TNPL Auction 2023: ಐಪಿಎಲ್‌ಗಿಂತ ಹೆಚ್ಚು ಮೊತ್ತಕ್ಕೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಹರಾಜಾದ ಆಟಗಾರ!

ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಐಪಿಎಲ್ ಮಾದರಿಯಂತೆ ಮೊದಲ ಬಾರಿಗೆ ಹರಾಜು ಪ್ರಕ್ರಿಯೆಯನ್ನು ನಡೆಸಿತು. ಈಗಾಗಲೇ 6 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ತಮಿಳುನಾಡು ಪ್ರೀಮಿಯರ್ ಲೀಗ್ 7ನೇ ಆವೃತ್ತಿಗಾಗಿ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಿದೆ.
ಈ ಬಾರಿ ಹರಾಜು ಪ್ರಕ್ರಿಯೆಯನ್ನು ಸ್ಟಾರ್ ಸ್ಪೋರ್ಟ್ಸ್ ತಮಿಳುವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗಿದೆ. ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ದಿಂಡಿಗುಲ್ ಡ್ರ್ಯಾಗನ್ಸ್ ಫ್ರಾಂಚೈಸಿ ಪರವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ತಮಿಳುನಾಡು ತಂಡದ ಪ್ರಮುಖ ಆಟಗಾರ ಸಾಯಿ ಸುದರ್ಶನ ಟಿಎನ್‌ಪಿಎಲ್ ಹರಾಜಿನಲ್ಲಿ ದಾಖಲೆ ನಿರ್ಮಿಸಿದರು. ಲೈಕಾ ಕೋವಾಯ್ ತಂಡ ಅವರಿಗೆ 21.6 ಲಕ್ಷ ರುಪಾಯಿಗಳನ್ನು ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪ್ರತಿ ತಂಡಕ್ಕೆ ಹರಾಜಿನಲ್ಲಿ ಖರ್ಚು ಮಾಡಲು 60 ಲಕ್ಷ ರುಪಾಯಿ ನಿಗದಿ ಮಾಡಲಾಗಿತ್ತು.
60 ಲಕ್ಷ ರುಪಾಯಿಗಳಲ್ಲಿ ಲೈಕಾ ಕೋವಾಯ್ 21.6 ಲಕ್ಷ ರುಪಾಯಿಗಳನ್ನು ಒಬ್ಬ ಆಟಗಾರ ಮೇಲೆ ಖರ್ಚು ಮಾಡಿದ್ದು ಅಚ್ಚರಿ ಉಂಟು ಮಾಡಿತ್ತು. ಎಡಗೈ ಬ್ಯಾಟರ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಭಾರಿ ಪೈಪೋಟಿ ಉಂಟಾಗಿದ್ದತ್ತು, ಆದರೆ ಅಂತಿಮವಾಗಿ ಲೈಕಾ ಕೊವಾಯ್ ಗೆಲುವು ಸಾಧಿಸಿತು.

ಐಪಿಎಲ್‌ಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜು
ತಮಿಳು ನಾಡು ತಂಡದ ಆಟಗಾರ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ತಂಡಕ್ಕಾಗಿ ಆಡುತ್ತಾರೆ. ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ 20 ಲಕ್ಷ ರುಪಾಯಿ ಮೂಲ ಬೆಲೆಗೆ ಹರಾಜಾಗಿದ್ದರು. ಟಿಎನ್‌ಪಿಎಲ್‌ನಲ್ಲಿ 21.6 ಲಕ್ಷ ರುಪಾಯಿಗಳಿಗೆ ಹರಾಜಾಗುವ ಮೂಲಕ ಐಪಿಎಲ್‌ಗಿಂತ ಹೆಚ್ಚಿನ ಹಣ ಪಡೆಯುವ ಆಟಗಾರ ಎನಿಸಿಕೊಂಡರು.
2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಯಿ ಸುದರ್ಶನ್ ಗುಜರಾತ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಸೀಸನ್‌ನಲ್ಲಿ ಅವರು 5 ಪಂದ್ಯಗಳಲ್ಲಿ ಆಡಿದ್ದರು, ಆಡಿದ 5 ಪಂದ್ಯಗಳಿಂದ 145 ರನ್ ಗಳಿಸಿದ್ದರು. ಗುಜರಾತ್ ಜೈಂಟ್ಸ್ ತಂಡದಲ್ಲಿ ನಿಯಮಿತವಾಗಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, 2023ರ ಐಪಿಎಲ್‌ನಲ್ಲಿ ಕೂಡ ಅವರು ತಂಡದಲ್ಲಿ ಉಳಿದುಕೊಂಡಿದ್ದಾರೆ.

ಇತರೆ ಆಟಗಾರರಿಗೂ ಬೇಡಿಕೆ
ಸಾಯಿ ಸುದರ್ಶನ್ ಹೊರತುಪಡಿಸಿ ಆರ್ ಸಾಯಿ ಕಿಶೋರ್ ದೊಡ್ಡ ಲಾಭ ಗಳಿಸಿದರು. ತಿರುಪ್ಪುರ ತಮಿಳ್ ತಂಡ ಅವರಿಗೆ 13 ಲಕ್ಷ ರುಪಾಯಿ ನೀಡಿತು. ಮುರುಗನ್ ಅಶ್ವಿನ್ 6.40 ಲಕ್ಷ ರುಪಾಯಿಗಳಿಗೆ ಮಧುರೈ ಪ್ಯಾಂಥರ್ಸ್ ಪಾಲಾದರು. ಅರುಣ್ ಕಾರ್ತಿಕ್ ಅವರನ್ನು ನೆಲ್ಲೈ ರಾಯಲ್ ಕಿಂಗ್ಸ್ ತಂಡ 12 ಲಕ್ಷ ರುಪಾಯಿ ನೀಡಿ ಖರೀದಿ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications