ಏಷ್ಯಾ ಕಪ್‌ಗೆ ಮುನ್ನ ಇನ್ನೂ ಯೋ-ಯೋ ಟೆಸ್ಟ್‌ಗೆ ಹಾಜರಾಗದ 5 ಕ್ರಿಕೆಟಿಗರು ಯಾರು?; ಏನಿದು ಯೋ-ಯೋ ಟೆಸ್ಟ್?
2023ರ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದ ತಯಾರಿಯಲ್ಲಿದೆ. ತಂಡವು ಪ್ರಸ್ತುತ ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಯೋ-ಯೋ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಶಿಬಿರದಲ್ಲಿ ಭಾಗವಹಿಸಿದೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಯುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 18.7 ಸ್ಕೋರ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಇಲ್ಲಿಯವರೆಗೆ ಯೋ-ಯೋ ಟೆಸ್ಟ್‌ಗೆ ಹಾಜರಾದ ಎಲ್ಲಾ ಕ್ರಿಕೆಟಿಗರು 16.5ರ ಕಟ್-ಆಫ್ ಮಟ್ಟವನ್ನು ಉತ್ತೀರ್ಣರಾಗಿದ್ದಾರೆ ಮತ್ತು ವಿರಾಟ್ ಕೊಹ್ಲಿ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಪ್ರಕಾರ ಅತ್ಯುತ್ತಮ 17.2 ಅಂಕ ಗಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ಏಷ್ಯಾ ಕಪ್‌ಗಾಗಿ ಮೀಸಲು ಆಟಗಾರ) ಮತ್ತು ಕೆಎಲ್ ರಾಹುಲ್ ಈ ಐವರು ಕ್ರಿಕೆಟಿಗರನ್ನು ಬಿಟ್ಟು ಉಳಿದವರೆಲ್ಲರೂ ಯೋ-ಯೋ ಪರೀಕ್ಷೆಗೆ ಒಳಗಾಗಿದ್ದಾರೆ.
ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಆಟಗಾರರ ಭಾರತ ತಂಡವು ಆಲೂರಿನಲ್ಲಿ ಮುಚ್ಚಿದ-ಬಾಗಿಲಿನ ಶಿಬಿರದಲ್ಲಿ ಪಾಲ್ಗೊಂಡಿದೆ. ಈ ವೇಳೆ ಆಗಸ್ಟ್ 30ರಿಂದ ಪ್ರಾರಂಭವಾಗುವ ಏಷ್ಯಾ ಕಪ್ ಪಂದ್ಯಾವಳಿಗೆ ಮುಂಚಿತವಾಗಿ ತಂಡದ ಸದಸ್ಯರು ವಾಡಿಕೆಯ ಫಿಟ್‌ನೆಸ್ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ.
ಏನಿದು ಯೋ-ಯೋ ಟೆಸ್ಟ್?
ಯೋ-ಯೋ ಪರೀಕ್ಷೆಯು ಏರೋಬಿಕ್ ಸಹಿಷ್ಣುತೆ ಫಿಟ್‌ನೆಸ್ ಪರೀಕ್ಷೆಯಾಗಿದ್ದು, ನೀವು ಕೊನೆಯ ಬಾರಿ ಆಡಿದಾಗ ಮತ್ತು ಕಳೆದ ವಾರದಲ್ಲಿ ನೀವು ಎಷ್ಟು ಕೆಲಸದ ಹೊರೆಯನ್ನು ಅನುಭವಿಸಿದ್ದೀರಿ ಎಂಬುದರ ಫಲಿತಾಂಶಗಳನ್ನು ತಿಳಿಸಲಿದೆ.

"ಶುಭ್ಮನ್ ಗಿಲ್ ಅವರು ಈಗ 18.7ರ ಅತ್ಯಧಿಕ ಸ್ಕೋರ್ ಹೊಂದಿದ್ದಾರೆ. ಹೆಚ್ಚಿನ ಆಟಗಾರರು 16.5 ಮತ್ತು 18ರ ನಡುವೆ ಸ್ಕೋರ್ ಮಾಡಿದ್ದಾರೆ," ಎಂದು ಬಿಸಿಸಿಐನ ಅನಾಮಧೇಯ ಮೂಲಗಳು ಪಿಟಿಐಗೆ ತಿಳಿಸಿದೆ.
ಅಕ್ಟೋಬರ್‌ನಲ್ಲಿ ತವರಿನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ಮೊದಲು ಇದೊಂದೇ ಪ್ರಮುಖ ಪಂದ್ಯಾವಳಿಯಾಗಿದ್ದು, ಹೀಗಾಗಿ ಬಿಸಿಸಿಐ ಫಿಟ್‌ನೆಸ್ ಕಮ್ ಕಂಡೀಷನಿಂಗ್ ಶಿಬಿರವನ್ನು ಆಯೋಜಿಸಿದೆ.
"ಆಟಗಾರರು ಎರಡು ಪಂದ್ಯಾವಳಿಗಳ ನಡುವೆ ಅಂತರವನ್ನು ಹೊಂದಿದ್ದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯ ಕ್ರೀಡಾ ವಿಜ್ಞಾನ ತಂಡವು ಭಾರತ ತಂಡದ ಕ್ರೀಡಾ ಸಿಬ್ಬಂದಿಯೊಂದಿಗೆ ಎಲ್ಲಾ ಕಡ್ಡಾಯ ಪರೀಕ್ಷೆಗಳನ್ನು ನಡೆಸುತ್ತದೆ," ಎಂದು ಮೂಲಗಳು ಹೇಳಿವೆ.
ಹಿಂದಿನ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಗಿದ್ದ ಶಂಕರ್ ಬಸು ಅವರ ಅವಧಿಯಲ್ಲಿ, ಆರು ವರ್ಷಗಳ ಹಿಂದೆ ಯೋ-ಯೋ ಪರೀಕ್ಷೆಯನ್ನು ಪರಿಚಯಿಸಲಾಗಿತ್ತು. ಆಗ ಕಟ್-ಆಫ್ ಸ್ಕೋರ್ 16.1 ಆಗಿತ್ತು. ಆದರೆ ಅಂದಿನಿಂದ ಮಾರ್ಕ್ ಅನ್ನು ನವೀಕರಿಸಲಾಗಿದೆ ಮತ್ತು ಸದ್ಯ ಅದು 16.5 ಆಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಬಹುತೇಕ ಯುವ ಆಟಗಾರರು ತುಂಬಾ ಫಿಟ್ ಆಗಿದ್ದಾರೆ ಕಾಣಬಹುದು. ಐಪಿಎಲ್ ಆರಂಭವಾದಾಗಿನಿಂದ ತಡೆರಹಿತ ಕ್ರಿಕೆಟ್‌ನಲ್ಲಿ ಆಡಿರುವುದನ್ನು ಪರಿಗಣಿಸಿದರೆ ಶುಭ್ಮನ್ ಗಿಲ್ ಅವರ 18.7 ಸ್ಕೋರ್ ಇದಕ್ಕೆ ಸಾಕ್ಷಿಯಾಗಿದೆ. ಮಾರ್ಚ್‌ನಿಂದ ಅವರು ಪಡೆದ ಮೊದಲ ಬ್ರೇಕ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications