For Quick Alerts
ALLOW NOTIFICATIONS  
For Daily Alerts
 

'ಇದು ಕ್ರಿಕೆಟ್, ಯುದ್ಧವಲ್ಲ'; ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಹ್ಯಾರಿಸ್ ರೌಫ್ ಹೀಗೆ ಹೇಳಿದ್ದೇಕೆ?

ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ.

ಈಗಾಗಲೇ ವಿಶ್ವದ ದೊಡ್ಡ ಕ್ರಿಕೆಟ್ ಪಂದ್ಯಾವಳಿಗೆ ಹಲವು ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಕೆಲವೇ ದಿನಗಳಲ್ಲಿ ಎಲ್ಲಾ ಹತ್ತು ತಂಡಗಳು ಭಾರತಕ್ಕೆ ಆಗಮಿಸಲಿವೆ ಮತ್ತು ಈ ಟೂರ್ನಿಗಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಕಳೆದ ವಿಶ್ವಕಪ್‌ನ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ರೋಚಕ ಉದ್ಘಾಟನಾ ಪಂದ್ಯ ನಡೆಯಲಿದೆ.

this-is-cricket-not-war-haris-rauf-reacts


ಇದೇ ವೇಳೆ ಭಾರತ ವಿರುದ್ಧದ ಪಂದ್ಯಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಆಕ್ರಮಣಕಾರಿ ಕೊರತೆಯ ಬಗ್ಗೆ ವೇಗಿ ಹ್ಯಾರಿಸ್ ರೌಫ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪಾಕಿಸ್ತಾನದ ವೇಗದ ಬೌಲರ್ ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡರು.

ಭಾರತಕ್ಕೆ ತಂಡ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಹ್ಯಾರಿಸ್ ರೌಫ್, ಪಾಕಿಸ್ತಾನ ತಂಡವು ಭಾರತದ ವಿರುದ್ಧ ಯುದ್ಧ ಮಾಡಲು ಹೊರಟಿಲ್ಲ. ಆದರೆ ಕ್ರಿಕೆಟ್ ಪಂದ್ಯವನ್ನು ಆಡಲು ಹೊರಟಿದೆ ಎಂದು ಹೇಳಿದರು.

"ನಾವೇಕೆ ಹೋಗಿ ಭಾರತೀಯರ ಜೊತೆ ಹೋರಾಡಬೇಕು? ಇದು ಕ್ರಿಕೆಟ್ ಮತ್ತು ಯುದ್ಧವಲ್ಲ," ಎಂದು 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಹ್ಯಾರಿಸ್ ರೌಫ್ ಆಕ್ರಮಣಶೀಲತೆಯ ಪ್ರಶ್ನೆಗೆ ಉತ್ತರಿಸಿದರು.

ಭುಜದ ಗಾಯದಿಂದಾಗಿ ಹ್ಯಾರಿಸ್ ರೌಫ್ ಅವರು 2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಕೊನೆಯ ಸೂಪರ್ 4 ಪಂದ್ಯದಿಂದ ಹೊರಗುಳಿದಿದ್ದರು. ಇದೀಗ 2023ರ ವಿಶ್ವಕಪ್‌ಗೆ ಹೋಗಲು ಮತ್ತು ಆಡಲು ತಾವು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎಂದು ಹ್ಯಾರಿಸ್ ರೌಫ್ ಸ್ಪಷ್ಟಪಡಿಸಿದರು.

"ನಮ್ಮ ದೇಶಕ್ಕಾಗಿ ಯಾವುದೇ ಪಂದ್ಯಾವಳಿಯಲ್ಲಿ ಆಡುವುದು ದೊಡ್ಡ ವಿಷಯ. ನನ್ನ ಫಿಟ್ನೆಸ್ ಮೊದಲಿಗಿಂತ ಉತ್ತಮವಾಗಿದೆ. ಒಂದು ತಂಡವಾಗಿ ನಮ್ಮ ಮೇಲೆ ನಮಗೆ ವಿಶ್ವಾಸವಿದೆ. ನನಗೆ ಹೊಸ ಚೆಂಡನ್ನು ನೀಡಬೇಕೋ ಅಥವಾ ಹಳೆಯ ಚೆಂಡನ್ನು ನೀಡಬೇಕೋ ಎಂಬುದನ್ನು ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸುತ್ತದೆ," ಎಂದು ಪಾಕಿಸ್ತಾನ ವೇಗದ ಬೌಲರ್ ಹ್ಯಾರಿಸ್ ರೌಫ್ ತಮ್ಮ ಫಿಟ್‌ನೆಸ್ ಬಗ್ಗೆ ಹೇಳಿದರು

"ವಿಶ್ವಕಪ್‌ಗಾಗಿ ನಾನು ಯಾವುದೇ ನಿರ್ದಿಷ್ಟ ಗುರಿಯನ್ನು ಹೊಂದಿಲ್ಲ. ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ," ಎಂದು ಹ್ಯಾರಿಸ್ ರೌಫ್ ತಿಳಿಸಿದರು.

ಇನ್ನು ಇಡೀ ವಿಶ್ವಕಪ್ ಪಂದ್ಯಾವಳಿಯಿಂದ ಯುವ ವೇಗಿ ನಸೀಮ್ ಶಾ ಹೊರಗುಳಿದ ನಂತರ, ಪಾಕಿಸ್ತಾನ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದೆ.

2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಘಟಕ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಸಾಗುತ್ತಿದೆ ಮತ್ತು ಪಂದ್ಯಾವಳಿಯ ಸೂಪರ್ 4 ಹಂತದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಆಲೌಟ್ ಆಯಿತು.

2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ

ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಅಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್.

ಪ್ರಯಾಣ ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್.

Story first published: Monday, September 25, 2023, 22:47 [IST]
Other articles published on Sep 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+