ಮತ್ತೊಂದು ವಿಶ್ವಕಪ್ ಆಡಲು ರೋಹಿತ್ ಶರ್ಮಾ ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್; ಆದರೆ, ಒಂದು ಕಂಡೀಶನ್ ಅಪ್ಲೈ!
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಮುಗ್ಗರಿಸಿತು. ಈ ಮೂಲಕ 12 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆಲ್ಲುವ ಅಮೂಲ್ಯ ಅವಕಾಶವನ್ನು ಕೈಚೆಲ್ಲಿತು.
ವಿಶ್ವಕಪ್ ಸೋಲು ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹತಾಶೆಗೆ ದೂಡಿದೆ. ಅವರ ಮುಂದಿನ ಕ್ರಿಕೆಟ್ ಭವಿಷ್ಯ ಮಂಕಾಗಿದೆ. ಇದಕ್ಕೆ ಅವರ ವಯಸ್ಸು ಮತ್ತು ಫಿಟ್ನೆಸ್ ಕಾರಣವಾಗಿದೆ.

ಇದೇ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರು ಮತ್ತೊಂದು ವಿಶ್ವಕಪ್ ಆಡಬಹುದು ಎಂದು ಶ್ರೀಲಂಕಾದ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ 36 ವರ್ಷದ ರೋಹಿತ್ ಶರ್ಮಾ, ಭಾರತವು ಮುಂದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಡುವ ಹೊತ್ತಿಗೆ ಒಂದು ವರ್ಷ ವಯಸ್ಸಾಗಿರುತ್ತದೆ. ಜೂನ್ 2024ರಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಆಯೋಜಿಸಲಿದೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಂತೆ ಫಿಟ್‌ನೆಸ್‌ನಲ್ಲಿ ರೋಹಿತ್ ಶರ್ಮಾ ಶ್ರಮಿಸಿದರೆ, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮುತ್ತಯ್ಯ ಮುರಳೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಕೂಡ ಮುಂದಿನ ವರ್ಷ ಟಿ20 ವಿಶ್ವಕಪ್ ಆಡುವ ಬಗ್ಗೆ ಯೋಚಿಸುತ್ತಿರಬೇಕು ಎಂದು ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ.

"ನೀವು ರೋಹಿತ್ ಶರ್ಮಾ ಅವರ ಏಕದಿನ ವಿಶ್ವಕಪ್ ಪ್ರದರ್ಶನವನ್ನು ಗಮನಿಸಿ. ಅವರು ನೀಡಿದ ಆರಂಭಗಳು, ಅವರು ಬ್ಯಾಟ್ ಮಾಡಿದ ರೀತಿಯ ಸ್ಟ್ರೈಕ್ ರೇಟ್, ರೋಹಿತ್ ಈ ಪಂದ್ಯಾವಳಿಯಲ್ಲಿ ಎಂದಿಗೂ ವಿಫಲರಾಗಲಿಲ್ಲ. ಅವನಿಗೆ ಈಗ ಕೇವಲ 36 ವರ್ಷ, ಅದು ಸಣ್ಣದು. ಅವರು ವಿರಾಟ್ ಕೊಹ್ಲಿ ಅವರಂತೆ ಫಿಟ್ನೆಸ್‌ನಲ್ಲಿ ಶ್ರಮ ವಹಿಸಿದರೆ, ಅವರು ಮತ್ತೊಂದು ವಿಶ್ವಕಪ್ ಆಡಬಹುದು," ಎಂದು ಮುತ್ತಯ್ಯ ಮುರಳೀಧರನ್ ಜಿಯೋಸಿನಿಮಾದೊಂದಿಗೆ ಮಾತನಾಡಿದರು
"ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ 130ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದ್ದಾರೆ. ಇದು ಟಿ20 ಕ್ರಿಕೆಟ್‌ಗೆ ಕೆಟ್ಟದ್ದಲ್ಲ. ಅವರು ಅನುಭವಿ ಆಟಗಾರನಾಗಿದ್ದು, 35ರ ನಂತರ ನಿಮ್ಮ ಫಿಟ್ನೆಸ್ ಮೇಲೆ ನೀವು ಹೆಚ್ಚು ಶ್ರಮಿಸಬೇಕು. ಅವರಿಗೆ ಆಸೆ ಇದ್ದರೆ, ಆಡುತ್ತಾರೆ. ರೋಹಿತ್ ಖಂಡಿತವಾಗಿಯೂ ಇನ್ನೊಂದು ವಿಶ್ವಕಪ್ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಅವನ ಮನಸ್ಸಿನಲ್ಲಿಯೂ ಇದೆ," ಎಂದು ಶ್ರೀಲಂಕಾ ಮಾಜಿ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.
2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ, ರೋಹಿತ್ ಶರ್ಮಾ ಭಾರತ ತಂಡಕ್ಕಾಗಿ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ ಎಂಬುದು ಗಮನಾರ್ಹ ಸಂಗತಿ.
ಭಾರತ ಕ್ರಿಕೆಟ್ ತಂಡವು ಟಿ20 ತಂಡದಲ್ಲಿ ಸಾಧ್ಯವಾದಷ್ಟು ಯುವ ಆಟಗಾರರನ್ನು ಸೇರಿಸಲು ಬಯಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಫಾರ್ಮ್ ಅವರನ್ನು 2024ರ ಟಿ20 ಮೆಗಾ ಟೂರ್ನಿಗೆ ಬಲವಾದ ಸ್ಪರ್ಧೆಯಲ್ಲಿ ಇರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications