ವಿಶ್ವಕಪ್ ತಂಡದ ಕನಸಿನಲ್ಲಿದ್ದ ಮೂವರಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶಾಕ್?
ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ತನ್ನ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಈ ಮೂಲಕ ಭವಿಷ್ಯದ ತಂಡವನ್ನು ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದೆ. ಹಿರಿಯ ಆಟಗಾರರಿಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿಯನ್ನು ನೀಡಿ ಫ್ಯೂಚರ್ ಟೀಮ್ ಕಟ್ಟುವ ಕನಸು ಮ್ಯಾನೇಜ್ಮೆಂಟ್ ನದ್ದಾಗಿದೆ. ಆದರೆ, ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಮ್ಯಾನೇಜ್ಮೆಂಟ್ ನೀಡಿದ ಅವಕಾಶಗಳನ್ನು ಎರಡೂ ಕೈಗಳಿಂದ ಹಾಳು ಮಾಡಿಕೊಂಡ ಯಂಗ್ ಪ್ಲೇಯರ್ಸ್ ಹತಾಶರಾಗಿದ್ದಾರೆ. ಅಲ್ಲದೆ ಇವರ ಪ್ರದರ್ಶನವನ್ನು ನೋಡಿದರೆ, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಡೌಟ್ ಆಗಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರನ ಹುಡುಕಾಟಕ್ಕೆ ಮ್ಯಾನೇಜ್ಮೆಂಟ್ ಕೈ ಹಾಕಿತ್ತು. ಇದರ ಪರಿಣಾಮ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಲಭಿಸಿತು. ಅನುಭವಿ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಿದ್ದರಿಂದ, ಸಂಜು ವೆಂಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದರು.

ಆದರೆ, ಸರಣಿಯಲ್ಲಿ ಧಮಾಕೆದಾರ್ ಪ್ರದರ್ಶನವನ್ನು ನೀಡದೆ, ನಿರಾಸೆ ಅನುಭವಿಸಿದರು. ಸತತ ಸರಣಿಗಳಲ್ಲಿ ಬೆಂಚ್ ಕಾಯುತ್ತಿದ್ದ ಸಂಜು, ಅಂತು ಕೊನೆಗೆ ಬ್ಲ್ಯೂ ಜೆರ್ಸಿಯಲ್ಲಿ ಅಖಾಡಕ್ಕೆ ಇಳಿದರು. ಆದರೆ, ಬೆಂಚ್ ಮೇಲೆ ಕುಳಿತು ಕೊಂಡ ಮಾಡಿಕೊಂಡಿದ್ದ ಯೋಜನೆಗಳೆಲ್ಲಾ, ಮೈದಾನಕ್ಕೆ ಬಂದಾಗ ಠುಸ್ ಆದವು. ನಿಜಕ್ಕೂ ಸಂಜು ವಿಂಡೀಸ್ ಪ್ರವಾಸದಲ್ಲಿ ರನ್ ಬರವನ್ನು ಅನುಭವಿಸಿದರು. ಇದರಿಂದ ಆಯ್ಕೆದಾರರಿಗೆ ನಿರಾಸೆ ಮೂಡಿಸಿದರು.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಲಭಿಸಬಹುದು ಎಂದೇ ಎಲ್ಲರು ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ, ಕೆರಿಬಿಯನ್ ನಾಡಿನಲ್ಲಿ ಸಂಜು ನೀಡಿದ ಪ್ರದರ್ಶನ, ಇವರಿಗೆ ಅವಕಾಶ ಸಿಗುವುದು ಡೌಟ್ ಎನ್ನುವಂತೆ ಮಾಡಿದೆ.
ಸಂಜು ವಿಂಡೀಸ್ ಪ್ರವಾಸದಲ್ಲಿ ಒಟ್ಟಾರೆ 7 ಪಂದ್ಯಗಳನ್ನು ಆಡಿದ್ದಾರೆ. ಈ ಏಳೂ ಪಂದ್ಯಗಳ ಒಟ್ಟು ರನ್ 92 ಆಗಿದ್ದು, ಎಕನಾಮಿ 18.40 ಆಗಿದೆ. ಇವರ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲದಿರುವುದು ಇವರನ್ನು ವಿಶ್ವಕಪ್ ತಂಡದಿಂದ ದೂರು ಉಳಿಯುವಂತೆ ಮಾಡಬಹುದು.
ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಎರಡನೇ ಹೆಸರು ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್. ಇವರಿಗೆ ಸೀಮಿತ ಓವರ್‌ಗಳಿಗೆ ಮಾತ್ರ ಟೀಮ್ ಇಂಡಿಯಾ ಬಳಸಿಕೊಳ್ಳುತ್ತಿದೆ. ಇವರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವಿದ್ದಾರೆ. ಹೀಗಾಗಿ ಇವರ ಸ್ಥಾನದ ಮೇಲೂ ತೂಗುಗತ್ತಿ ನೇತಾಡುತ್ತಿದೆ. ಅಸಲಿಗೆ ಚಹಾಲ್ ಐದು ಟಿ20 ಪಂದ್ಯಗಳನ್ನು ಆಡಿದ್ದು, ಕೇವಲ 5 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಚಾಹಲ್ ಬ್ಯಾಟಿಂಗ್‌ನಿಂದ ಯಾವುದೇ ಉಪಯೋಗವಿಲ್ಲ
ಇದೇ ವೇಳೆ ಇವರ ಎಕನಾಮಿ 9.05 ಆಗಿದೆ. ಇವರು ಕ್ಯಾಚ್‌ಗಳನ್ನು ಡ್ರಾಪ್ ಮಾಡುತ್ತಾರೆ. ಅಲ್ಲದೆ ಸರಿಯಾಗಿ ಚೆಂಡನ್ನು ಥ್ರೋ ಮಾಡಲು ಸಹ ಹೆಣಗಾಡುತ್ತಾರೆ. ಇನ್ನು ಚಾಹಲ್ ಬ್ಯಾಟಿಂಗ್‌ನಿಂದ ಯಾವುದೇ ಉಪಯೋಗವಿಲ್ಲ. ಈ ಎಲ್ಲ ಅಂಶಗಳನ್ನು ನೋಡಿ ಇವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವುದು ಡೌಟ್ ಎಂದೇ ಹೇಳಲಾಗುತ್ತಿದೆ.
ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿದ್ದ ಮುಕೇಶ್ ಕುಮಾರ್
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಮುಕೇಶ್ ಕುಮಾರ್. ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿ, ಆಯ್ಕೆದಾರರ ಮನ ಗೆದ್ದಿದ್ದ ಮುಕೇಶ್, ದೇಶೀಯ ಟೂರ್ನಿಗಳಲ್ಲೂ ಅಬ್ಬರಿಸಿದ್ದರು. ಇದರ ಫಲವಾಗಿಯೇ ಮುಕೇಶ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿತ್ತು.
ಅಲ್ಲದೆ ಪ್ರವಾಸದ ವೇಳೆ ಮೂರು ಮಾದರಿಯ ಕ್ರಿಕೆಟ್‌ಗೆ ಮುಕೇಶ್ ಪದಾರ್ಪಣೆ ಮಾಡಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರು ಫಾರ್ಮೆಟ್ ಗಳನ್ನು ಸೇರಿ 9 ಪಂದ್ಯಗಳನ್ನು ಆಡಿದ್ದು, 9 ವಿಕೆಟ್ ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಅಂಕಿ ಅಂಶಗಳೇ ಆಯ್ಕೆದಾರರು ಇವರನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications