ಅಬು ಜಾಯೆದ್ ಅವರನ್ನು ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿಯೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅಕಾಶ ದೊರೆತಿರಲಿಲ್ಲ. 2019ರ ಮೇ ತಿಂಗಳಿನಿಂದ ಬಾಂಗ್ಲಾದೇಶದ ಪರವಾಗಿ ಅಬು ಜಾಯೇದ್‌ಗೆ ಒಂದೇ ಒಂದು ವೈಟ್-ಬಾಲ್ ಪಂದ್ಯವನ್ನು ಆಡುವ ಅವಕಾಶ ದೊರೆತಿಲ್ಲ.
ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಬ್ಯುರಾನ್ ಹೆಂಡ್ರಿಕ್ಸ್
ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಬ್ಯುರಾನ್ ಹೆಂಡ್ರಿಕ್ಸ್ ವಿಶ್ವಕಪ್ ಟೂರ್ನಿ ನಡೆದ ವರ್ಷವೇ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಈವರೆಗೆ ಅವರು ಆಡಿದ್ದು ಕೇವಲ 8 ಏಕದಿನ ಪಂದ್ಯಗಳಲ್ಲಿ ಮಾತ್ರ. ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್‌ನಲ್ಲಿ ಇನ್ನು ಕೂಡ ತಮ್ಮ ಪ್ರಯತ್ನವನ್ನು ಈ ವೇಗಿ ಮುಂದುವರಿಸುತ್ತಲೇ ಇದ್ದಾರೆ. ಆದರೆ ರಾಷ್ಟ್ರೀಯ ತಂಡದಿಂದ ದೂರವಾಗಿ ಬಹಳ ಕಾಲವೇ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications