For Quick Alerts
ALLOW NOTIFICATIONS  
For Daily Alerts
 

AFG vs ENG: ಇಂಗ್ಲೆಂಡ್ ಸೋಲಿಸಿದ ನಂತರ ಭಾರತದ ಈತನೇ 'ಸ್ಫೂರ್ತಿ' ಎಂದ ರಹಮಾನುಲ್ಲಾ ಗುರ್ಬಾಜ್

ಭಾನುವಾರ, ಅಕ್ಟೋಬರ್ 15ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು.

ಅಫ್ಘಾನಿಸ್ತಾನ ತಂಡದ ಪರ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅತ್ಯುತ್ತಮ ಲಯದಲ್ಲಿದ್ದರು. ಬ್ಯಾಟಿಂಗ್ ಆರಂಭಿಸಿದ ಗುರ್ಬಾಜ್ 57 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 80 ರನ್ ಗಳಿಸಿದರು. ಅವರ ಅದ್ಭುತ ಪ್ರದರ್ಶನ ಅಫ್ಘಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ಸಹಾಯ ಮಾಡಿತು.

ಪಂದ್ಯದ ನಂತರ, ಅಫ್ಘಾನಿಸ್ತಾನಿ ಕ್ರಿಕೆಟಿಗ ರಹಮಾನುಲ್ಲಾ ಗುರ್ಬಾಜ್ ಅವರು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರೇ 'ಸ್ಫೂರ್ತಿ' ಎಂದು ಒಪ್ಪಿಕೊಂಡರು ಮತ್ತು ಸಮಕಾಲೀನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದರು.

rahmanullah-gurbaz

"ವಿರಾಟ್ ಕೊಹ್ಲಿ ವಿಶ್ವದ ಪ್ರತಿಯೊಬ್ಬ ಯುವ ಆಟಗಾರನಿಗೆ ಸ್ಫೂರ್ತಿಯಾಗಿದ್ದಾರೆ. ಆಟಗಾರರು ಅವರನ್ನು ನೋಡುತ್ತಾರೆ ಮತ್ತು ಅವರು ಆಟದ ಯೋಜನೆ, ಇನ್ನಿಂಗ್ಸ್ ಅನ್ನು ಹೇಗೆ ನಿರ್ಮಿಸಬೇಕು ಮತ್ತು ದೊಡ್ಡ ರನ್ ಗಳಿಸುವುದು ಹೇಗೆ ಎಂಬುದರ ಕುರಿತು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ," ಎಂದು ರಹಮಾನುಲ್ಲಾ ಗುರ್ಬಾಜ್ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಹಲವು ಏಕಪಕ್ಷೀಯ ಪಂದ್ಯಗಳ ನಂತರ, ತೀವ್ರ ಪೈಪೋಟಿಯುತ ಗೆಲುವಿಗಾಗಿ ಹಂಬಲಿಸುತ್ತಿದ್ದರು. ಆದರೆ ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್‌ ವಿರುದ್ಧ 69 ರನ್‌ಗಳ ಗೆಲುವಿನೊಂದಿಗೆ ಅದೇ ರೀತಿ ಫಲಿತಾಂಶ ನೋಡುವಂತಾಯಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 26,440 ಪ್ರೇಕ್ಷಕರ ಉತ್ತಮ ಬೆಂಬಲದೊಂದಿಗೆ, ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅರ್ಧಶತಕಗಳ ನೆರವಿನಿಂದ ಅಫ್ಘಾನಿಸ್ತಾನ ತಂಡವು 49.5 ಓವರ್‌ಗಳಲ್ಲಿ 284 ರನ್‌ಗಳಿಗೆ ಸಾಗಿಸಿದರು.

rahmanullah-gurbaz

ನಂತರ ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಮತ್ತು ಮುಜೀಬ್ ಉರ್ ರಹಮಾನ್ ಆಕರ್ಷಕ ಬೌಲಿಂಗ್ ಪ್ರದರ್ಶನ ನೀಡಿ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು 40.5 ಓವರ್ ಗಳಲ್ಲಿ 215 ರನ್‌ಗಳಿಗೆ ನಿಯಂತ್ರಿಸಿದರು.

ಈ ಮೂಲಕ ಅಫ್ಘಾನಿಸ್ತಾನವು ಇಲ್ಲಿಯವರೆಗಿನ ಅವರ ಏಕದಿನ ಇತಿಹಾಸದ ಅತಿದೊಡ್ಡ ಗೆಲುವಿನೊಂದಿಗೆ ವಿಶ್ವಕಪ್‌ಗಳಲ್ಲಿ ತಮ್ಮ 14-ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು. ಐಸಿಸಿ ಪಂದ್ಯಾವಳಿಯಲ್ಲಿ ಮತ್ತು ಕ್ರಿಕೆಟ್ ಜಗತ್ತಿಗೆ ಶಾಕಿಂಗ್ ಸುದ್ದಿ ನೀಡಿತು.

ಅಫ್ಘಾನಿಸ್ತಾನ ಇದೀಗ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದೆ. ಇಂಗ್ಲೆಂಡ್‌ ತಂಡದ ನಂತರದ ಸ್ಥಾನದಲ್ಲಿ ಇದ್ದು, ಆಸ್ಟ್ರೇಲಿಯಾ ಹತ್ತು ತಂಡಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ದುರ್ಬಲ ಎನಿಸಿದ್ದ ಅಫ್ಘಾನಿಸ್ತಾನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ. ಇದೇ ವೇಳೆ ಅಫ್ಘಾನಿಸ್ತಾನ ತಂಡಕ್ಕೆ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಗೆಲುವು ಇದಾಗಿದೆ.

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಟೆಸ್ಟ್ ಆಡುವ ಎಲ್ಲಾ 11 ದೇಶಗಳ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಮೊದಲ ತಂಡವೆಂಬ ಕುಖ್ಯಾತಿಗೆ ಒಳಗಾಗಿದೆ.

Story first published: Monday, October 16, 2023, 15:13 [IST]
Other articles published on Oct 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+