ಭಾರತದ ಅಪರೂಪದ ಸಾಧಕರು: ಮೂರು ಮಾದರಿಯಲ್ಲೂ ಶತಕ ಸಿಡಿಸಿದ 5 ಭಾರತೀಯ ಬ್ಯಾಟರ್‌ಗಳು

ಎಲ್ಲಾ ಮಾದರಿಯಲ್ಲಿಯೂ ಯಶಸ್ಸು ಸಾಧಿಸುವುದು ಎಲ್ಲಾ ಕ್ರಿಕೆಟಿಗರಿಂದಲೂ ಸಾಧ್ಯವಾಗುವುದಿಲ್ಲ. ಹಾಗೆಯೇ ಎಲ್ಲಾ ಮಾದರಿಯಲ್ಲಿಯೂ ಶತಕ ಸಿಡಿಸುವುದು ಕೂಡ ಸುಲಭದ ಸಂಗತಿಯಲ್ಲ. ಟೆಸ್ಟ್, ಏಕದಿನ, ಟಿ20 ಈ ಮೂರು ಮಾದರಿಯಲ್ಲಿಯೂ ಅದ್ಭುತ ಯಶಸ್ಸು ಸಾಧಿಸಬೇಕಾದರೆ ಅತ್ಯುತ್ತಮವಾದ ತಾಂತ್ರಕ ಕೌಶಲ್ಯ, ಸಾಮರ್ಥ್ಯ ಹಾಗೂ ಹೊಸತನಗಳು ಆಟಗಾರರಲ್ಲಿರಬೇಕು. ಸಾಕಷ್ಟು ಆಟಗಾರರು ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ಆಡಿದ್ದರೂ ಕೆಲವರಿಗೆ ಮಾತ್ರವೇ ಮೂರು ಮಾದರಿಯಲ್ಲಿಯೂ ಸುದೀರ್ಘ ಕಾಲದ ವೃತ್ತಿಜೀವನದ ಹೊಂದಲು ಸಾಧ್ಯವಾಗಿದೆ.
ಭಾರತ 2006ರಿಂದ ಟಿ20 ಕ್ರಿಕೆಟ್ ಆಡುತ್ತಿದೆ. ಆದರೆ ಕಳೆದ ವರ್ಷಗಳಲ್ಲಿ ಭಾರತದ ಪರವಾಗಿ ಆಡಿದ ಆಟಗಾರರ ಪೈಕಿ ಐವರು ಆಟಗಾರರು ಮಾತ್ರವೇ ಟೆಸ್ಟ್ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಶತಕವನ್ನು ಸಿಡಿಸಲು ಸಾಧ್ಯವಾಗಿದೆ. ಅಹ್ಮದಾಬಾದ್‌ನಲ್ಲಿ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಐದನೇ ಆಟಗಾರನಾಗಿ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲರುವ ಐವರು ಆಟಗಾರರ ಮಾಹಿತಿ ಇಲ್ಲಿದೆ.

ಶುಬ್ಮನ್ ಗಿಲ್, ಮೂರು ಮಾದರಿಯಲ್ಲೂ ಶತಕ ಸಿಡಿಸಿದ ಕಿರಿಯ ಆಟಗಾರ
ಟೀಮ್ ಇಂಡಿಯಾದ ಹೊಸ ಸೆನ್ಸೇಶನಲ್ ಆಟಗಾರ ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ತಮ್ಮ ಚೊಚ್ಚಲ ಏಕದಿನ ಶತಕವನ್ನು ಪೂರ್ಣಗೊಳಿಸಿದ್ದರು. ಇದೀಗ ಫೆಬ್ರವರಿ 1ರಂದು ಅಹ್ಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಆದರೆ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದಿರಲಿಲ್ಲ. ಆದರೆ ಕಳೆದ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಈ ಪಟ್ಟಿಗೆ ಸೇರಿಕೊಂಡಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ಆಟಗಾರ ಎಂಬ ವಿಶ್ವದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಟಿ20ಯಲ್ಲಿ 4 ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 30 ಶತಕಗಳಿಸಿರುವ ರೋಹಿತ್ ಟೆಸ್ಟ್ ಮಾದರಿಯಲ್ಲಿ 8 ಶತಕ ಸಿಡಿಸಿದ್ದಾರೆ.

ಕನ್ನಡಿಗ ಕೆಎಲ್ ರಾಹುಲ್
ಭಾರತ ತಂಡದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಕೂಡ ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಆಟಗಾರ. ಕೆಎಲ್ ರಾಹುಲ್ ಕೂಡ ಮೂರು ಮಾದರಿಯಲ್ಲಿಯೂ ಶತಕವನ್ನು ಸಿಡಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 5 ಶತಕ ಸಿಡಿಸಿರುವ ಕೆಎಲ್ ರಾಹುಲ್ ಟೆಸ್ಟ್ ಮಾದರಿಯಲ್ಲಿ 7 ಶತಕಗಳನ್ನು ಹೊಂದಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 2 ಶತಕಗಳಿಸಿದ್ದಾರೆ.

ಈ ಸಾಧನೆ ಮಾಡಿದ ಮೊದಲ ಆಟಗಾರ ಸುರೇಶ್ ರೈನಾ
ಇನ್ನು ಮೂರು ಮಾದರಿಯಲ್ಲಿಯೂ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಸುರೇಶ್ ರೈನಾಗೆ ಸಲ್ಲುತ್ತದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ರೈನಾ, ಏಕದಿನ ಮಾದರಿಯಲ್ಲಿ 5 ಶತಕಗಳನ್ನು ಸಿಡಿಸಿದ್ದರೆ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಇನ್ನು ಟಿ20 ಮಾದರಿಯಲ್ಲಿಯೂ ರೈನಾ ಒಂದು ಶತಕವನ್ನು ಸಿಡಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications