Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಆರ್‌ಸಿಬಿ ವಿರುದ್ಧ ಚೆನ್ನೈ ತಂಡದ ಈ 5 ಪ್ಲೇಯರ್ಸ್ ಆಡುವುದು ಅನುಮಾನ...

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2025 ರ 52ನೇ ಪಂದ್ಯದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಲ್ಲಿವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಪ್ಲೇಆಫ್ ರೇಸ್ ನಿಂದ ಹೊರಬಿದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ರುತುರಾಜ್ ಗಾಯಕ್ವಾಡ್ ಗಾಯಗೊಂಡು ಹೊರಗುಳಿದ ನಂತರ, 43 ವರ್ಷದ ಎಂಎಸ್ ಧೋನಿ ಮತ್ತೆ ಚೆನ್ನೈ ತಂಡಕ್ಕೆ ನಾಯಕರಾದರು. ಆದರೆ ತಂಡದ ಅದೃಷ್ಟವನ್ನು ಬದಲಾಯಿಸಲು ಅವರಿಂದ ಸಾಧ್ಯವಾಗಲಿಲ್ಲ. ತಂಡವು 10 ಪಂದ್ಯಗಳಲ್ಲಿ 8 ರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

These 5 players from Chennai team are doubtful to play against RCB

ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಸೀಸನ್‌ಗಳಲ್ಲಿ ಐಪಿಎಲ್ ಪ್ಲೇಆಫ್‌ನಲ್ಲಿ ಆಡುತ್ತಿಲ್ಲ. ಈ ಬಾರಿ ಚೆನ್ನೈ ಆಟಗಾರರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಖರೀದಿಸಿದ ಹೆಚ್ಚಿನ ಆಟಗಾರರು ವಿಫಲರಾಗಿದ್ದಾರೆ.

ಚೆನ್ನೈ ತಂಡ ಪ್ಲೇಆಫ್‌ನಿಂದ ಹೊರಬಿದ್ದ ನಂತರ, ನಾಯಕ ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್ ಈಗ ದೊಡ್ಡ ಬದಲಾವಣೆಗಳಿಗೆ ಸಮಯ ಎಂದು ಈಗಾಗಲೇ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದ ಈ 5 ಆಟಗಾರರು ಆಡುವುದು ಅನುಮಾನವಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ರಾಹುಲ್ ತ್ರಿಪಾಠಿ

ದೇಶೀಯ ಮತ್ತು ಐಪಿಎಲ್‌ನ ಅನುಭವಿ ಬ್ಯಾಟರ್ ರಾಹುಲ್ ತ್ರಿಪಾಠಿ ಅವರನ್ನು ಚೆನ್ನೈ 3.40 ಕೋಟಿ ರೂ.ಗೆ ಖರೀದಿಸಿತು. ಅಜಿಂಕ್ಯ ರಹಾನೆ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ರಾಹುಲ್ ತ್ರಿಪಾಠಿ ವೇಗವಾಗಿ ರನ್ ಗಳಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಐಪಿಎಲ್ 2025 ರಲ್ಲಿ ಅವರು ಸಂಪೂರ್ಣವಾಗಿ ಫಾರ್ಮ್‌ ಸಮಸ್ಯೆ ಎದುರಿಸಿದ್ದಾರೆ. ಇದು ಚೆನ್ನೈ ತಂಡದ ಅಗ್ರ ಕ್ರಮಾಂಕದ ಮೇಲೆ ಪರಿಣಾಮ ಬೀರಿತು. ಅವರು 5 ಪಂದ್ಯಗಳಲ್ಲಿ 11 ಸರಾಸರಿ ಮತ್ತು 96.49 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 55 ರನ್‌ಗಳನ್ನು ಗಳಿಸಿದರು. ಈ ಕಾರಣಕ್ಕಾಗಿ ಫ್ರಾಂಚೈಸಿ ಆರ್‌ಸಿಬಿ ವಿರುದ್ಧದ ಪಂದ್ಯ ಮತ್ತು ಮುಂದಿನ ವರ್ಷದ ಮೊದಲು ಅವರನ್ನು ಬಿಡುಗಡೆ ಮಾಡಬಹುದು.

ವಿಜಯ್ ಶಂಕರ್

ಆಲ್‌ರೌಂಡರ್ ವಿಜಯ್ ಶಂಕರ್ ಕೂಡ ಐಪಿಎಲ್ 2025 ರಲ್ಲಿ ವಿಶೇಷವಾದದ್ದೇನನ್ನೂ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರು ಕೆಲವು ರನ್ ಮಾತ್ರ ಗಳಿಸಿದ್ದಾರೆ. ಶಂಕರ್ 6 ಪಂದ್ಯಗಳಲ್ಲಿ 39.33 ಸರಾಸರಿಯಲ್ಲಿ 118 ರನ್ ಕಲೆ ಹಾಕಿದ್ದಾರೆ. ಅವರು ಕ್ರೀಸ್‌ನಲ್ಲಿ ಹೆಚ್ಚು ಬಾರಿ ಉಳಿದಿದ್ದರೂ, ವೇಗವಾಗಿ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಅವರನ್ನು ತಂಡವು 1.20 ಕೋಟಿ ರೂ.ಗೆ ಖರೀದಿಸಿತು. ಈಗ ತಂಡವು ಅವನನ್ನು ಬಿಡುಗಡೆ ಮಾಡಿ ಯುವ ಆಟಗಾರನ ಮೇಲೆ ಹಣ ಸುರಿಯುವ ನಿರೀಕ್ಷೆಯಿದೆ. ಅಲ್ಲದೆ, ಹೀಗಾಗಿ ಇಂದಿನ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಕಡಿಮೆಯಿದೆ.

ದೀಪಕ್ ಹೂಡಾ

ದೀಪಕ್ ಹೂಡಾ ಫಾರ್ಮ್‌ನಲ್ಲಿಲ್ಲದಿರುವುದು ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಅವರು ತಂಡಕ್ಕೆ ಯಾವುದೇ ಪಂದ್ಯದಲ್ಲಿಯೂ ನೆರವಾಗಲಿಲ್ಲ. ಚೆನ್ನೈ ತಂಡ ಅವರನ್ನು 1.70 ಕೋಟಿ ರೂ.ಗೆ ಖರೀದಿಸಿತ್ತು. ಹೂಡಾ ಅವರನ್ನು ಬೇರೆ ಬೇರೆ ಕ್ರಮಾಂಕದಲ್ಲಿ ಆಡಿಸಿದರೂ, ಪ್ರತಿ ಬಾರಿಯೂ ವಿಫಲರಾಗಿದ್ದಾರೆ. ಅವರು 5 ಪಂದ್ಯಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಈ ಕಾರಣಕ್ಕಾಗಿ ಇಂದಿನ ಪಂದ್ಯ ಅವರ ಬದಲಿಗೆ ಯಾವ ಆಟಗಾರ ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಜೇಮೀ ಓವರ್ಟನ್

ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಗ್ಲೆಂಡ್ ವೇಗಿ ಜೇಮೀ ಓವರ್ಟನ್ ಅವರನ್ನು 1.50 ಕೋಟಿ ರೂ.ಗೆ ಖರೀದಿಸಿತು. ಲೈನ್ ಮತ್ತು ಲೆಂತ್‌ ಬೌಲಿಂಗ್‌ಗೆ ಹೆಸರುವಾಸಿಯಾದ ಓವರ್ಟನ್ ಐಪಿಎಲ್‌ನಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ತಂಡವು ಅವರನ್ನು 3 ಪಂದ್ಯಗಳಲ್ಲಿ ಆಡಿಸಿತು, ಮೂರು ಬಾರಿಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಚೆನ್ನೈ ತಂಡದಿಂದ ಅವರನ್ನು ಹೊರ ಹಾಕುವ ಸಾಧ್ಯತೆಯಿದೆ.

ರವಿಚಂದ್ರನ್ ಅಶ್ವಿನ್

ಭಾರತ ತಂಡ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಪುನರಾಗಮನ ಮಾಡಿದರು. ಅವರು 2010 ಮತ್ತು 2011 ರಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಆದರೆ 2015 ರ ನಂತರ ಅವರು ತಂಡದಿಂದ ಬೇರ್ಪಟ್ಟರು. ಈ ಬಾರಿಯ ಮೆಗಾ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು 9.75 ಕೋಟಿ ರೂಪಾಯಿಗಳ ಭಾರಿ ಬೆಲೆಗೆ ಖರೀದಿಸಿತು. ಅಶ್ವಿನ್ ತನ್ನ ಹಳೆಯ ಲಯದಲ್ಲಿ ಕಾಣಿಸುತ್ತಿಲ್ಲ. ತಂಡಕ್ಕೆ ದುಬಾರಿ ಬೌಲರ್ ಆಗಿದ್ದಾರೆ. ಅವರು 7 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಇದಾದ ನಂತರ ಅವರನ್ನು ಆಡುವ ಹನ್ನೊಂದರ ತಂಡದಿಂದ ಕೈಬಿಡಲಾಗಿದೆ. ಇಂದಿನ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ ಅವರಿಗೆ ಚೆನ್ನೈ ಅವಕಾಶ ನೀಡಬಹುದು.

Story first published: Saturday, May 3, 2025, 14:12 [IST]
Other articles published on May 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+