For Quick Alerts
ALLOW NOTIFICATIONS  
For Daily Alerts
 

ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ

Third umpire to call front-foot no-balls in the T20Is, ODIs

ಕ್ರಿಕೆಟ್‌ ಕಾಲದಿಂದ ಕಾಲಕ್ಕೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಬಂದಿದೆ. ಆಟದ ನಿಯಮದಲ್ಲಿ ಮಾತ್ರವಲ್ಲ ತಂತ್ರಜ್ಞಾನದ ವಿಷಯದಲ್ಲೂ ಈ ಬದಲಾವಣೆಗಳು ಸಾಕಷ್ಟು ನಡೆದಿದೆ. ಅಂತದ್ದೇ ಬದಲಾವಣೆಗೆ ನಾಳಿನ ಭಾರತ ಮತ್ತು ವೆಸ್ಟ್‌ಇಂಡೀಸ್ ಸಾಕ್ಷಿಯಾಗಲಿದೆ.

ಈ ಬದಲಾವಣೆ ಆಗಿರೋದು ನೋಬಾಲ್ ವಿಚಾರಕ್ಕೆ ಸಂಬಂಧಪಟ್ಟಂತೆ. ಕಳೆದ ಹಲವು ಸರಣಿಗಳಲ್ಲಿ ಅಂಫೈರ್‌ಗಳು ನೋಬಾಲ್ ನೀಡುವ ವಿಚಾರವಾಗಿ ತುಂಬಾ ಎಡವಿದ್ದಾರೆ. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಹೀಗಾಗಿ ಸಮಸ್ಯೆಗೆ ಐಸಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

ಇನ್ನು ಮುಂದೆ ಫ್ರಂಟ್‌ಫೂಟ್ ನೋಬಾಲ್ ಅನ್ನು ಅಂಗಳದಲ್ಲಿರುವ ಅಂಪೈರ್‌ಗಳು ನಿರ್ಧರಿಸುವಂತಿಲ್ಲ. ಪ್ರತೀ ಎಸೆತವನ್ನೂ ಥರ್ಡ್‌ ಅಂಪೈರ್ ಪರೀಕ್ಷಿಸಲಿದ್ದಾರೆ. ನೋಬಾಲ್ ಆದರೆ ಮೈದಾನದ ಅಂಪೈರನ್ನು ಸಂಪರ್ಕಿಸುವ ಮೂಲಕ ನೋಬಾಲ್ ಕೊಡಲು ಸೂಚಿಸುತ್ತಾರೆ. ಈ ರೀತಿಯಲ್ಲಿ ನೋಬಾಲ್ ಬಗ್ಗೆ ಎದ್ದಿರುವ ವಿವಾದಕ್ಕೆ ಅಂತ್ಯಹಾಡಲು ಐಸಿಸಿ ಮುಂದಾಗಿದೆ.

ಈ ಬಗ್ಗೆ ಐಸಿಸಿ ಅಧಿಕೃಕತ ಪ್ರಕಟಣೆಯಲ್ಲಿ ತಿಳಿಸಿದ್ದು, ಮೂರನೇ ಅಂಪೈರ್‌ ನಿರ್ದೇಶನವಿಲ್ಲದೆ ಮೈದಾನದಲ್ಲಿರುವ ಅಂಪೈರ್ ಫ್ರಂಟ್‌ಫೂಟ್ ನೋಬಾಲ್ ನೀಡುವ ಹಾಗಿಲ್ಲ ಎಂದಿದೆ. ಔಟ್‌ ಆದ ಸಂದರ್ಭದಲ್ಲಿ ಮೂರನೇ ಅಂಫೈರ್ ನೋಬಾಲ್ ಕರೆ ತಡವಾಗಿ ನೀಡಿದರೆ, ಅಂಪೈರ್ ಔಟ್‌ ನೀಡಿದ ತೀರ್ಪನ್ನು ಹಿಂಪಡೆದು ಆಟವನ್ನು ಮುಂದುವರಿಸಬೇಕಾಗಿದೆ. ಉಳಿದಂತೆ ಅಂಪೈರ್‌ಗಳ ಜವಾಬ್ಧಾರಿಗಳು ಈ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಐಸಿಸಿ ತಿಳಿಸಿದೆ.

2016ರ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿತ್ತು. ಇದೀಗ ಐಸಿಸಿ ಸಲಹಾ ಸಮಿತಿ ಮತ್ತೊಮ್ಮೆ ಪ್ರಾಯೋಗಿಕವಾಗಿ ಬಳಸಲು ಸಲಹೆಯನ್ನು ನೀಡಿದ ಕಾರಣ ನಾಳಿನ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಪ್ರಯೋಗವಾಗಲಿದೆ.

Story first published: Thursday, December 5, 2019, 19:10 [IST]
Other articles published on Dec 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+