Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಪಿಯಲ್ಲಿ ಆಡುತ್ತಿದ್ದಾರೆ ಐಪಿಎಲ್‌ನ 6 ಮಂದಿ ಸ್ಟಾರ್ ಕ್ರಿಕೆಟಿಗರು

ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುತ್ತಿರುವ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಈಗಾಗಲೇ ಆರಂಭವಾಗಿದ್ದು ಪಂದ್ಯಗಳು ತೀವ್ರ ಪೈಪೋಟಿಯಿಂದ ನಡೆಯುತ್ತಿದೆ. ಕರ್ನಾಟಕದ ಆರು ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳು ಈ ಟೂರ್ನಿಯಲ್ಲಿ ಪೈಪೊಟಿ ನಡೆಸುತ್ತಿದ್ದು ಅಭಿಮಾನಿಗಳನ್ನು ಮನರಂಜಿಸುವುದರಲ್ಲಿ ಯಶಸ್ವಿಯಾಗುತ್ತಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಸುದೀರ್ಘ ಕಾಲದಿಂದ ದೊಡ್ಡ ಮಟ್ಟದ ಯಶಸ್ಸು ಸಾಧಿಸಿಕೊಂಡು ಬರುತ್ತಿದೆ. ರಾಜ್ಯದ ಅನೇಕ ಪ್ರತಿಭಾನ್ವಿತ ಆಟಗಾರರು ಭಾರತ ತಂಡದಲ್ಲಿ ಪ್ರತಿನಿಧಿಸಿಕೊಂಡು ಬಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿಯೂ ಭಾರತದ ಸಾಕಷ್ಟು ಆಟಗಾರರು ಮಿಂಚುತ್ತಿದ್ದಾರೆ. ಇನ್ನು ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಆಡುತ್ತಿರುವ ಆರು ಮಂದಿ ಐಪಿಎಲ್ ಸ್ಟಾರ್‌ಗಳು ಯಾರು ಎನ್ನುವುದನ್ನು ನೋಡೋಣ. ಮುಂದೆ ಓದಿ..

These 6 IPL stars currently playing in KSCAs Maharaja T20 trophy

ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಮಯಾಂಕ್ ಅಗರ್ವಾಲ್ ಮಹಾರಾಜ ಟ್ರೋಫಿಯ ಸ್ಟಾರ್ ಆಟಗಾರರಲ್ಲಿ ಒಬ್ಬರು. ಈ ಟೂರ್ನಿಯಲ್ಲಿ ಮಯಾಂಕ್ ಬೆಂಗಳೂರು ಮೂಲದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕನಾಗಿದ್ದಾರೆ. ಮಯಾಂಕ್ ಅಗರ್ವಾಲ್ ಬೆಂಗಳೂರು ತಂಡದ ಪ್ರಮುಖ ಬ್ಯಾಟಿಂಗ್ ಆಧಾರಸ್ಥಂಭವೂ ಹೌದು

ಯುವ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ದೇವದತ್ ಪಡಿಕ್ಕಲ್ ಕೂಡ ಮಹಾರಾಜ ಟ್ರೋಫಿಯ ಭಾಗವಾಗಿದ್ದಾರೆ. ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಸದಸ್ಯರಾಗಿರುವ ಪಡಿಕ್ಕಲ್ ಮೇಲೆ ತಂಡದ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಇನ್ನು 2022ರಲ್ಲಿ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗುವ ಮುನ್ನ ಪಡಿಕ್ಕಲ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.

ಆರ್‌ಸಿಬಿ ವೇಗಿ ವಿ ವೈಶಾಕ್

ಕರ್ನಾಟಕದ ವೇಗದ ಬೌಲರ್ ವಿಜಯ್‌ಕುಮಾರ್ ವೈಶಾಕ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡು ಮಿಂಚಿದ್ದರು. ಆರ್‌ಸಿಬಿ ಪರವಾಗಿ ಆಡಿದ್ದ ವಿಜಯ್‌ಕುಮಾರ್ ವೈಶಾಕ್ ಸಾಕಷ್ಟು ಭರವಸೆ ಮೂಡಿಸಿದ್ದರು. ಮಹಾರಾಜ ಟ್ರೋಫಿಯಲ್ಲಿ ವೈಶಾಕ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅನುಭವಿ ಆಟಗಾರ ಮನೀಶ್ ಪಾಂಡೆ

ಐಪಿಎಲ್‌ನ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ಆಟಗಾರ ಮನೀಶ್ ಪಾಂಡೆ ಈಗಲೂ ಸಾಕಷ್ಟು ಬೇಡಿಕೆಯಿರುವ ಕ್ರಿಕೆಟಿಗ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದರು. ಇನ್ನು ಮಹಾರಾಜ ಟ್ರೋಫಿಯಲ್ಲಿ ಮನೀಶ್ ಅತ್ಯಂತ ಅನುಭವಿ ಆಟಗಾರ ಎನಿಸಿಕೊಂಡಿದ್ದು ಹುಬ್ಳಿ ಟೈಗರ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಲ್‌ರೌಂಡರ್ ಕೃಷ್ಣಪ್ಪ ಗೌತಮ್

ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಅನುಭವಿ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಿರುವ ಕೃಷ್ಣಪ್ಪ ಗೌತಮ್. ಆಫ್ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಈ ಅನುಭವಿ ಆಟಗಾರ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅನುಭವಿ ಕ್ರಿಕೆಟಿಗ ಕರುಣ್ ನಾಯರ್

ಕರ್ನಾಟಕದ ಮತ್ತೋರ್ವ ಅನುಭವಿ ಆಟಗಾರ ಕರುಣ್ ನಾಯರ್ ಸುದೀರ್ಘ ಕಾಲದಿಂದ ಐಪಿಎಲ್‌ನಲ್ಲಿ ಆಡಿಕೊಂಡು ಬರುತ್ತಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಿದ್ದರು. ಮಹಾರಾಜ ಟ್ರೋಫಿಯಲ್ಲಿ ಕರುಣ್ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

Story first published: Saturday, August 19, 2023, 19:13 [IST]
Other articles published on Aug 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+