For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಲೋಕದ ಈ ಐವರು ಶ್ರೇಷ್ಠ ಆಟಗಾರರು ಆಡಿದ್ದು ಒಂದೇ ಅಂತಾರಾಷ್ಟ್ರೀಯ ಟಿ20 ಪಂದ್ಯ!

These 5 great cricketers played just one T20I cricket match for their nation

ಟಿ20 ಕ್ರಿಕೆಟ್ ಸದ್ಯ ಕ್ರಿಕೆಟ್ ಲೋಕದ ಅತ್ಯಂತ ಜನಪ್ರಿಯ ಮಾದರಿಯಾಗಿದೆ. 2004ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಅಂತಾರಾಷ್ಟ್ರೀಯ ಚುಟುಕು ಮಾದರಿಯ ಕ್ರಿಕೆಟ್ ನಡೆದಿತ್ತು. ಅದಾದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆಗೆ ಈ ಮಾದರಿ ಕಾರಣವಾಗಿದ್ದು ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಕಾರಣವಾಯಿತು. ಸುಮಾರು ಮೂವರುವರೆ ಗಂಟೆಗಳಲ್ಲಿ ಫಲಿತಾಂಶ ದೊರೆಯುವ ಕಾರಣ ವಿಶ್ವಾದ್ಯಂತ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಮಾದರಿ ಕಾರಣವಾಯಿತು.

ಆದರೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿ ಭಾರೀ ಯಶಸ್ಸು ಸಾಧಿಸಿದ ಕೆಲ ದಿಗ್ಗಜ ಕ್ರಿಕೆಟಿಗರು ಟಿ20 ಕ್ರಿಕೆಟ್‌ನಲ್ಲಿ ಕೇವಲ ಒಂದು ಪಂದ್ಯಕ್ಕೆ ಮಾತ್ರವೇ ಸಿಮೀತವಾಗಿರುವ ಉದಾಹರಣೆಗಳಿ ಇದೆ. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿ ದಾಖಲೆ ಮಾಡಿರುವ ಐವರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರವೇ ಆಡಿರುವ ಐವರು ಕ್ರಿಕೆಟಿಗರು ಯಾರು ಎಂಬುದ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಲೋಕ್ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುನ್ನತ ದಾಖಲೆಗಳನ್ನೆಲ್ಲಾ ತಮ್ಮ ಹೆಸರಿಗೆ ಬರೆದುಕೊಂಡಿರುವ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸೇರಿದಂತೆ ಅತಿ ಹೆಚ್ಚು ರನ್‌ಗಳನ್ನು ಬಾರಿಸಿರುವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಆದರೆ ಈ ದಿಗ್ಗಜ ಕ್ರಿಕೆಟಿಗ ಅಂತಾರಾಷ್ಟ್ರೀತ ಕ್ರಿಕೆಟ್‌ನಲ್ಲಿ ಕೇವಲ ಒಂದು ಟಿ20 ಪಂದ್ಯವನ್ನು ಮಾತ್ರವೇ ಆಡಿದ್ದಾರೆ. ಭಾರತದ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹನ್ಸ್‌ಬರ್ಗ್‌ನಲ್ಲಿ ಆಡಿದ್ದಾಗ ಆ ಪಂದ್ಯದಲ್ಲಿ ಸಚಿನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆರಂಬಿಕನಾಗಿ ಸೆಹ್ವಾಗ್ ಜೊತೆಗೆ ಕಣಕ್ಕಿಳಿದಿದ್ದ ಸಚಿನ್ ಎರಡ ಬೌಂಡರಿಗಳ ಸಹಿತ 10 ರನ್ ಸಿಡಿಸಿ ವಿಕೆಟ್ ಕಳೆದುಕೊಂಡಿದ್ದರು. 2007ರಲ್ಲಿ ಟಿ20 ವಿಶ್ವಕಪ್ ಆಯೋಜನೆಯಾದಾಗ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಚಿನ್ ಸೇರಿದಂತೆ ಅನುಭವಿ ಆಟಗಾರರು ಈ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಟೆಸ್‌ಟ ಕ್ರಿಕೆಟ್ ಹಾಗೂ ಏಕದಿನ ಮಾದರಿಯಲ್ಲಿ ನೀಡಿರುವ ಪ್ರದರ್ಶನಗಳ ಕಾರಣದಿಂದಾಗಿ ದಿಗ್ಗಜ ಆಟಗಾರ ಎನಿಸಿಕೊಂಡಿದ್ದಾರೆ. ಕರ್ನಾಟಕದ ಈ ಆಟಗಾರ ಟೆಸ್ಟ್ ಮಾದರಿಯಲ್ಲಿ 13,288 ರನ್‌ಗಳಿಸಿದ್ದರೆ ಏಕದಿನ ಕ್ರಿಕೆಟ್‌ನಲ್ಲಿ 10889 ರನ್‌ಗಳಿಸಿದ್ದಾರೆ. ಎರಡು ಮಾದರಿಯಲ್ಲಿಯೂ ಹತ್ತು ಸಾವಿರಕ್ಕಿಂತ ಅಧಿಕ ರನ್‌ಗಳಿಸಿರುವ ಕೇವಲ ಏಳು ಆಟಗಾರರಲ್ಲಿ ದ್ರಾವಿಡ್ ಕುಡ ಒಬ್ಬರೆನಿಸಿದ್ದಾರೆ.

ಆದರೆ ದ್ರಾವಿಡ್ ಕೂಡ ಸಚಿನ್ ತೆಂಡೂಲ್ಕರ್ ರೀತಿಯಲ್ಲಿಯೇ ಏಕೈಕ ಟಿ20 ಪಂದ್ಯವನ್ನು ಆಡಿದ ಆಟಗಾರ ಎನಿಸಿದ್ದಾರೆ. ದ್ರಾವಿಡ್ 2011ರಲ್ಲಿ ತಮ್ಮ ಏಕೈಕ ಪಂದ್ಯವನ್ನು ಆಡಿದ್ದಾರೆ. ಇಂಗ್ಲೆಂಡ್ ವಿರುದ್ದ ಮ್ಯಾಂಚೆಸ್ಟರ್‌ನಲ್ಲಿ ದ್ರಾವಿಡ್ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿದ ದ್ರಾವಿಡ್ ಆ ಪಂದ್ಯದಲ್ಲಿ 21 ಎಸೆತಗಳಲ್ಲಿ 31 ರನ್ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಸ್ಪಿನ್ನರ್ ಸಮಿತ್ ಪಟೇಲ್ ಓವರ್‌ನಲ್ಲಿ ದ್ರಾವಿಡ್ ಸತತ ಮೂರು ಸಿಕ್ಸರ್ ಬಾರಿಸಿದ್ದರು. ಈ ಪಂದ್ಯವನ್ನು ಭಾರತ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಬಳಿಕ ಟಿ20 ಮಾದರಿಗೆ ದ್ರಾವಿಡ್ ವಿದಾಯ ಹೇಳಿದರು.

ಇನ್ಜಮಾಮ್ ಉಲ್ ಹಕ್

ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಹಾಗೂ 1992ರ ವಿಶ್ವಕೊ್ ವಿಜೇತ ತಂಡದ ಸದಸ್ಯ ಇನ್ಜಮಾಮ್ ಉಲ್ ಹಕ್ ಈ ಪಟ್ಟಿಯಲ್ಲಿರುವ ಮತ್ತೋರ್ವ ದಿಗ್ಗಜ ಆಟಗಾರ. ಪಾಕಿಸ್ತಾನದ ಪರವಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಲೆಯನ್ನು ಹೊಂದಿರುವ ಇನ್ಜಮಾಮ್ ಉಲ್ ಹಕ್ ಟೆಸ್ಟ್ ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿದ್ದರು. ಆದರೆ ಇನ್ಜಮಾಮ್ ಉಲ್ ಹಕ್ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರವೇ ಆಡಿದ್ದಾರೆ. ಪಾಕಿಸ್ತಾನ ತಂಡ 2006ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಯೇ ಇನ್ಜಮಾಮ್ ಕೂಡ ಚುಟಕು ಮಾದರಿಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಪಾಖಿಸ್ತಾನ ತಂಡದ ನಾಯಕತ್ವವನ್ನು ಕೂಡ ಇನ್ಜಿ ಮಹಿಸಿಕೊಂಡಿದ್ದರು. ಆದರೆ ಅದಾದ ಬಳಿಕ ಚುಟುಕು ಮಾದರಿಯಿಂದ ಅವರು ದೂರವುಳಿದರು.

ಜೇಸನ್ ಗಿಲೆಸ್ಪಿ

ಜೇಸನ್ ಗಿಲೆಸ್ಪಿ

ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಕೂಡ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಒಂದು ಮಾತ್ರವೇ ಆಡಿದ ಆಟಗಾರ ಎನಿಸಿದ್ದಾರೆ. 2005ರಲ್ಲಿ ಇಂಗ್ಲೆಂಡ್ ವಿರುದ್ಧ ರೋಸ್‌ಬೌಲರ್‌ನ್ಲಲಿ ನಡೆದಿದ್ದ ಪಂದ್ಯದಲ್ಲಿ ಗಿಲೆಸ್ಪಿ ಕಣಕ್ಕಿಳಿದಿದ್ದರು. ಆದರೆ ಈ ಪಂದ್ಯದಲ್ಲಿ ಆಸಿಸ್ ವೇಗಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಲು ವಿಫಲವಾಗಿದ್ದರು. ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್‌ನಲ್ಲಿ 49 ರನ್‌ ನಿಡಿದ್ದ ಅವರು ಒಂದು ವಿಕೆಟ್ ಪಡೆದುಕೊಂಡಿದ್ದರು. ಆದರೆ 180 ರನ್‌ಗಳನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ 79 ರನ್‌ಗಳಿಗೆ ಗಂಟುಮೂಟೆ ಕಟ್ಟಿತ್ತು. ಆದರೆ ಬ್ಯಾಟಿಂಗ್‌ನಲ್ಲಿ 24 ರನ್‌ಗಳಿಸಿದ್ದ ಗಿಲೆಸ್ಪಿ ಈ ಪಂದ್ಯದಲ್ಲಿ ಆಸಿಸ್ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಆಗಿದ್ದರು. ಆದರೆ ಈ ಪಂದ್ಯದ ಬಳಿಕ ಮತ್ತೆಂದೂ ಗಿಲೆಸ್ಪಿ ಟಿ20 ಮಾದರಿಯಲ್ಲಿ ಕಣಕ್ಕಿಳಿಯಲಿಲ್ಲ.

ಮೊಹಮ್ಮದ್ ರಫೀಕ್

ಮೊಹಮ್ಮದ್ ರಫೀಕ್

ಬಾಂಗ್ಲಾದೇಶ ಕ್ರಿಕೆಟ್ ತಂಡದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಸಂಪಾದಿಸಿದ ಮೊದಲ ಬೌಲರ್ ಮೊಹಮ್ಮದ್ ರಫೀಕ್. ತಮ್ಮ ಸ್ಪಿನ್ ದಾಳಿಯ ಮೂಲಕ ಮಿಂಚುತ್ತಿದ್ದ ರಫೀಕ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡುತ್ತಿದ್ದರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ರಫೀಕ್ 125 ವಿಕೆಟ್ ಸಂಪಾದಿಸಿದ್ದಾರೆ. ಆದರೆ ಈ ಎಡಗೈ ಸ್ಪಿನ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕೈಕ ಟಿ20 ಪಂದ್ಯವನ್ನು ಆಡಿದ ಅನುಭವ ಹೊಂದಿದ್ದಾರೆ. ಈ ಪಂದ್ಯ 2006ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿತ್ತು. ಈ ಪಂದ್ಯದಲ್ಲಿ ಎಸೆತಗಳಲ್ಲಿ 13 ರನ್‌ಗಳಿಸಿದ್ದ ರಫೀಕ್, ಬೌಲಿಂಗ್‌ನಲ್ಲಿ ಒಂದು ವಿಕೆಟ್ ಸಂಪಾದಿಸಿದ್ದರು. ಈ ಪಂದ್ಯವಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ಸಾಧಿಸಿತಾದರೂ ಬಳಿಕ ಟಿ20 ಮಾದರಿಗೆ ಈ ಆಟಗಾರನನ್ನು ಪರಿಗಣಿಸಲಿಲ್ಲ.

Story first published: Friday, July 22, 2022, 17:51 [IST]
Other articles published on Jul 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+