ಭಾರತದ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಬೆಂಚ್ ಕಾದಿರುವ ಐವರು ಪ್ಲೇಯರ್: ಸಿಗಲಿಲ್ಲ ಅವಕಾಶ!
ಭಾರತ-ನ್ಯೂಜಿಲೆಂಡ್ ನಡುವೆ ಮುಂದಿನ ಟಿ20 ಅಂತರಾಷ್ಟ್ರೀಯ ಸರಣಿಯ ಮೇಲೆ ಅಭಿಮಾನಿಗಳ ಸಾಕಷ್ಟು ಕಣ್ಣಿದೆ. ಯುಎಇನಲ್ಲಿ ಮರೆಯಲಾಗದ ಟಿ20 ವಿಶ್ವಕಪ್ ಅಭಿಯಾನದ ನಂತರ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ಗೆ ಈಗಿನಿಂದಲೇ ಸಜ್ಜಾಗಬೇಕಿದೆ. ಹೀಗಾಗಿಯೇ ಆಯ್ಕೆ ಸಮಿತಿಯು ಹೊಸ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಿದೆ.
ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಉದಯೋನ್ಮುಖ ಆಟಗಾರರಿಗೆ ಈ ಬಾರಿ ಅವಕಾಶ ನೀಡಲಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಎಲ್ಲ ಅವಕಾಶಗಳನ್ನು ಹೊಂದಿರುವ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ.
ಆದಾಗ್ಯೂ, ಕೆಲವು ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ರು ಸಹ ಅವಕಾಶಗಳನ್ನು ಪಡೆದಿಲ್ಲ. ಅಂತಹ ಆಟಗಾರರು ಯಾರು ಎಂಬುದನ್ನು ಮುಂದೆ ತಿಳಿಯಿರಿ

ಅರ್ಷ್‌ದೀಪ್ ಸಿಂಗ್
ನ್ಯೂಜಿಲೆಂಡ್‌ನಲ್ಲಿ ನಡೆದ 2018 ರ U-19 ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ಭಾರತೀಯ ತಂಡಕ್ಕಾಗಿ ಅರ್ಷ್‌ದೀಪ್ ಭರ್ಜರಿ ಪ್ರದರ್ಶನದ ಮೂಲಕ ಬೆಳಕಿಗೆ ಬಂದರು. ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವು ಅವರ ಪ್ರಮುಖ ಶಕ್ತಿಯಾಗಿದ್ದು , ಅವರ 6'3 ಎತ್ತರವು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಿದೆ.
2020 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್‌ನಿಂದ ಆಯ್ಕೆಯಾದ ಅವರು ತಂಡಕ್ಕೆ ಪ್ರಭಾವಶಾಲಿ ಕೊಡುಗೆ ನೀಡಿದ್ದಾರೆ. 2021 ರ ಆವೃತ್ತಿಯಲ್ಲಿ, ಅವರು ತಮ್ಮ 12 ಪಂದ್ಯಗಳಲ್ಲಿ 8.27 ಎಕಾನಮಿಯಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದರು. ಡೆತ್ ಓವರ್‌ಗಳಲ್ಲೂ ಉತ್ತಮವಾಗಿ ಬೌಲ್ ಮಾಡಬಲ್ಲ ಅರ್ಷ್‌ದೀಪ್ ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಅವಕಾಶ ಪಡೆಯುವ ಆಸೆ ಇಟ್ಟುಕೊಂಡಿದ್ದು, ಮತ್ತಷ್ಟು ದಿನಗಳು ಕಾಯುವಂತಾಗಿದೆ.

ರವಿ ಬಿಷ್ನೋಯ್
ಕಿಂಗ್ಸ್‌ನ ಮನೆಯ ಮತ್ತೊಬ್ಬ ಪ್ರತಿಭೆ ರವಿ ಬಿಷ್ಣೋಯ್ ಅವರು ಉದಯೋನ್ಮುಖ ಲೆಗ್-ಸ್ಪಿನ್ನರ್ ಆಗಿದ್ದು, ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಭವಿಷ್ಯದ ನಿರೀಕ್ಷೆಯೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು 2020 ರ U-19 ವಿಶ್ವಕಪ್‌ನಲ್ಲಿ ಕೇವಲ ಆರು ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದರು.
2021 ರ ಐಪಿಎಲ್ ಆವೃತ್ತಿಯಲ್ಲಿ, ಅವರು ಕೇವಲ ಒಂಬತ್ತು ಪಂದ್ಯಗಳಲ್ಲಿ 6.34 ರ ಎಕಾನಮಿಯಲ್ಲಿ 12 ವಿಕೆಟ್‌ಗಳನ್ನು ಪಡೆದರು. ಜೊತೆಗೆ ಫೀಲ್ಡಿಂಗ್‌ನಲ್ಲೂ ಮಿಂಚುವ ಮೂಲಕ 'ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್' ಪ್ರಶಸ್ತಿಯನ್ನು ಪಡೆದರು.
ಈ ಲೆಗಿಯ ಅಂಕಿಅಂಶಗಳನ್ನು ನೋಡಿದ್ರೆ, ಇವರಿಗೆ ಭಾರತೀಯ ಟಿ20 ತಂಡದಲ್ಲಿ ಸ್ಥಾನ ನೀಡಬಹುದಿತ್ತು.

ಚೇತನ್ ಸಕಾರಿಯಾ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ ನಂತರ ಚೇತನ್ ಸಕರಿಯಾ ಹೈಲೈಟ್ ಆದ್ರು. ಈ ಕಾರಣದಿಂದಾಗಿ, ಅವರನ್ನು 2021 ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಆಯ್ಕೆ ಮಾಡಿತು.
ಅವರ ಮೊದಲ IPL ಅಭಿಯಾನದಲ್ಲಿ, ಅವರು ಕೇವಲ 12 ಪಂದ್ಯಗಳಲ್ಲಿ 8.17 ಎಕಾನಮಿಯೊಂದಿಗೆ 14 ವಿಕೆಟ್‌ಗಳನ್ನು ಪಡೆದರು. ವಾಸ್ತವವಾಗಿ, ಈ ಎಡಗೈ ವೇಗಿ ತನ್ನ ಸ್ವಿಂಗ್ ಮತ್ತು ವೇಗದಿಂದ ಪ್ರಭಾವಶಾಲಿಯಾಗಿದ್ದಾನೆ.
ಒಂದೆರಡು ತಿಂಗಳ ಹಿಂದೆ, ಅವರು ಶ್ರೀಲಂಕಾ ವಿರುದ್ಧ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಮತ್ತು ಅಲ್ಲಿ, ಅವರು ಕೇವಲ 9.27 ರ ಎಕಾನಮಿಯಲ್ಲಿ ಎರಡು ಪಂದ್ಯಗಳಲ್ಲಿ ಒಂಟಿಯಾಗಿ ವಿಕೆಟ್ ಪಡೆದರು. ಈತ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡಿದ್ದಾರೆ.

ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ, 2020 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅವರ ಅದ್ಭುತ ಐಪಿಎಲ್ ಪ್ರದರ್ಶನ ನೀಡುತ್ತಿರುವ ಪಡಿಕ್ಕಲ್ ಕೂಡ ಆಯ್ಕೆದಾರರ ಮನಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಈತ ಕೇವಲ 14 ಪಂದ್ಯಗಳಲ್ಲಿ 411 ರನ್ ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧ 101* ಬೆಸ್ಟ್ ಸ್ಕೋರ್ ಆಗಿದೆ.

ಶೆಲ್ಡನ್ ಜಾಕ್ಸನ್
ಸೌರಾಷ್ಟ್ರ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಶೆಲ್ಡನ್ ಜಾಕ್ಸನ್ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಅವರ ಇತ್ತೀಚಿನ ಪ್ರದರ್ಶನದಿಂದಾಗಿ ಮಿಂಚಿದ್ರು. ಬಲಗೈ ಆಟಗಾರ ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಭರ್ಜರಿ ಅರ್ಧಶತಕಗಳ ಹ್ಯಾಟ್ರಿಕ್ ಮಾಡಿದರು. (79*, 70, 62*).
ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಸರಾಸರಿ ಹೊಂದಿರುವ ಈತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಆಯ್ಕೆಯನ್ನು ಎದುರು ನೋಡುತ್ತಿದ್ದರು. ಆದರೆ ಆಯ್ಕೆಗಾರರು ಇವರ ಕಡೆ ಮನಸ್ಸು ಮಾಡಿದಂತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications