BCCI ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸೌರವ್ ಗಂಗೂಲಿ ನಿರ್ಧಾರ; ಟಿಎಂಸಿ-ಬಿಜೆಪಿ ರಾಜಕೀಯ ಸಮರ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುತ್ತಾರೆ ಎಂಬ ವರದಿಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಾಕ್ಸಮರ ಆರಂಭವಾಗಿದೆ.
ಭಾರತದ ಮಾಜಿ ನಾಯಕನ ಸ್ಥಾನಕ್ಕೆ ಕನ್ನಡಿಗ ರೋಜರ್ ಬಿನ್ನಿ ಆಯ್ಕೆಯಾಗುವ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಕ್ರಮವು ಸೌರವ್ ಗಂಗೂಲಿಯನ್ನು ಗುರಿಯಾಗಿಸಿಕೊಂಡ ರಾಜಕೀಯ ಸೇಡು ಎಂದು ಆರೋಪಿಸಿದೆ.
ಟ್ವಿಟರ್‌ನಲ್ಲಿ ಟಿಎಂಸಿ ಸಂಸದ ಶಾಂತನು ಸೇನ್, ರಾಜಕೀಯ ದ್ವೇಷದ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ. "ಅಮಿತ್ ಶಾ ಪುತ್ರನನ್ನು ಬಿಸಿಸಿಐ ಕಾರ್ಯದರ್ಶಿಯಾಗಿ ಉಳಿಸಿಕೊಳ್ಳಬಹುದು, ಆದರೆ ಸೌರವ್ ಗಂಗೂಲಿ ಸಾಧ್ಯವಿಲ್ಲ. ಅವರು ಪಶ್ಚಿಮ ಬಂಗಾಳದವರಾ ಅಥವಾ ಅವರು ಬಿಜೆಪಿಗೆ ಸೇರಲಿಲ್ಲವೆಂದೇ? ನಾವು ನಿಮ್ಮೊಂದಿಗಿದ್ದೇವೆ ದಾದಾ," ಎಂದು ಟ್ವೀಟ್ ಮಾಡಿದ್ದಾರೆ.

ಅದ್ಭುತ ಕ್ರಿಕೆಟಿಗನ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಯಿತು
ಆಜ್ ತಕ್/ಇಂಡಿಯಾ ಟುಡೇ ಜೊತೆ ಮಾತನಾಡಿದ ಶಾಂತನು ಸೇನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವರ್ಷದ ಮೇ ತಿಂಗಳಲ್ಲಿ ಸೌರವ್ ಗಂಗೂಲಿಯ ನಿವಾಸಕ್ಕೆ ಭೋಜನಕ್ಕೆ ಬಂದಿದ್ದನ್ನು ಗಮನಿಸಿದರು. ಅಮಿತ್ ಶಾ ಅವರು ಗಂಗೂಲಿಯವರನ್ನು ಬಿಜೆಪಿಗೆ ಸೇರಲು ಹಲವು ಬಾರಿ ಕೇಳಿಕೊಂಡಿದ್ದಾರೆ ಎಂದು ಹೇಳಿದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸೌರವ್ ಗಂಗೂಲಿಯನ್ನು ರಾಜಕೀಯವಾಗಿ ಎದುರಾಗಿಸಬೇಕೆಂದು ಅವರು ಬಯಸಿದ್ದರು.
"ಸೌರವ್ ಗಂಗೂಲಿ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಅದ್ಭುತ ಕ್ರಿಕೆಟಿಗನ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಯಿತು ಎಂದು ಶಾಂತನು ಹೇಳಿದ್ದಾರೆ. ಇದು ಕೇವಲ ರಾಜಕೀಯವಾಗಿ ಪ್ರಭಾವಿತವಾದ ಕೃತ್ಯವಲ್ಲ, ಕ್ರೀಡೆಯನ್ನು ಕೇಸರಿಕರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಬಿಜೆಪಿ ಎಲ್ಲಾ ಉನ್ನತ ವ್ಯವಸ್ಥಾಪಕ ಸ್ಥಾನಗಳನ್ನು ತಮ್ಮ ನಾಯಕರ ಕುಟುಂಬದ ಸದಸ್ಯರಿಗೆ ಮೀಸಲಿಟ್ಟಿದೆ," ಎಂದು ಆರೋಪಿಸಿದರು.

ಸೌರವ್ ಗಂಗೂಲಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದೆಯೇ
ಆಜ್ ತಕ್ ಲೈವ್ ಚಾಟ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕಟುವಾದ ಕೌಂಟರ್ ನೀಡಿದ್ದು, "ಟಿಎಂಸಿ ಸಂಸದ ಶಾಂತನು ಸೇನ್ ಅಥವಾ ಅವರ ಪಕ್ಷವು ಸೌರವ್ ಗಂಗೂಲಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದೆಯೇ ಎಂದು ನನಗೆ ತಿಳಿದಿಲ್ಲ. ಟಿಎಂಸಿ ರಾಜಕೀಯಕ್ಕೆ ಒಗ್ಗಿಕೊಂಡಿದೆ ಮತ್ತು ಅವರು ಅದನ್ನು ಮುಂದುವರಿಸುತ್ತಿದ್ದಾರೆ," ಎಂದರು.
ಬಿಜೆಪಿಯ ಹಿರಿಯ ನಾಯಕ ಮತ್ತು ಖರಗ್‌ಪುರದ ಸಂಸದ ದಿಲೀಪ್ ಘೋಷ್ ಅವರು, "ರೋಜರ್ ಬಿನ್ನಿ ಎಂದಾದರೂ ಬಿಜೆಪಿಗೆ ಸಂಪರ್ಕ ಹೊಂದಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸುವ ಮೊದಲು, ಬಂಗಾಳ ಸರ್ಕಾರವು ಬಂಗಾಳದಲ್ಲಿ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಮಾಡಬೇಕು," ಎಂದು ದಿಲೀಪ್ ಘೋಷ್ ಹೇಳಿದರು.

ಗಂಗೂಲಿ ಸ್ಥಾನಕ್ಕೆ ರೋಜರ್ ಬಿನ್ನಿ
2019ರ ನವೆಂಬರ್ 19ರಂದು ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಬಿಸಿಸಿಐ ದಿಗ್ಗಜರ ಸಭೆಯ ನಂತರ, ಸೌರವ್ ಗಂಗೂಲಿ ಇನ್ನು ಮುಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದರು. 1983ರ ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ರೋಜರ್ ಬಿನ್ನಿ ಅವರು ಗಂಗೂಲಿ ಸ್ಥಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ತೆಗೆದುಕೊಳ್ಳಲಾದ ಇತರ ಪ್ರಮುಖ ವಿಷಯಗಳಲ್ಲಿ ಅರುಣ್ ಠಾಕೂರ್ ಅವರು ಬಿಸಿಸಿಐನ ಖಜಾಂಚಿ ಹುದ್ದೆಗೆ ಮತ್ತೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅರುಣ್ ಠಾಕೂರ್ ಅವರು ಹಾಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಸಹೋದರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications