Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಜಸ್ಥಾನವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ: ಹೈದರಾಬಾದ್‌ಗೆ ಎಚ್ಚರಿಕೆ!

ತನ್ನ ತಂಡಕ್ಕೆ ಎಚ್ಚರಿಕೆ ನೀಡಿದ ಹೈದರಾಬಾದ್ ಕೋಚ್..! |Oneindia Kannada
Tom Moody cautions Sunrisers Hyderabad against taking Rajasthan Royals lightly

ಜೈಪುರ, ಏಪ್ರಿಲ್ 27: ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಅವರಂತ ಆಟಗಾರರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇಲ್ಲವೆಂದು ಆರ್‌ಆರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಸನ್ ರೈಸರ್ಸ್ ಹೈದರಾಬಾದ್‌ಗೆ ಅದೇ ತಂಡದ ಕೋಚ್ ಟಾಮ್ ಮೂಡಿ ಎಚ್ಚರಿಸಿದ್ದಾರೆ.

ಪ್ಲೇ ಆಫ್ ನ ಸಮೀಪದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಶನಿವಾರ (ಏಪ್ರಿಲ್ 27) ಜೈಪುರ್‌ನಲ್ಲಿ ನಡೆಯಲಿರುವ ಐಪಿಎಲ್ 45ನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ ಸವಾಲು ಸ್ವೀಕರಿಸಲಿದೆ. ಸದ್ಯ ಅಂಕಪಟ್ಟಿಯಲ್ಲಿ ಹೈದರಾಬಾದ್ 4ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ 7ನೇ ಸ್ಥಾನದಲ್ಲಿದೆ.

'ರಾಜಸ್ಥಾನ್ ದುರ್ಬಲ ತಂಡವೆಂದು ನಾನು ಯಾವತ್ತಿಗೂ ಹೇಳಲಾರೆ. ಯಾಕೆಂದರೆ ಒಂದು ತಂಡ ಯಾರಾದರೂ ಪ್ರಮುಖ ಆಟಗಾರರನ್ನು ಕಳೆದುಕೊಳ್ಳುತ್ತದೆ ಎಂದರೆ, ಅದರರ್ಥ ಆ ತಂಡ ದುರ್ಬಲವೆಂದಲ್ಲ. ಬದಲಿಗೆ ಅವಕಾಶಕ್ಕಾಗಿ ಹಾತೊರೆಯುವ ಯುವ ಆಟಗಾರರು ಇನ್ನೂ ಇದ್ದಾರೆ ಎಂಬುದು' ಎಂದು ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಡಿ ಹೇಳಿದರು.

'ನೀವು ಯಾವತ್ತಿಗೂ ಎದುರಾಳಿ ತಂಡವನ್ನು ತಪ್ಪಾಗಿ ಭಾವಿಸಲು ಹೋಗಬೇಡಿ, ಹಗುರವಾಗಿ ತೆಗೆದುಕೊಳ್ಳಬೇಡಿ. ಕೆಲ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅವರಿಗೆ ಅವಕಾಶ ಸಿಗುತ್ತಲೇ ಅದ್ಭುತ ಪ್ರದರ್ಶನ ನೀಡುವ ಸಾಧ್ಯತೆಯೂ ಇರುತ್ತದೆ' ಎಂದು ಹೈದರಾಬಾದ್‌ ತಂಡಕ್ಕೆ ಆಸ್ಟ್ರೇಲಿಯಾ ಮಾಜಿ ಆಟಗಾರ ಮೂಡಿ ಅಮೂಲ್ಯ ಸಂದೇಶ ರವಾನಿಸಿದ್ದಾರೆ.

Story first published: Saturday, April 27, 2019, 0:35 [IST]
Other articles published on Apr 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+