Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR ಸೋಲಿಗೆ ಪದೇ, ಪದೇ ತಂಡದಲ್ಲಿನ ಬದಲಾವಣೆ ಕಾರಣ ಎಂದ ಕೆವಿನ್ ಪೀಟರ್ಸಸ್

Kevin Pietersen

ಐಪಿಎಲ್ 15ನೇ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ತಂಡವಾಗಿದ್ದರೂ ಸಹ ಪ್ಲೇ ಆಫ್ ತಲುಪಲು ವಿಫಲವಾಗಿರುವ ಕಾರಣವನ್ನ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮತ್ತು ಕಮೆಂಟೇಟರ್ ಕೆವಿನ್ ಪೀಟರ್ಸನ್ ವಿವರಿಸಿದ್ದಾರೆ.

ಕೆಕೆಆರ್ ಈ ಸೀಸನ್‌ನಲ್ಲಿ ಪೇಪರ್‌ನಲ್ಲಿ ಬಲಿಷ್ಠ ತಂಡವಾಗಿದ್ದರೂ ಸಹ ಪಾಯಿಂಟ್ಸ್‌ ಟೇಬಲ್‌ನ ಕೆಳಗಿನ ಅರ್ಧಭಾಗದಲ್ಲಿ ಕಾಣಿಸಿಕೊಳ್ಳಲು ತಂಡದೊಳಗಿನ ನಿರ್ಧಾರವೇ ಪ್ರಮುಖ ಕಾರಣ ಎಂದಿದ್ದಾರೆ. ಕಳೆದ ಸೀಸನ್‌ ರನ್ನರ್ ಅಪ್ ತಂಡವು ಸೀಸನ್‌ನ ಮಧ್ಯದಲ್ಲಿ ಸತತವಾಗಿ ಐದು ಪಂದ್ಯಗಳನ್ನು ಕಳೆದುಕೊಂಡಿದ್ದರಿಂದ ನಿರೀಕ್ಷೆಗೆ ತಕ್ಕಂತೆ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ.

ಟಾಟಾ ಐಪಿಎಲ್ 2022ರಲ್ಲಿ ಫ್ಲಾಪ್ ಶೋ ತೋರಿರುವ ಕೆಕೆಆರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ ಎಂದು ಪೀಟರ್ಸನ್ ದೂಷಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕ್ರಿಕೆಟ್ ಲೈವ್‌ನಲ್ಲಿ ಮಾತನಾಡುತ್ತಾ, ಪೀಟರ್ಸಸ್ "ಕೆಕೆಆರ್‌ನ ನಿರಾಶಾದಾಯಕ ಪ್ರದರ್ಶನಕ್ಕೆ ಹೆಚ್ಚು ತಂಡದ ಬದಲಾವಣೆ ಕಾರಣವಾಗಿದೆ. ಏಕೆಂದರೆ ಆಟಗಾರರು ಇದು ತಮ್ಮ ಕೊನೆಯ ಪಂದ್ಯ ಎಂದು ಪ್ರತಿ ಪಂದ್ಯದಲ್ಲಿ ಭಾವಿಸುತ್ತಾರೆ ಮತ್ತು ಅವರು ಪ್ರದರ್ಶನ ನೀಡಬೇಕಾಗಿದೆ ಅಥವಾ ಅವರು ಹೊರಗುಳಿಯಬಹುದು. ಈ ಸ್ವರೂಪವು ಆಟಗಾರರನ್ನು ರೂಪಿಸುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ . ಹೀಗಾಗಿ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಬದ್ಧತೆಯಾಗಿರಬೇಕೆಂದು ಭಾವಿಸುತ್ತಾರೆ. ಆದ್ರೆ ಹೆಚ್ಚು ಕಡಿತಗೊಳಿಸುವುದು ಮತ್ತು ಬದಲಾಯಿಸಿದರೆ ನೀವು ಆ ಬದ್ಧತೆಯನ್ನು ನೀಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಕೆವಿನ್ ಪೀಟರ್ಸಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ (ಮೇ. 18) ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಾದಾಟ ನಡೆಸಲಿದೆ. ಲಕ್ನೋ ಸೂಪರ್ ಜೈಂಟ್ಸ್ ಈ ಋತುವಿನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ಕೆಎಲ್ ರಾಹುಲ್ ನೇತೃತ್ವದ ತಂಡವು ಸತತ ಎರಡು ಸೋಲುಗಳನ್ನು ಅನುಭವಿಸಿದ ನಂತರ ಇನ್ನೂ ಪ್ಲೇ ಆಫ್ ಸ್ಥಾನವನ್ನು ಕಾಯ್ದಿರಿಸಿಲ್ಲ. ಆದ್ರೆ ಇಂದು ಕೆಕೆಆರ್ ವಿರುದ್ಧ ಜಯ ಸಾಧಿಸಿದ್ದೇ ಆದಲ್ಲಿ ಲಕ್ನೋ ಪ್ಲೇ ಆಫ್ ಸ್ಥಾನ ಖಚಿತಗೊಳ್ಳಲಿದೆ.

Story first published: Wednesday, May 18, 2022, 16:30 [IST]
Other articles published on May 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+