
17 ಓವರ್‌ಗಳಿಗೆ ಕಡಿತಗೊಂಡಿದ್ದ ಪಂದ್ಯ
ಇನ್ನು ಇತ್ತಂಡಗಳ ನಡುವಿನ ಈ ಪಂದ್ಯಕ್ಕೆ ಆರಂಭದಲ್ಲಿಯೇ ವರುಣರಾಯ ಅಡ್ಡಿಯನ್ನುಂಟುಮಾಡಿದ್ದ. ಮಳೆಯ ಕಾರಣದಿಂದಾಗಿ ತಡವಾಗಿ ಆರಂಭವಾದ ಪಂದ್ಯದ ಓವರ್ ಮಿತಿಯನ್ನು 20 ಓವರ್‌ನಿಂದ 17 ಓವರ್‌ಗಳಿಗೆ ಇಳಿಸಲಾಗಿತ್ತು.

139 ರನ್ ಗುರಿ ನೀಡಿದ್ದ ಕೊವೈ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಲೈಕಾ ಕೋವೈ ಕಿಂಗ್ಸ್ 17 ಓವರ್‌ಗಳಲ್ಲಿ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿ ಎದುರಾಳಿ ಚೆಪಾಕ್ ಸೂಪರ್ ಗಿಲ್ಲೀಸ್ ತಂಡಕ್ಕೆ 139 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲೀಸ್ 4 ಓವರ್‌ಗಳಲ್ಲಿ 14 ರನ್ ಕಲೆಹಾಕಿ ತನ್ನ ಆರಂಭಿಕ ಆಟಗಾರರಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದೇ ಸಮಯಕ್ಕೆ ಮಳೆಯ ತೀವ್ರತೆ ಹೆಚ್ಚಾದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ವರುಣರಾಯ ಕೃಪೆ ತೋರದ ಕಾರಣ ಪಂದ್ಯವನ್ನು ಮತ್ತೆ ಆರಂಭಿಸಲಾಗದೇ ಚೆಪಾಕ್ ಸೂಪರ್ ಗಿಲ್ಲೀಸ್ ಹಾಗೂ ಲೈಕಾ ಕೊವೈ ಕಿಂಗ್ಸ್ ಎರಡೂ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿವೆ.

ಸಾಯಿ ಸುದರ್ಶನ್ ಪಂದ್ಯಶ್ರೇಷ್ಠ & ಸಂಜಯ್ ಯಾದವ್ ಸರಣಿಶ್ರೇಷ್ಠ
ಫೈನಲ್ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 42 ಎಸೆತಗಳಲ್ಲಿ 65 ರನ್ ಕಲೆ ಹಾಕುವುದರ ಮೂಲಕ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಸಂಜಯ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಚೆಪಾಕ್ ಸೂಪರ್ ಗಿಲ್ಲೀಸ್ ಆಡುವ ಬಳಗ: ಕೌಶಿಕ್ ಗಾಂಧಿ (ನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ಎಸ್ ರಾಧಾಕೃಷ್ಣನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉತ್ರಸಾಮಿ ಸಸಿದೇವ್, ರಾಜಗೋಪಾಲ್ ಸತೀಶ್, ಎಸ್ ಹರೀಶ್ ಕುಮಾರ್, ಸೋನು ಯಾದವ್, ಮಣಿಮಾರನ್ ಸಿದ್ಧಾರ್ಥ್, ಆರ್ ಅಲೆಕ್ಸಾಂಡರ್, ಸಂದೀಪ್ ವಾರಿಯರ್
ಕೋವೈ ಕಿಂಗ್ಸ್ ಆಡುವ ಬಳಗ: ಗಂಗಾ ಶ್ರೀಧರ್ ರಾಜು, ಜೆ ಸುರೇಶ್ ಕುಮಾರ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಶಿಜಿತ್ ಚಂದ್ರನ್, ಶಾರುಖ್ ಖಾನ್ (ನಾಯಕ), ಯು ಮುಕಿಲೇಶ್, ಅಭಿಷೇಕ್ ತನ್ವರ್, ವಲ್ಲಿಯಪ್ಪನ್ ಯುಧೀಶ್ವರನ್, ಮನೀಶ್ ರವಿ, ಎಸ್ ಅಜಿತ್ ರಾಮ್, ಬಾಲು ಸೂರ್ಯ


Click it and Unblock the Notifications












