Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಲೋಲನ್ ರಂಗರಾಜನ್ ಹೆಗಲಿಗೆ ಸಿಪಿಎಲ್ ಸಹಾಯಕ ಕೋಚ್ ಜವಾಬ್ದಾರಿ

TN allrounder Malolan Rangarajan to remotely assist in CPL

ನವದೆಹಲಿ, ಆಗಸ್ಟ್ 8: ತಮಿಳುನಾಡು ತಂಡದ ಮಾಜಿ ಆಲ್ ರೌಂಡರ್ ಮಲೋಲನ್ ರಂಗರಾಜನ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ತಂಡವಾದ ನೆವಿಸ್ ಪ್ಯಾಟ್ರಿಯೋಟ್ಸ್ ತಂಡಕ್ಕೆ ಈ ಸೀಸನ್‌ನಲ್ಲಿ ಸಹಾಯಕ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಆದರೆ ರಂಗರಾಜನ್ ದೂರದಿಂದಲೇ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

'ಈ ಅವಕಾಶ ಲಭಿಸಿದ್ದಕ್ಕಾಗಿ ನಾನು ಖುಷಿಗೊಂಡಿದ್ದೇನೆ. ದುರದೃಷ್ಟಕರವಾಗಿ ನಾನು ಪ್ರಯಾಣ ನಿರ್ಬಂಧ ಕಾರಣದಿಂದಾಗಿ ಸಿಪಿಎಲ್‌ನಿಂದ ಹಿಂದೆ ಸರಿದಿದ್ದೇನೆ. ಆದರೆ ಕಾರ್ಯತಂತ್ರದ ಸಲಹೆಗಾರನಾಗಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಕ್ಕಾಗಿ ನಾನು ಪ್ಯಾಟ್ರಿಯೋಟ್ಸ್ ಮ್ಯಾನೇಜ್ಮೆಂಟ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ರಂಗರಾಜನ್ ಹೇಳಿದ್ದಾರೆ.

'ಸಿಪಿಎಲ್‌ನ ಈ ಸೀಸನ್ ಅವಧಿಯಲ್ಲಿ ತಂತ್ರಗಳ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ನಾನು ತಂಡದ ಆಲೋಚನೆಗಳನ್ನು ಒರೆಗೆ ಹಚ್ಚುವ ಕಾರ್ಯ ನಿರ್ವಹಿಸುತ್ತೇನೆ,' ಎಂದು ಮಲೋಲನ್ ತಿಳಿಸಿದ್ದಾರೆ. ಸಿಪಿಎಲ್ ಮತ್ತೊಂದು ತಂಡ ಸೇಂಟ್ ಕೈಟ್ಸ್‌ಗೆ ವೆಸ್ಟ್ ಇಂಡೀಸ್ ಮಾಜಿ ವೇಗಿ ಕರ್ಟ್ನಿ ವಾಲ್ಷ್ ಅವರು ಸಹ ಕೋಚ್ ಆಗಿ ಹೆಸರಿಸಲ್ಪಟ್ಟಿದ್ದಾರೆ.

ಪ್ಯಾಟ್ರಿಯೋಟ್ಸ್ ತಂಡಕ್ಕೆ ಮುಖ್ಯ ಕೋಚ್‌ ಆಗಿದ್ದ ಆಸ್ಟ್ರೇಲಿಯಾ ಕೋಚ್ ಸೈಮನ್ ಹೆಲ್ಮೋಟ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಹೀಗಾಗಿ ಹೆಲ್ಮೋಟ್ ಬದಲಿಗೆ ನ್ಯೂಜಿಲೆಂಡ್‌ನ ಮಾರ್ಕ್ ಒ'ಡೊನೆಲ್ ಅವರನ್ನು ಕರೆತರಲಾಗಿದೆ. ಸಿಪಿಎಲ್ ಟಿ20 ಟೂರ್ನಿ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ.

Story first published: Sunday, August 9, 2020, 9:30 [IST]
Other articles published on Aug 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+