Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AFG vs NZ: ನೋಯ್ಡಾ ಟೆಸ್ಟ್ ಪಂದ್ಯದ ಮೂರನೇ ದಿನವೂ ರದ್ದು

ಮೊದಲ ಬಾರಿಗೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯ ವಹಿಸಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಉಭಯ ತಂಡಗಳ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಾಟವೂ ಹಾಳಾಗಿದೆ.

ಮೊದಲೆರಡು ದಿನಗಳ ಪಂದ್ಯವು ತೇವದ ಕಾರಣದಿಂದ ರದ್ದಾಯಿತು. ಇಂದು ಪಂದ್ಯ ನಡೆಯಲಿದೆ ಕ್ರಿಕೆಟ್ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಈಗ ಅವರ ಭರವಸೆ ಮತ್ತೊಮ್ಮೆ ಹುಸಿಯಾಗಿದೆ. ಮಳೆಯಿಂದಾಗಿ ಮೂರನೇ ದಿನ ಆಟವೂ ರದ್ದಾಗಿದ್ದು, ಪಂದ್ಯದ ಟಾಸ್ ಕೂಡ ಇನ್ನೂ ನಡೆದಿಲ್ಲ.

Third day of Afghanistan vs New Zealand Test match cancelled

ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗ್ರೌಂಡ್‌ನ ಔಟ್‌ಫೀಲ್ಡ್ ನಿರಂತರ ಮಳೆಯಿಂದಾಗಿ ತುಂಬಾ ತೇವವಾಗಿದೆ. ಈ ಕಾರಣದಿಂದಾಗಿ ಅಲ್ಲಿ ಪಂದ್ಯವನ್ನು ನಡೆಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಂಪೈರ್ ಮತ್ತು ಮ್ಯಾಚ್ ರೆಫರಿ ಪರಿಸ್ಥಿತಿಯನ್ನು ಅವಲೋಕಿಸಿ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೂರನೇ ದಿನದ ಆಟವನ್ನು ರದ್ದುಗೊಳಿಸಿದ್ದಾರೆ. ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಈ ಟೆಸ್ಟ್ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ.

ಅಭಿಮಾನಿಗಳ ಆಕ್ರೋಶ

ಸತತ ಮೂರು ದಿನಗಳ ಕಾಲ ಟಾಸ್ ನಡೆಯದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಪಂದ್ಯ ರದ್ದಾದ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದೆ. ಇದೇ ವೇಳೆ ಬಿಸಿಸಿಐ ಕೂಡ ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊದಲ ಮೂರು ದಿನಗಳು ವ್ಯರ್ಥವಾದಾಗ ಉಳಿದ ಎರಡು ದಿನಗಳಲ್ಲಿ ಯಾವ ರೀತಿಯ ಆಟ ಆಡಲಾಗುತ್ತದೆ. ಇದಕ್ಕಿಂತ ಪಂದ್ಯವನ್ನೇ ರದ್ದುಗೊಳಿಸುವುದು ಉತ್ತಮ ಎಂಬ ಮಾತು ಕೇಳಿಬರುತ್ತಿವೆ.

ಒಳಚರಂಡಿ ವ್ಯವಸ್ಥೆ ಬಂದ್

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಗ್ರೇಟರ್ ನೋಯ್ಡಾ ಕ್ರಿಕೆಟ್ ಮೈದಾನದ ಒಳಚರಂಡಿ ವ್ಯವಸ್ಥೆ ಬಂದ್ ಆಗಿದೆ. ಸ್ಟೇಡಿಯಂನ ಸ್ವಲ್ಪ ಭಾಗ ಮಾತ್ರ ಮಳೆಯಿಂದ ಪಾರಾಗಿದೆ. ಇದು ತರಬೇತಿ ಪಿಚ್ ಮತ್ತು 30-ಯಾರ್ಡ್ ವೃತ್ತವನ್ನು ಒಳಗೊಂಡಿದೆ. ಮೊದಲ ದಿನ ಮಳೆಯಿಂದಾಗಿ ಟಾಸ್ ಕೂಡ ನಡೆಸಲು ಸಾಧ್ಯವಾಗಲಿಲ್ಲ.

ಆದರೆ ಎರಡನೇ ದಿನದಲ್ಲಿ ವಾತಾವರಣ ತಿಳಿಗೊಂಡಾಗ ಸಿಬ್ಬಂದಿಗೆ ಆಟಕ್ಕೆ ಮೈದಾನವನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಮೈದಾನದ ಸಿಬ್ಬಂದಿ ಕೂಡ ಮಿಡ್ ಆನ್ ಬಳಿ ಎರಡರಿಂದ ಮೂರು ಅಡಿ ಅಗೆದು ಒದ್ದೆಯಾದ ಔಟ್ ಫೀಲ್ಡ್ ಮೇಲೆ ಒಣ ಮಣ್ಣು ಮತ್ತು ಹುಲ್ಲು ಹಾಕಲು ಪ್ರಯತ್ನಿಸಿದರು. ಆದರೆ ಇದಾದ ನಂತರವೂ ಮೈದಾನವು ಪಂದ್ಯ ಆಡಲು ಸಿದ್ಧವಾಗಿಲ್ಲ. ಈಗ 4 ಮತ್ತು 5ನೇ ದಿನ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Story first published: Wednesday, September 11, 2024, 12:32 [IST]
Other articles published on Sep 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+