Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2022ರ ಟಿ20 ವಿಶ್ವಕಪ್ 3 ಕ್ವಾಲಿಫೈಯರ್ ಪಂದ್ಯಗಳ ಮುಂದೂಡಿದ ಐಸಿಸಿ

Three regional qualifiers for mens 2022 T20 WC postponed due to Coronavirus

ಅಬಿಧಾಬಿ: 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಭಾಗವಾಗಿ ನಡೆಯಬೇಕಿದ್ದ, ಪುರುಷರ ವಿಭಾಗದ ಏಷ್ಯಾ ಮತ್ತು ಆಫ್ರಿಕಾ ಮೂರು ಟಿ20 ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯಗಳನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮುಂದೂಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಕ್ವಾಲಿಫೈಯರ್ ಪಂದ್ಯಗಳನ್ನು ಮುಂದೂಡಿರುವುದಾಗಿ ಐಸಿಸಿ ಗುರುವಾರ ಹೇಳಿದೆ.

ಬಹ್ರೇನ್, ಕುವೈತ್, ಮಾಲ್ಡೀವ್ಸ್, ಕತಾರ್ ಮತ್ತು ಸೌದಿ ಅರೇಬಿಯಾ ಮಧ್ಯೆ ಏಪ್ರಿಲ್ 3ರಿಂದ 9ರ ವರೆಗೆ ನಡೆಯಬೇಕಿದ್ದ ದ ಏಷ್ಯಾ 'ಎ' ಕ್ವಾಲಿಫೈಯರ್ ಪಂದ್ಯಗಳು ಮುಂದೂಡಲ್ಪಟ್ಟಿದ್ದು, ಈ ಪಂದ್ಯಗಳು ಅಕ್ಟೋಬರ್‌ 23ರಿಂದ 29ರ ವರೆಗೆ ಕುವೈತ್‌ನಲ್ಲಿ ನಡೆಯಲಿವೆ.

ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಯಾಣಕ್ಕೆ ಸಂಬಂಧಿಸಿ ನಿರ್ಭಂಧಗಳನ್ನು ಹೇರಲಾಗುತ್ತಿದೆ. ಹೀಗಾಗಿ ಕೆಲವು ಕ್ರೀಡಾಸ್ಪರ್ಧೆಗಳು ರದ್ದಾಗುತ್ತಿವೆ. ಹೊಸ ರೂಪಾಂತರಿ ಕೊರೊನಾವೈರಸ್ ಕಾರಣದಿಂದಾಗಿ ಪಿಡುಗಿನ ಬಗ್ಗೆ ಭೀತಿ ಹೆಚ್ಚುತ್ತಿದೆ. ಪ್ರಯಾಣಕ್ಕೆ ನಿರ್ಭಂಧವಿರುವುದರಿಂದ ತಂಡಗಳಿಗೆ ಅಭ್ಯಾಸಕ್ಕೂ ತೊಂದರೆಯಾಗಲಿವೆ. ಹೀಗಾಗಿ ಪಂದ್ಯಗಳನ್ನು ಮುಂದೂಡಲಾಗಿದೆ.

ಪುರುಷರ ಟಿ20 ವಿಶ್ವಕಪ್‌ ಉಪ ಪ್ರಾದೇಶಿಕ ಆಫ್ರಿಕಾ 'ಎ' ಮತ್ತು 'ಬಿ' ಕ್ವಾಲಿಫೈಯರ್‌ಗಳು ದಕ್ಷಿಣ ಆಫ್ರಿಕಾದಲ್ಲಿ ಮುಂಬರುವ ಏಪ್ರಿಲ್‌ನಲ್ಲಿ ನಡೆಯಬೇಕಿತ್ತು. ಆದರೆ ಆ ಪಂದ್ಯಗಳನ್ನೂ ಮುಂದೂಡಲಾಗಿರುವುದರಿಂದ ಪಂದ್ಯಗಳು ಅಕ್ಟೋಬರ್‌ 25-31ರ ವರೆಗ ನಡೆಯಲಿದೆ.

Story first published: Thursday, March 18, 2021, 16:34 [IST]
Other articles published on Mar 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+