Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ ಕಿವೀಸ್‌ ಪರ ಆರಂಭದಲ್ಲಿ ಈ ಆಟಗಾರ ಆಡುವುದು ಡೌಟ್‌!

Tom Latham in doubt for World Cup opener after sustaining injury

ಆಕ್ಲೆಂಡ್‌, ಮೇ 17: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಆರಂಭಕ್ಕೆ ಇನ್ನು ಎರಡೇ ವಾರ ಬಾಕಿಯುದ್ದು, ಕಳೆದ ಬಾರಿಯ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡಕ್ಕೆ ಭಾರಿ ಆಘಾತ ಎದುರಾಗಿದೆ.

ಕೈಬೆರಳು ಮುರಿತದ ಗಾಯದ ಸಮಸ್ಯೆಗೆ ತುತ್ತಾಗಿರುವ ನ್ಯೂಜಿಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್‌ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ಕೀರ್‌ ಟಾಮ್‌ ಟಾಮ್‌ ಲೇಥಮ್‌, ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಆರಂಭವಾಗಲಿರುವ ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.

ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿರುವ ನ್ಯೂಜಿಲೆಂಡ್‌, ಮೇ 25ರಂದು ಭಾರತದ ವಿರುದ್ಧ ಓವಲ್‌ನಲ್ಲಿ ಮೊದಲ ಅಭ್ಯಾಸ ಪಂದ್ಯವನ್ನಾಡಲಿದ್ದು, 2ನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೇ 28ರಂದು ಬ್ರಿಸ್ಟೋಲ್‌ನಲ್ಲಿ ಕಣಕ್ಕಿಳಿಯಲಿದೆ. ಇನ್ನು ಜೂನ್‌ 1ರಂದು ಕಾರ್ಡಿಫ್‌ನಲ್ಲಿ ಮಾಜಿ ಚಾಂಪಿಯನ್ಸ್‌ ಶ್ರೀಲಂಕಾ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ವರದಿಗಳ ಪ್ರಕಾರ ಈ ಮೂರೂ ಪಂದ್ಯಗಳಲ್ಲಿ 27 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಆಡುವುದು ಅನುಮಾನವಾಗಿದೆ. ಆದರೆ, ಗಾಯದ ಸಮಸ್ಯೆಯಿಂದ ಬೇಗನೆ ಚೇತರಿಸಲು ಅವಕಾಶವಿದ್ದು ನ್ಯೂಜಿಲೆಂಡ್‌ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲು ಲೇಥಮ್‌ಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಅನುಮತಿ ನೀಡಿದೆ. ಮೇ 19ರಂದು ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.

ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ನ್ಯೂಜಿಲೆಂಡ್‌ ಇಲೆವೆನ್‌ ಪರ ಆಡಿದ ಲೇಥಮ್‌ ವಿಕೆಟ್‌ಕೀಪಿಂಗ್‌ ವೇಳೆ ತಮ್ಮ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ನಿಗದಿತ ಸಮಯದ ಹೊತ್ತಿಗೆ ಅವರು ಚೇತರಿಸದೇ ಇದ್ದರೆ, ಕಾಯ್ದಿರಿಸಲ್ಪಟ್ಟ ವಿಕೆಟ್‌ಕೀಪರ್‌ ಟಾಮ್‌ ಬ್ಲಂಡಲ್‌ ತಂಡ ಸೇರಿಕೊಳ್ಳಲಿದ್ದಾರೆ. ಇದು ಸಾಧ್ಯವಾದರೆ, ಡ್ಯಾನಿ ಮಾರಿಸ್ಸನ್‌ 1987ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ವಿಶ್ವಕಪ್‌ನಲ್ಲಿ ಕಿವೀಸ್‌ ಪಡೆಗೆ ಕಾಲಿಟ್ಟ ಮೊದಲ ಕಿವೀಸ್‌ ಆಟಗಾರ ಎನಿಸಿಕೊಳ್ಳಲಿದ್ದಾರೆ.

ವಿಶ್ವಕಪ್‌ಗೆ ನ್ಯೂಜಿಲೆಂಡ್‌ ಪ್ರಕಟಿಸಿರುವ ತಂಡ ಇಂತಿದೆ
ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಂಡಲ್‌, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌, ಲಾಕಿ ಫರ್‌ಗ್ಯೂಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲೇಥಮ್‌(ವಿಕೆಟ್‌ಕೀಪರ್‌), ಕಾಲಿನ್‌ ಮನ್ರೊ, ಜಿಮ್ಮಿ ನೀಶಮ್‌, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥೀ, ರಾಸ್‌ ಟೇಲರ್‌.

Story first published: Friday, May 17, 2019, 18:18 [IST]
Other articles published on May 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+