For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡೂ ತಂಡಗಳ ಪರ ಆಡಿದ ಅಪರೂಪದ ಐವರು ಆಟಗಾರರು ಇವರು!

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹಳೇಯ ಬದ್ಧ ಎದುರಾಳಿಗಳು ಎಂಬ ಹೆಗ್ಗಳಿಕೆ ಹೊಂದಿರುವ ತಂಡಗಳೆಂದರೆ ಅದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್. ಈ ಎರಡು ತಂಡಗಳ ನಡುವಿನ ಆಶಸ್ ಸರಣಿ ವಿಶ್ವಪ್ರಸಿದ್ಧ. ಈ ಎರಡು ತಣಡಗಳು ಆಶಸ್ ಸರಣಿಯ ಐದು ಪಂದ್ಯಗಳಲ್ಲಿ ಪ್ರತಿಬಾರಿ ಮುಖಾಮುಖಿಯಾದಾಗಲೂ ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ಕುತೂಹಲದಿಂದ ನೋಡುತ್ತಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಬದ್ಧ ಎದುರಾಳಿಗಳು ಎನಿಸಿಕೊಂಡಿದ್ದರು ಕೂಡ ಸುದೀರ್ಘ ಕಾಲದ ಇತಿಹಾಸ ಹೊಂದಿರುವ ಟೆಸ್ಟ್ ಮಾದರಿಯಲ್ಲಿ ಐವರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಎರಡೂ ತಂಡಗಳ ಪರವಾಗಿಯೂ ಆಡಿದ್ದಾರೆ. ಕುತೂಹಲಕಾರಿ ಸಂಗತಿಯೇನೆಂದರೆ ಜೇಮ್ಸ್ ಪ್ಯಾಟಿನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರೆ ಅವರ ಸೋದರ ಡ್ಯಾರೆನ್ ಪ್ಯಾಟಿನ್ಸನ್ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

These 5 cricketers played for both Australia and England in Test cricket

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳ ಪರವಾಗಿ ಆಡಿದ ಐವರು ಆಟಗಾರರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಬಿಲ್ಲಿ ಮಿಡ್ವಿಂಟರ್

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳ ಪರವಾಗಿಯೂ ಟೆಸ್ಟ್ ಆಡಿದ ಅಪರೂಪದ ಆಟಗಾರರ ಪಟ್ಟಿಯಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದವರೆಂದರೆ ಅದು ಬಿಲ್ಲಿ ಮಿಡ್ವಿಂಟರ್. ಅವರು 1877 ರಿಂದ 1887 ರವರೆಗೆ ಆಸ್ಟ್ರೇಲಿಯಾ ಪರವಾಗಿ ಎಂಟು ಟೆಸ್ಟ್‌ಗಳನ್ನು ಆಡಿದ್ದರು. ಇದರ ಮಧ್ಯೆ 881 ರಿಂದ 1882 ರವರೆಗೆ ಇಂಗ್ಲೆಂಡ್‌ ಪರವಾಗಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಬಿಲ್ಲಿ ಮುರ್ಡೋಕ್

ಮೊದಲು ಆಸ್ಟ್ರೇಲಿಯಾ ಪರವಾಗಿ ಆಡಿ ನಂತರ ಇಂಗ್ಲಿಷ್ ತಂಡದ ಪರವಾಗಿ ಕಣಕ್ಕಿಳಿದ ಇನ್ನೊಬ್ಬ ಕ್ರಿಕೆಟಿಗ ಬಿಲ್ಲಿ ಮುರ್ಡೋಕ್. 1877 ರಿಂದ 1890ರವರೆಗೆ ಆಸ್ಟ್ರೇಲಿಯಾ ಪರವಾಗಿ 18 ಟೆಸ್ಟ್ ಪಂದ್ಯಗಳನ್ನು ಆಡಿದ ಮುರ್ಡೋಕ್ ನಂತರ 1892ರಲ್ಲಿ ಅವರು ಇಂಗ್ಲೆಂಡ್ ಪರವಾಗಿ ಒಂದು ಪಂದ್ಯವನ್ನು ಆಡಿದ್ದರು.

ಜೆ.ಜೆ ಫೆರಿಸ್

19ನೇ ಶತಮಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮತ್ತೋರ್ವ ಆಟಗಾರ ಜೆ.ಜೆ. ಫೆರ್ರಿಸ್ ಕೂಡ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳ ಪರವಾಗಿ ಆಡಿದ ಅಪರೂಪದ ಕ್ರಿಕೆಟಿಗ. 1887 ರಿಂದ 1890 ರವರೆಗೆ ಆಸೀಸ್ ಪರವಾಗಿ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದರು ಫೆರಿಸ್. ಈ ಎಂಟು ಪಂದ್ಯಗಳಲ್ಲಿ ಅವರು 48 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ನಂತರ ಫೆರಿಸ್ 1892ರಲ್ಲಿ ಇಂಗ್ಲೆಂಡ್ ಪರವಾಗಿ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.

ಸ್ಯಾಮಿ ವುಡ್ಸ್

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳ ಪರವಾಗಿ ತಲಾ ಮೂರುಯ ಪಂದ್ಯಗಳನ್ನು ಆಡಿದ ಕ್ರಿಕೆಟಿಗ ಮ್ಯಾಮಿ ವುಡ್ಸ್. 1888ರಲ್ಲಿ ಆಸ್ಟ್ರೇಲಿಯಾ ಪರವಾಗಿ ಆಡಿದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವುಡ್ಸ್ ನಂತರ ಎಂಟು ವರ್ಷಗಳ ಬಳಿಕ ಇಂಗ್ಲೆಂಡ್‌ ಪರವಾಗಿ ಮೂರು ಪಂದ್ಯಗಳಲ್ಲಿ ಆಡಿದ್ದರು.

ಆಲ್ಬರ್ಟ್ ಟ್ರಾಟ್

ಆಲ್ಬರ್ಟ್ ಟ್ರಾಟ್ 1895ರಲ್ಲಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಪರವಾಗಿ ಆಡಿದ್ದು 205 ರನ್‌ಗಳನ್ನು ಗಳಿಸಿದರು. ಅದಾದ ಬಳಿಕ ಟ್ರಾಟ್ 1899 ರಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಐವರು ಆಟಗಾರರು ಕೂಡ 19ನೇ ಶತಮಾನದಲ್ಲಿಯೇ ಈ ಎರಡು ತಂಡಗಳ ಪರವಾಗಿ ಆಡಿದ್ದಾರೆ. ಅದಾದ ಬಳಿಕ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಈ ಎರಡು ತಂಡಗಳ ಪರವಾಗಿ ಯಾವುದೇ ಆಟಗಾರ ಆಡಿಲ್ಲ.

Story first published: Friday, June 30, 2023, 19:21 [IST]
Other articles published on Jun 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+