Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ T20ಯಲ್ಲಿ ಇವರು ಶತಕ ವೀರರು: ಆದರೆ ಐಪಿಎಲ್‌ನಲ್ಲಿ ಶೂನ್ಯ ಸಾಧನೆ!

ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಸಾಕಷ್ಟು ಟಿ20 ಲೀಗ್‌ಗಳು ಇದ್ದರೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ನಂಬರ್ 1 ಲೀಗ್ ಆಗಿ ಸ್ಥಾನವನ್ನು ಪಡೆದುಕೊಂಡಿದೆ. ಐಪಿಎಲ್‌ನ ಸಾರ್ವಬೌಮತ್ವಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಹೀಗಾಗಿಯೇ ಕ್ರಿಕೆಟ್ ಆಡುವ ಪ್ರತಿಯೊಬ್ಬರು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಕನಸು ಕಾಣುವುದು ಸಹಜ. ಇಂಥಾ ಐಪಿಎಲ್ ಪ್ರತಿ ವರ್ಷ ಕೂಡ ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಹೆಚ್ಚು ಪೈಪೋಟಿಯ ಟೂರ್ನಿಯಾಗಿ ಬೆಳೆಯುತ್ತಲೇ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳು ಅನೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ವೀಕ್ಷಕರನ್ನು ಹೊಂದಿದೆ ಎಂಬುದನ್ನು ಅಂಕಿಅಂಶಗಳೇ ಬಹಿರಂಗಪಡಿಸುತ್ತವೆ. ಹಾಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನ ವಿಶ್ವದ ಯಾವುದೇ ಲೀಗ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗಿಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ ಎಂಬುದು ಕೂಡ ಸತ್ಯ.

These 6 star cricketers hit century in T20I cricket never scored hundred in IPL

ಹಾಗಿದ್ದರೂ ಕೆಲ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರೂ ಐಪಿಎಲ್ ಟೂರ್ನಿಯಲ್ಲಿ ಆ ಪ್ರದರ್ಶನವನ್ನು ನೀಡಲು ಸಾಧ್ಯವಾಗಿಲ್ಲ. ಈ ವರದಿಯಲ್ಲಿ ಅಂಥಾದ್ದೇ ಕುತೂಹಲಕಾರಿ ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಬಾರಿಸಿದ್ದರೂ ಐಪಿಎಲ್‌ನಲ್ಲಿ ಶತಕವನ್ನು ಬಾರಿಸಲು ಈವರೆಗೆ ವಿಫಲವಾಗಿರುವ ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

ದೀಪಕ್ ಹೂಡಾ ಬ್ಯಾಟ್‌ನಿಂದ ಸಿಡಿದಿಲ್ಲ ಐಪಿಎಲ್ ಶತಕ

ಟೀಮ್ ಇಂಡಿಯಾದ ಆಲ್‌ರೌಂಡರ್ ದೀಪಕ್ ಹೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೂಡಾ ಈವರೆಗೆ ಶತಕ ಸಿಡಿಸಲು ಸಾಧ್ಯವಾಗಿಲ್ಲ. ಅದರಲ್ಲೂ ಈ ಬಾರಿಯ ಆವೃತ್ತಿಯಲ್ಲಿ ಹೂಡಾ ಪ್ರದರ್ಶನ ಬಹಳ ಕಳಪೆಯಾಗಿದೆ.

ಲಂಕಾ ದಿಗ್ಗಜ ತಿಲಕರತ್ನೆ ದಿಲ್ಶನ್

ಶ್ರೀಲಂಕಾದ ಮಾಜಿ ಆರಂಬಿಕ ಆಟಗಾರ ತಿಲಕರತ್ನೆ ದಿಲ್ಶನ್ ಕೂಡ ಈ ಪಟ್ಟಿಯಲ್ಲಿದ್ದಾರೆ. 2011ರಲ್ಲಿ ದಿಲ್ಶನ್ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ್ದರು.ಆದರೆ ಸುದೀರ್ಘ ಕಾಲ ಐಪಿಎಲ್‌ನಲ್ಲಿ ಆಡಿದ್ದರೂ ಇಲ್ಲಿ ಮೂರಂಕಿಯ ಗಡಿದಾಟಲು ದಿಲ್ಶನ್‌ಗೆ ಸಾಧ್ಯವಾಗಲೇ ಇಲ್ಲ.

ಕಿವೀಸ್ ದಾಂಡಿಗ ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಸ್ಪೋಟಕ ಆಟಗಾರ ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಎರಡು ಶತಕವನ್ನು ಕೂಡ ಬಾರಿಸಿದ್ದಾರೆ. ಆದರೆ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರವಾಗಿ ಆಡಿದ್ದರೂ ಗಪ್ಟಿಲ್ ಶತಕ ಸಿಡಿಸಲು ಸಾಧ್ಯವಾಗಿಲ್ಲ.

ಆಸಿಸ್ ಮಾಜಿ ನಾಯಕ ಆರೋನ್ ಫಿಂಚ್

ಆಸ್ಟ್ರೇಲಿಯಾದ ಮಾಜಿ ವೈಟ್‌ಬಾಲ್ ನಾಯಕ ಆರೋನ್ ಫಿಂಚ್ ಸುದೀರ್ಘ ಕಾಲ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದಾರೆ. ಈ ಅವಧಿಯಲ್ಲಿ ಫಿಂಚ್ ಬಹುತೇಕ ಎಲ್ಲಾ ಫ್ರಾಂಚೈಸಿಗಳಲ್ಲಿಯೂ ಆಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದರೂ ಐಪಿಎಲ್‌ನಲ್ಲಿ ಒಂದೂ ಶತಕ ಫಿಂಚ್ ಬ್ಯಾಟ್‌ನಿಂದ ಬಂದಿಲ್ಲ.

ವಿಂಡಿಸ್ ಬ್ಯಾಟರ್ ಎವಿನ್ ಲೂಯೀಸ್

ವೆಸ್ಟ್ ಇಂಡೀಸ್ ಆಟಗಾರ ಎವಿನ್ ಲೂಯೀಸ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡು ಬಾರಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಸ್ಪೋಟಕ ಆಟಗಾರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗು ಆಡಿದ ಅನುಭವ ಹೊಂದಿದ್ದಾರೆ. ಆದರೆ ಒಮ್ಮೆಯೂ ಶತಕದ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಆರ್‌ಸಿಬಿ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್

ಕುತೂಹಲಕಾರಿ ಸಂಗತಿಯೆಂದರೆ ಆರ್‌ಸಿಬಿ ತಂಡದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಈವರೆಗೆ ಐಪಿಎಲ್‌ನಲ್ಲಿ ಶತಕವನ್ನು ಸಿಡಿಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ಮ್ಯಾಕ್ಸ್‌ವೆಲ್ ಒಟ್ಟು ಮೂರು ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಆದರೆ ಐಪಿಎಲ್‌ನಲ್ಲಿ ಶತಕದ ವಿಚಾರವಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರದ್ದು ಶೂನ್ಯ ಸಾಧನೆ.

Story first published: Wednesday, May 17, 2023, 10:50 [IST]
Other articles published on May 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+