Pakistan: ಚಾಂಪಿಯನ್ಸ್ ಟ್ರೋಫಿಯಿಂದ ಆತಿಥೇಯ ಪಾಕಿಸ್ತಾನ ತಂಡ ಹೊರಗುಳಿಯಲು 3 ಕಾರಣಗಳು
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥೇಯ ಪಾಕಿಸ್ತಾನ ತಂಡ ಈ ಬಾರಿ ಕಳಪೆ ಪ್ರದರ್ಶನದಿಂದಾಗಿ ಟೂರ್ನಿಯಿಂದ ಹೊರಬಿದ್ದಿದೆ. ಈ ಮೆಗಾ ಟೂರ್ನಿ ಪಾಕಿಸ್ತಾನ ತಂಡ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಿತ್ತು. ಹೀಗಾಗಿ ಪಾಕಿಸ್ತಾನ ತಂಡದಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿತ್ತು. ಆದರೆ ಪಾಕಿಸ್ತಾನ ತಂಡವು ಎ ಗುಂಪಿನ ಮೊದಲೆರಡು ಪಂದ್ಯಗಳನ್ನು ಸೋಲನ್ನು ಎದುರಿಸಬೇಕಾಯಿತು. ಪಾಕಿಸ್ತಾಮ ಈ ಎರಡು ಹೀನಾಯ ಸೋಲುಗಳೊಂದಿಗೆ ಟೂರ್ನಿಯಿಂದ ಹೊರ ನಡೆಯಿತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತರೆ, ಎರಡನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಇದರೊಂದಿಗೆ ಪಾಕಿಸ್ತಾನ ಮತ್ತೊಮ್ಮೆ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ.

ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿತ್ತು. ಅಪಾಯಕಾರಿ ಬೌಲರ್‌ಗಳನ್ನು ಹೊಂದಿದ್ದ ಪಾಕಿಸ್ತಾನ ತಂಡ ಬಲಿಷ್ಠವಾಗಿತ್ತು. ಆದರೂ ಪಾಕಿಸ್ತಾನ ತಂಡ ಸತತ ಎರಡು ಸೋಲುಗಳೊಂದಿಗೆ ಟೂರ್ನಿಯಿಂದ ಹೊರಗುಳಿದಿದೆ. ಹಾಗಾದರೆ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ಪ್ರಮುಖ 3 ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ.
ನಿಧಾನಗತಿ ಬ್ಯಾಟಿಂಗ್
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಲು ಇಬ್ಬರು ಸ್ಟಾರ್ ಆಟಗಾರರು ಪ್ರಮುಖ ಕಾರಣ. ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ನಿಧನಗತಿ ಬ್ಯಾಟಿಂಗ್ ಮೂಲಕ ನಿರಾಸೆ ಮೂಡಿಸಿದರು. ಪಾಕಿಸ್ತಾನ ತಂಡಕ್ಕೆ ಅವಶ್ಯಕತೆ ಇದ್ದಾಗ ಇಬ್ಬರು ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ನಿಧನಗತಿ ಅವರ ಬ್ಯಾಟಿಂಗ್ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿತು. ನ್ಯೂಜಿಲೆಂಡ್ ವಿರುದ್ಧ ಬಾಬರ್ ಅಜಮ್ 90 ಎಸೆತೆಗಳಲ್ಲಿ 64 ರನ್ ಗಳಿಸಿದ್ದರು. ಇನ್ನು ರಿಜ್ವಾನ್ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ 91 ಎಸೆತಗಳನ್ನು ಎದುರಿಸಿ ಕೇವಲ 49 ರನ್ ಗಳಿಸಿದ್ದರು.
ದುಬಾರಿ ಬೌಲಿಂಗ್
ಪಾಕಿಸ್ತಾನ ತಂಡದಲ್ಲಿ ಅಪಾಯಕಾರಿ ವೇಗದ ಬೌಲರ್‌ಗಳು ಇರುವುದು ಗೊತ್ತಿರುವ ವಿಷಯ. ಹೀಗಾಗಿ ಪಾಕಿಸ್ತಾನ ತಂಡ ವೇಗದ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಈ ಬೌಲರ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ತಮ್ಮ ಬೌಲಿಂಗ್‌ನಲ್ಲಿ ಸಾಕಷ್ಟು ರನ್‌ಗಳನ್ನು ನೀಡಿದರು. ಹ್ಯಾರಿಸ್ ರೌಫ್ ಎರಡು ಪಂದ್ಯಗಳಲ್ಲಿ 7.94ರ ಎಕಾನಮಿಯಲ್ಲಿ ರನ್ ನೀಡಿ 2 ವಿಕೆಟ್ ಪಡೆದರು. ಶಾಹೀನ್ ಅವರು ಎರಡು ಪಂದ್ಯಗಳಲ್ಲಿ 7.88ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟು 2 ವಿಕೆಟ್ ಮಾತ್ರ ಉರುಳಿಸಿದರು. ಅವರ ಈ ಕಳಪೆ ಬೌಲಿಂಗ್ ಎದುರಾಳಿ ತಂಡಕ್ಕೆ ಲಾಭ ತಂದುಕೊಟ್ಟಿತು.
ಕಳಪೆ ಫೀಲ್ಡಿಂಗ್
ಪಾಕಿಸ್ತಾನ ತಂಡದ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಒಂದಲ್ಲ ಒಂದು ಸಮಸ್ಯೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಪಾಕಿಸ್ತಾನ ಆಟಗಾರರ ಕಳಪೆ ಫೀಲ್ಡಿಂಗ್ ಕಂಡು ಬಂತು. ಮೊದಲೆರೆಡು ಪಂದ್ಯಗಳಲ್ಲಿ ಪಾಕಿಸ್ತಾನದ ಆಟಗಾರರು ಫೀಲ್ಡಿಂಗ್ ವೇಳೆ ಹಲವು ತಪ್ಪುಗಳನ್ನು ಮಾಡಿದರು. ಅವರು ಗ್ರೌಂಡ್ ಫೀಲ್ಡಿಂಗ್‌ನಿಂದ ಕ್ಯಾಚ್ ಹಿಡಿಯುವವರೆಗೂ ತಪ್ಪುಗಳನ್ನು ಮಾಡಿ ತಂಡದ ಸೋಲಿಗೆ ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications