Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳಿಗೆ ಶುಭಹಾರೈಸಿದ ದಿನೇಶ್ ಕಾರ್ತಿಕ್

Tokyo Olympics 2021: Dinesh Karthik wishes olympic bound Indian athletes

ಲಂಡನ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಅಥ್ಲೀಟ್‌ಗಳಿಗೆ ಭಾರತದ ಕ್ರಿಕೆಟರ್ ದಿನೇಶ್ ಕಾರ್ತಿಕ್ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗಾಗಿ ಈ ಬಾರಿ ಒಟ್ಟು 127 ಮಂದಿ ಭಾರತೀಯ ಕ್ರೀಡಾಪಟುಗಳು ತೆರಳಿದ್ದಾರೆ. ಇದು ಇಷ್ಟರವರೆಗೆ ಒಲಿಂಪಿಕ್ಸ್‌ಗೆ ಭಾರತೀಯ ತಂಡ ಹೋಗಿದ್ದರಲ್ಲಿ ಇದೇ ಅತೀ ದೊಡ್ಡ ತಂಡ. ಮಹಿಳೆಯರು ಇದರಲ್ಲಿ 50+ ಅಥ್ಲೀಟ್‌ಗಳು ಸೇರಿದ್ದಾರೆ.

"ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಟೀಮ್ ಇಂಡಿಯಾ ಅಥ್ಲೀಟ್‌ಗಳಿಗೆ ನಾನು ಶುಭಹಾರೈಸುತ್ತೇನೆ. ಕಳೆದ ಐದು ವರ್ಷಗಳಿಂದ ನೀವು ಈ ಕ್ಷಣಕ್ಕೆ ಕಾಯುತ್ತಿದ್ದೀರಿ. ನಿಮ್ಮ ಜೊತೆ 103 ಬಿಲಿಯನ್ ಜನರಿದ್ದಾರೆ. ಅವರೆಲ್ಲರೂ ನಿಮ್ಮ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಚೆನ್ನಾಗಿ ಆಡಿ. ಕ್ರೀಡಾಕೂಟವನ್ನು ಎಂಜಾಯ್ ಮಾಡಿ. ನೀವು ನಮ್ಮ ದೇಶ ಪ್ರತಿನಿಧಿಸುತ್ತಿರುವುದು ನಮಗೆ ಹೆಮ್ಮೆಯಿದೆ," ಎಂದು ಫೇಸ್ಬುಕ್‌ ಪೇಜ್‌ನಲ್ಲಿ ಡಿಕೆ ಹೇಳಿದ್ದಾರೆ.

ಸದ್ಯ ದಿನೇಶ್ ಕಾರ್ತಿಕ್ ಭಾರತೀಯ ತಂಡದ ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಭಾರತಕ್ಕೆ ಶೂಟಿಂಗ್, ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್ ಮೊದಲಾದ ಕ್ರೀಡೆಗಳಲ್ಲಿ ಪದಕದ ಸಾಧ್ಯತೆಗಳಿವೆ.

Story first published: Friday, July 23, 2021, 18:58 [IST]
Other articles published on Jul 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+