For Quick Alerts
ALLOW NOTIFICATIONS  
For Daily Alerts
 

ಟಾಮ್ ಬ್ಯಾಂಟನ್ ಐಪಿಎಲ್ ಗೆ ಪಾದಾರ್ಪಣೆ: ಇಂಗ್ಲೆಂಡ್ ಬ್ಯಾಟಿಂಗ್ ವಂಡರ್ ಕಿಡ್ ಬಗ್ಗೆ ತಿಳಿಯಿರಿ

Tom Bonton IPL Debut: Who Is This Wonder Kid

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶಾರ್ಜಾ ಮೈದಾನದಲ್ಲಿ ಕೆಕೆಆರ್ ಪರ ಓಪನಿಂಗ್ ಮಾಡಿದ ಟಾಮ್ ಬ್ಯಾಂಟನ್ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಓಪನಿಂಗ್ ಇಳಿದು ಎಲ್ಲರಿಗೂ ಆಶ್ಚರ್ಯ ಮೂಡಿಸಿದರು.

ಆಡಿದ ಮೊದಲ ಐಪಿಎಲ್ ಪಂದ್ಯದಲ್ಲೇ ಆರ್‌ಸಿಬಿಯ ಬೃಹತ್ ಟಾರ್ಗೆಟ್ ಬೆನ್ನತ್ತಲು ಶುಭ್ಮನ್ ಗಿಲ್ ಜೊತೆ ಕಣಕ್ಕಿಳಿದ ಟಾಮ್ ಬ್ಯಾಂಟನ್ ಕುರಿತು ಸಾಕಷ್ಟು ಕುತೂಹಲ ಮೂಡಿದ್ದು ಸಹಜ. 21 ವರ್ಷದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ನ ಸುತ್ತಲಿನ ಪ್ರಚೋದನೆಯಿಂದಾಗಿ ಬ್ಯಾಂಟನ್‌ರವರು ಐಪಿಎಲ್ 2020 ರಲ್ಲಿ ಹೆಚ್ಚು ನಿರೀಕ್ಷಿತ ಚೊಚ್ಚಲ ಪಂದ್ಯ ಎಂದು ಹೇಳುವುದು ತಪ್ಪಾಗಲಾರದು. ಯುಎಇನಲ್ಲಿ ಐಪಿಎಲ್‌ಗಿಂತ ಸ್ವಲ್ಪ ಮುಂಚಿತವಾಗಿ ಆಸ್ಟ್ರೇಲಿಯಾ ವಿರುದ್ಧದ ಇಂಗ್ಲೆಂಡ್‌ನ ತವರು ಸರಣಿಯಲ್ಲಿ ಬ್ಯಾಂಟನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತನ್ನ ತಾಕತ್ತನ್ನ ತೋರಿಸಿದರು.

ಆದರೆ 2017 ರ ಇಂಗ್ಲೆಂಡ್ ದೇಶೀಯ ಋತುವಿನಲ್ಲಿ ಟಿ 20 ಪಂದ್ಯದಲ್ಲಿ ಸೋಮರ್‌ಸೆಟ್‌ಗೆ ಪಾದಾರ್ಪಣೆ ಮಾಡಿದಾಗ ಬ್ಯಾಂಟನ್ ಬಗ್ಗೆ ಮಾತುಕತೆ ಪ್ರಾರಂಭವಾಗಿತ್ತು. ಅಂದಿನಿಂದ ಅವನನ್ನು ದೊಡ್ಡ ವಿಷಯಗಳಿಗಾಗಿ ಗುರುತಿಸಲಾಯಿತು. ಆದರೆ 2019 ರಲ್ಲಿ ಅವರು ದೇಶೀಯ ಸ್ಪರ್ಧೆಗಳಲ್ಲಿ ಸೋಮರ್‌ಸೆಟ್‌ಗಾಗಿ ರನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಕೊಳ್ಳೆ ಹೊಡೆದಾಗ ಬ್ರೇಕ್‌ ಔಟ್ ಸೀಸನ್ ಬಂದಿತು.

ಸೋಮರ್‌ಸೆಟ್‌ನ ವಿಜಯಶಾಲಿ ಏಕದಿನ ಕಪ್ ಅಭಿಯಾನದಲ್ಲಿ ಬ್ಯಾಂಟನ್ 454 ರನ್ ಗಳಿಸಿದರು ಮತ್ತು ನಂತರ ವೈಟಾಲಿಟಿ ಬ್ಲಾಸ್ಟ್‌ನಲ್ಲಿ ದೂರದರ್ಶನದ ಪಂದ್ಯವೊಂದರಲ್ಲಿ 52 ಎಸೆತ 100 ಸೇರಿದಂತೆ ಅವರ ಪ್ರದರ್ಶನ ಎಲ್ಲರ ಹುಬ್ಬೇರಿಸಿತು.

ಈತನ ಸ್ಥಿರ ಪ್ರದರ್ಶನದಿಂದಾಗಿ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಕೂಡಲೇ ಕರೆ ಬಂದಿತು. ಆತ ಕಳೆದ ವರ್ಷ ಅಬುಧಾಬಿ ಟಿ 10 ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು 28 ಎಸೆತಗಳಲ್ಲಿ 80 ರನ್ ಗಳಿಸಿದರು. 2019 ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿಗೆ ಸ್ವಲ್ಪ ಮುಂಚೆಯೇ ಅವಕಾಶ ಒದಿಗಿದ್ದರಿಂದ ಕೆಕೆಆರ್ ಪರ ಕಣಕ್ಕಿಳಿದರು.

ಸುನಿಲ್ ನರೈನ್ ಸ್ಥಾನದಲ್ಲಿ ಕೆಕೆಆರ್ ಪರ ಅವಕಾಶ ಪಡೆದ ಟಾಮ್ ಬ್ಯಾಂಟನ್, 8ರನ್‌ಗಳಿಸಿ ಆರ್‌ಸಿಬಿ ಬೌಲರ್ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ್ರು.

Story first published: Tuesday, October 13, 2020, 9:57 [IST]
Other articles published on Oct 13, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+