ತಾನಾಡುತ್ತಿದ್ದ ಪಂದ್ಯದ ವೇಳೆ ಡಿಕೆ ಹೆಸರು ಕೂಗಿದ ಪ್ರೇಕ್ಷಕರು; ಮೈದಾನದಲ್ಲೇ ಕೈಮುಗಿದ ಮುರಳಿ ವಿಜಯ್!

ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಖಿತಾ ದಿನೇಶ್ ಕಾರ್ತಿಕ್ ಅವರ ಗೆಳೆಯನಾಗಿದ್ದ ಮುರಳಿ ವಿಜಯ್ ಜತೆ ಸಂಬಂಧ ಬೆಳೆಸಿದ್ದು ಮತ್ತು ಆ ಸಂಬಂಧದಿಂದ ನಿಖಿತಾ ಮತ್ತು ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆದುಕೊಂಡದ್ದು ನಿಮಗೆಲ್ಲ ತಿಳಿದೇ ಇದೆ. ಸದ್ಯ ನಿಕಿತಾ ಮತ್ತು ಮುರಳಿ ವಿಜಯ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದರೆ, ದಿನೇಶ್ ಕಾರ್ತಿಕ್ ಕ್ರೀಡಾಪಟು ದೀಪಿಕಾ ಪಲ್ಲೀಕಲ್ ಅವರನ್ನು ವಿವಾಹವಾಗಿದ್ದಾರೆ.
ಹೀಗೆ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಇಬ್ಬರ ವೈಯಕ್ತಿಕ ಜೀವನ ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿತ್ತು ಹಾಗೂ ಈ ಇಬ್ಬರ ಸ್ನೇಹ ಸಂಬಂಧ ಕೂಡ ಮುರಿದು ಬಿದ್ದಿತ್ತು. ಇತ್ತ ತನ್ನ ವೈಯಕ್ತಿಕ ಜೀವನದಲ್ಲಾದ ಏರುಪೇರಿನಿಂದ ಖಿನ್ನತೆಗೊಳಗಾಗಿದ್ದ ದಿನೇಶ್ ಕಾರ್ತಿಕ್ ಕ್ರಿಕೆಟ್ ವೃತ್ತಿಜೀವನ ಹಾದಿ ತಪ್ಪಿತ್ತು. ಕಳಪೆ ಪ್ರದರ್ಶನ ನೀಡಲಾರಂಭಿಸಿದ್ದ ದಿನೇಶ್ ಕಾರ್ತಿಕ್ ಅಂತರರಾಷ್ಟ್ರೀಯ ಕ್ರಿಕೆಟ್ ಅವಕಾಶ ವಂಚಿತರಾಗಿ ಸೋತಿದ್ದರು.
ಆದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ನಡೆಸಿ ಇದೀಗ ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅವಕಾಶಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ದಿನೇಶ್ ಕಾರ್ತಿಕ್ ಯಶಸ್ಸು ಕಂಡ ಬೆನ್ನಲ್ಲೇ ಕ್ರಿಕೆಟ್‍ನಿಂದ ದೂರ ಸರಿದಿದ್ದ ಮುರಳಿ ವಿಜಯ್ ಕೂಡ ಕಣಕ್ಕಿಳಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೂಬಿ ತಿರುಚಿ ವಾರಿಯರ್ಸ್ ಪರ ಆಡುತ್ತಿದ್ದಾರೆ. ಆದರೆ ಮುರಳಿ ವಿಜಯ್ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮುಜುಗರಕ್ಕೀಡಾದ ಘಟನೆಯೊಂದು ನಡೆದಿದೆ.
#TNPL2022 DK DK DK ......
— Muthu (muthu_offl) July 7, 2022
Murali Vijay reaction pic.twitter.com/wK8ZJ84351
ಡಿಕೆ ಡಿಕೆ ಎಂದು ಕೂಗಿದ ಪ್ರೇಕ್ಷಕರು
ಮುರಳಿ ವಿಜಯ್ ಪಂದ್ಯವೊಂದರಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು 'ಡಿಕೆ ಡಿಕೆ' ಎಂದು ಒಂದೇ ಸಮನೆ ಕೂಗಿದ್ದಾರೆ. ಮುರಳಿ ವಿಜಯ್ ಅವರನ್ನು ಚುಡಾಯಿಸಲೆಂದೇ ಈ ರೀತಿ ಪ್ರೇಕ್ಷಕರು ಕೂಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮುರಳಿ ವಿಜಯ್ ಪ್ರೇಕ್ಷಕರಿಗೆ ಇದೆಲ್ಲಾ ಯಾಕೆ ಸುಮ್ಮನಿರಿ ಎಂದು ಕೈ ಸನ್ನೆಯ ಮೂಲಕ ತಿಳಿಸಿದ್ದರು. ಆದರೂ ಬಿಡದ ಪ್ರೇಕ್ಷಕರು ಇನ್ನೂ ದೊಡ್ಡ ಮಟ್ಟದಲ್ಲಿ ಡಿಕೆ ಜಪ ಮಾಡಲಾರಂಭಿಸಿದರು. ಕೊನೆಗೆ ಪ್ರೇಕ್ಷಕರತ್ತ ಮುಖಮಾಡಿದ ಮುರಳಿ ವಿಜಯ್ ಕೈಮುಗಿದಿದ್ದಾರೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶತಕ ಬಾರಿಸಿದ್ದ ವಿಜಯ್
ನೆಲ್ಲೈ ರಾಯಲ್ ಕಿಂಗ್ಸ್ ಮತ್ತು ರೂಬಿ ತ್ರಿಚಿ ವಾರಿಯರ್ಸ್ ನಡುವೆ ನಡೆದಿದ್ದ ಪಂದ್ಯದಲ್ಲಿ ರೂಬಿ ತ್ರಿಚಿ ವಾರಿಯರ್ಸ್ ತಂಡದ ಮುರಳಿ ವಿಜಯ್ 66 ಎಸೆತಗಳಲ್ಲಿ 121 ರನ್ ಬಾರಿಸಿ ಶತಕ ಸಿಡಿಸಿದ್ದರು. ಮುರಳಿ ವಿಜಯ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಫೋರ್ಸ್ ಮತ್ತು 12 ಸಿಕ್ಸರ್ ಕೂಡ ಇದ್ದವು. ಆದರೆ ಮುರಳಿ ವಿಜಯ್ ಅವರ ಈ ಬೃಹತ್ ಇನ್ನಿಂಗ್ಸ್ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಆಗಿರಲಿಲ್ಲ.

ಟೂರ್ನಿಯಲ್ಲೂ ತ್ರಿಚಿ ವಿಫಲ
ಇನ್ನು ಈ ಬಾರಿಯ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯ 23 ಪಂದ್ಯಗಳು ಮುಕ್ತಾಯವಾದ ನಂತರ ಅಂಕಪಟ್ಟಿಯಲ್ಲಿ 6 ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದಿರುವ ನೆಲ್ಲೈ ರಾಯಲ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದರೆ, 5 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಸೋತು ಉಳಿದೊಂದು ಪಂದ್ಯದಲ್ಲಿ ಮಾತ್ರ ಗೆದ್ದಿರುವ ರೂಬಿ ತ್ರಿಚಿ ವಾರಿಯರ್ಸ್ ಏಳನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications