ಭಾರತ-ಪಾಕಿಸ್ತಾನ ವೈಷಮ್ಯಕ್ಕೆ 'ಆತನೇ ಕಾರಣ' ಎಂದ ಶಾಹಿದ್ ಅಫ್ರಿದಿ!

ಇಸ್ಲಮಾಬಾದ್, ಫೆಬ್ರವರಿ 25: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಯಾಕೆ ಹಾಳಾಗಿದೆ? ಎರಡೂ ದೇಶಗಳ ನಡುವಿನ ಹಗೆತನ ಯಾಕೆ ಕಡಿಮೆಯಾಗುತ್ತಿಲ್ಲ ಎನ್ನುವುದಕ್ಕೆ ಪಾಕಿಸ್ತಾನ ಆಲ್ ರೌಂಡರ್ ಶಾಹಿದ್ ಅಫ್ರಿದಿ ಕಾರಣ ಹೇಳಿಕೊಂಡಿದ್ದಾರೆ. ಆತನಿದ್ದಷ್ಟು ಕಾಲ ಇತ್ತಂಡಗಳ ಸಂಬಂಧ ನಕಾರಾತ್ಮಕತೆಯತ್ತ ವಾಲುತ್ತದೆ ಎಂದು ಅಫ್ರಿದಿ ಭಾರತದ ಒಬ್ಬರತ್ತ ಬೊಟ್ಟುಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಅಂಥ ಸೌಹಾರ್ದತೆಯಿಲ್ಲ. ಎರಡೂ ದೇಶಗಳ ನಡುವೆ ರಾಜಕೀಯ ಬಿಕ್ಕಟ್ಟು ಆವರಿಸಿದೆ. ಮುಖ್ಯವಾಗಿ ಭಾರತವೇ ಪಾಕ್ ವಿರುದ್ಧ ಅಂತರ ಕಾಯ್ದುಕೊಳ್ಳುತ್ತಿದೆ. ಇದಕ್ಕೆ ಭಯೋತ್ಪಾದನಾ ಸಂಗತಿಯೂ ಕಾರಣ.
ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದೆ ಎಂದು ದೂರುತ್ತಿರುವ ಭಾರತ, ಪಾಕ್ ಜೊತೆಗಿನ ಕ್ರೀಡಾಕೂಟಗಳನ್ನೂ ಕಡಿತಗೊಳಿಸುತ್ತಿದೆ. ಮುಖ್ಯವಾಗಿ ಇತ್ತಂಡಗಳ ಮಧ್ಯೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದು ಅನೇಕ ವರ್ಷಗಳಾಗಿವೆ.

ಇತ್ತಂಡಗಳ ದ್ವಿಪಕ್ಷೀಯ ಸರಣಿಗಳು
ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿಗಾಗಿ ಭಾರತ ಒಟ್ಟು 8 ಸರಣಿಗಳಿಗೆ ಅಂದರೆ 1999ರಲ್ಲಿ ನಡೆದಿದ್ದ ಏಕಮಾತ್ರ ಪಂದ್ಯವೂ ಸೇರಿ ಒಟ್ಟಿಗೆ 32 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಪಾಕಿಸ್ತಾನ ಒಟ್ಟಿಗೆ 7 ಸರಣಿ ಅಂದರೆ 26 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಎರಡೂ ತಂಡಗಳು ತಲಾ ನಾಲ್ಕು ಸರಣಿಗಳನ್ನು ಗೆದ್ದಿವೆ. ಆದರೂ ಪಾಕಿಸ್ತಾನ ಭಾರತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ.

ಕಡೇಯ ಪಂದ್ಯವಾಡಿದ್ದು
ಭಾರತ-ಪಾಕ್ ದ್ವಿಪಕ್ಷೀಯ ಸರಣಿಗೆ ಸಂಬಂಧಿಸಿ ಕಡೇಯ ಪಂದ್ಯ ನಡೆದಿದ್ದು 2012-13ರಲ್ಲಿ. ಮಿಸ್ತಾ ಉಲ್ ಹಕ್ ಮತ್ತು ಮೊಹಮ್ಮದ್ ಹಫೀಝ್ ನಾಯಕತ್ವದ ಪಾಕ್ ತಂಡ ಆಗ ಭಾರತಕ್ಕೆ ಬಂದಿತ್ತು. ಆ ವೇಳೆ 2 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ಪಾಲ್ಗೊಂಡಿದ್ದವು.

ವೈಷಮ್ಯಕ್ಕೆ 'ಆತ' ಕಾರಣ!
ಭಾರತ-ಪಾಕ್ ನಡುವಣ ಸಂಬಂಧ ಯಾಕೆ ಸರಿಯಿಲ್ಲ. ಇತ್ತಂಡಗಳ ಮಧ್ಯೆ ಯಾಕೆ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ ಎಂಬುದಕ್ಕೆ ಅಫ್ರಿದಿ ಕಾರಣ ಹೇಳಿದ್ದಾರೆ. ಈದಿನ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಫ್ರಿದಿ ದೂರಿದ್ದಾರೆ. 'ಮೋದಿ ಭಾರತದಲ್ಲಿ ಅಧಿಕಾರದಲ್ಲಿರುವಷ್ಟು ಕಾಲ ಭಾರತದಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ ಎಂದು ನನಗನ್ನಿಸುತ್ತಿಲ್ಲ,' ಎಂದು ಅಫ್ರಿದಿ ಹೇಳಿದ್ದಾರೆ.

ಒಳ್ಳೆಯತನ ಅವನಲ್ಲಿಲ್ಲ!
ಮಾತು ಮುಂದುವರೆಸಿದ ಅಫ್ರಿದಿ, 'ಭಾರತದವರನ್ನೂ ಸೇರಿಸಿ ನಮಗೆಲ್ಲರಿಗೂ ಗೊತ್ತಿದೆ ಮೋದಿ ಯಾವ ರೀತಿ ಯೋಚಿಸುತ್ತಾರೆ ಎಂದು. ಆತನ ಆಲೋಚನೆಯು ಯಾವತ್ತಿಗೂ ಒಳ್ಳೆಯತನದಿಂದ ಕೂಡಿರದೆ ಸದಾ ನಕಾರಾತ್ಮಕತೆಯತ್ತ ವಾಲುತ್ತಿರುತ್ತದೆ,' ಎಂದು ಕ್ರಿಕೆಟ್ ಪಾಕಿಸ್ತಾನದ ಸಂದರ್ಶನದಲ್ಲಿ ಅಫ್ರಿದಿ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications