T20 World Cup 2022: ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವಿರುವ ಐವರು ಆಟಗಾರರು ಇವರು

ಎಂಟನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಬಾರಿ ನಡೆಯಲಿರುವ ಈ ಟೂರ್ನಿಯಲ್ಲಿ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳು ಅಕ್ಟೋಬರ್ 16 ರಂದು ಪ್ರಾರಂಭವಾಗುತ್ತದೆ ಮತ್ತು ಮುಖ್ಯ ಪಂದ್ಯಾವಳಿ ಅಕ್ಟೋಬರ್ 22 ರಂದು ಪ್ರಾರಂಭವಾಗುತ್ತದೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
2022ರಲ್ಲಿ ಅನೇಕ ಯುವ ಆಟಗಾರರು ತಮ್ಮ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಾತ್ರವಲ್ಲದೆ ಕಡಿಮೆ ಸಮಯದಲ್ಲಿ ತಮ್ಮ ತಂಡದ ಗೆಲುವಿನಗಾಗಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಇವರ ಮೇಲೆ ಅಪಾರ ಭರವಸೆ ಇಟ್ಟುಕೊಂಡು ಮಹತ್ವದ ಟೂರ್ನಿಗೆ ತಂಡಗಳಲ್ಲಿ ಸ್ಥಾನ ನೀಡಲಾಗಿದೆ.
ತಮ್ಮ ಉತ್ತಮ ಪ್ರದರ್ಶನದಿಂದ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಈ ಯುವ ಆಟಗಾರರಿಗೆ ಇದೆ. ಮಹತ್ವದ ಈ ಪಂದ್ಯಾವಳಿಯಲ್ಲಿ ತಮ್ಮ ಪ್ರಭಾವ ಬೀರಲು ಕಾಯುತ್ತಿರುವ ಪ್ರಮುಖ ಐವರು ಆಟಗಾರರ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ವಿಶ್ವಕಪ್‌ಗೂ ಮುನ್ನ ನಡೆದ ಸರಣಿಗಳಲ್ಲಿ ಇವರ ಪ್ರದರ್ಶನ ಇವರ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಭಾರತದ ಯುವ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್
ಭಾರತ ಪರವಾಗಿ ಸದ್ಯ ಭರವಸೆ ಇಡಬಲ್ಲ ವೇಗದ ಬೌಲರ್ ಎಂದರೆ ಅದು ಅರ್ಷ್‌ದೀಪ್ ಸಿಂಗ್. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ನೀಡಿದ ಪ್ರದರ್ಶನ ಅದಕ್ಕೆ ಸಾಕ್ಷಿ.
ಇದುವರೆಗೂ 13 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅರ್ಷ್‌ದೀಪ್ ಸಿಂಗ್ 19.78 ರ ಸರಾಸರಿಯಲ್ಲಿ 19 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ, ಎಕಾನಮಿ ದರ 8.14 ಸ್ವಲ್ಪ ಹೆಚ್ಚಾಗಿದೆ. ಅರ್ಷ್‌ದೀಪ್ ಪವರ್-ಪ್ಲೇ ಮತ್ತು ಅಂತಿಮ ಓವರ್‌ಗಳನ್ನು ಬೌಲ್ ಮಾಡುವುದು ಹೆಚ್ಚಿನ ರನ್ ಬಿಟ್ಟುಕೊಡುವುದಕ್ಕೆ ಕಾರಣವಾಗಿದೆ.
ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿ ಕೇವಲ ಮೂರು ತಿಂಗಳಾಗಿದೆ ಮತ್ತು ನಿರ್ಣಾಯಕ ಅಂತಿಮ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಶ್‌ದೀಪ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
IND vs SA 2022: ಎರಡನೇ ಪಂದ್ಯದಲ್ಲಿ ಈ ಆರ್ಸಿಬಿ ಆಟಗಾರನಿಗೆ ಅವಕಾಶ ನೀಡಿ ಎಂದ ವಾಸಿಂ ಜಾಫರ್

ಆಸ್ಟ್ರೇಲಿಯಾದ ಟಿಮ್ ಡೇವಿಡ್
ಟಿಮ್ ಡೇವಿಡ್ 20 ಸೆಪ್ಟೆಂಬರ್ 2022 ರಂದು ಭಾರತೀಯ ತಂಡದ ವಿರುದ್ಧ ಟಿ20 ಕ್ರಿಕೆಟ್‌ಗೆ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದರು. ಸರಣಿಯ ಮೂರನೇ ಪಂದ್ಯದಲ್ಲಿ 27 ಎಸೆತಗಳಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿಗಳೊಂದಿಗೆ 54 ರನ್ ಗಳಿಸಿದರು.
ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 42 ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆ ಹಾಕಲು ಕಾರಣವಾಗಿದ್ದರು. ಆಸ್ಟ್ರೇಲಿಯಾ ಪರವಾಗಿ 5 ಟಿ20 ಪಂದ್ಯಗಳನ್ನಾಡಿರುವ ಅವರು 170.59 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟಿಮ್ ಡೇವಿಡ್ ಆಸ್ಟ್ರೇಲಿಯಕ್ಕೆ ಫಿನಿಶರ್ ಆಗುವ ನಿರೀಕ್ಷೆಯಿದೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಬ್ಯಾಟಿಂಗ್‌ಗೆ ಡೇವಿಡ್ ಹೆಸರಾಗಿದ್ದಾರೆ.

ಹ್ಯಾರಿ ಬ್ರೂಕ್ ಬಗ್ಗೆ ಹೆಚ್ಚಿದ ನಿರೀಕ್ಷೆ
ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನು ಕಡಿಮೆ ಮಾಡಿತ್ತು. ಆದರೆ, ಯುವ ಆಟಗಾರ ಹ್ಯಾರಿ ಬ್ರೂಕ್ ಈ ಕೊರತೆಯನ್ನು ಕಡಿಮೆ ಮಾಡುವ ರೀತಿ ಪ್ರದರ್ಶನ ನೀಡುತ್ತಿದ್ದಾರೆ.
ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಹ್ಯಾರಿ ಬ್ರೂಕ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆರು ಇನ್ನಿಂಗ್ಸ್‌ಗಳಲ್ಲಿ, 79.33 ಸರಾಸರಿಯೊಂದಿಗೆ 163.01 ಸ್ಟ್ರೈಕ್ ರೇಟ್‌ನಲ್ಲಿ 238 ರನ್ ಗಳಿಸಿದರು. ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 10 ಟಿ20 ಇನ್ನಿಂಗ್ಸ್‌ಗಳಲ್ಲಿ 43.29 ಸರಾಸರಿ ಹೊಂದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅವರು ಮಧ್ಯಮ ಓವರ್ ಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ವೇಗವಾಗಿ ರನ್ ಗಳಿಸಲು ನೆರವಾಗಲಿದ್ದಾರೆ ಎಂದು ನಂಬಲಾಗಿದೆ.

ಟ್ರಿಸ್ಟಾನ್ ಸ್ಟಬ್ಸ್ ಆಟದ ಮೇಲೆ ನಿರೀಕ್ಷೆ
ಟ್ರಿಸ್ಟಾನ್ ಸ್ಟಬ್ಸ್ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಪದಾರ್ಪಣೆ ಮಾಡಿದರು. ಸರಣಿಯ ಮೊದಲನೇ ಪಂದ್ಯದಲ್ಲೇ 28 ಎಸೆತಗಳಲ್ಲಿ 8 ಸಿಕ್ಸರ್, 2 ಬೌಂಡರಿ ಮೂಲಕ 72 ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಸ್ಟಬ್ಸ್ ಇಲ್ಲಿಯವರೆಗೆ 9 ಟಿ20 ಪಂದ್ಯಗಳನ್ನಾಡಿದ್ದಾರೆ. 28.40 ರ ಸರಾಸರಿಯಲ್ಲಿ 142 ರನ್ ಗಳಿಸಿದ್ದಾರೆ ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 191.89 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮಧ್ಯಮ ಕ್ರಮಾಂಕ ಮತ್ತು ಅಂತಿಮ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ
ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ 2022 ರ ಟಿ 20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಸೇರ್ಪಡೆಗೊಂಡಿರುವುದು ಆಶ್ಚರ್ಯಕರ. ಟಿ20 ವಿಶ್ವಕಪ್‌ಗೆ ಆಯ್ಕೆಯಾದಾಗ ಯಾನಿಕ್ ಕ್ಯಾರಿಯಾ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಆರು ಆವೃತ್ತಿಗಳಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ.
ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. ಮೊದಲ ಪಂದ್ಯದಲ್ಲಿ, ಅವರು ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪಡೆದರು ಮತ್ತು ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟರು.
2022 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಹೆಚ್ಚಿನ ಆಟಗಾರರು ಯಾನಿಕ್ ಕ್ಯಾರಿಯಾ ಬೌಲಿಂಗ್ ಅನ್ನು ಈವರೆಗೆ ಎದುರಿಸಿಲ್ಲ. ಇದೇ ಅಂಶ ಅವರಿಗೆ ವರದಾನವಾಗುವ ಸಾಧ್ಯತೆ ಇದ್ದು, ಸ್ಪಿನ್ ಮೋಡಿಯಿಂದ ಎದುರಾಳಿಗಳನ್ನು ಕಟ್ಟಿಹಾಕುವ ಯೋಜನೆಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications