ಐಪಿಎಲ್ ಇತಿಹಾಸದ ಅತಿ ದೊಡ್ಡ ಗೆಲುವುಗಳು ಯಾವುವು? ಈ ಪಟ್ಟಿಯಲ್ಲಿ RCBಗೆ ಎಷ್ಟನೇ ಸ್ಥಾನ?
ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿ ಬಾರಿಯೂ ರೋಮಾಂಚಕವಾಗಿ ನಡೆದಿವೆ. ಹಲವು ಬಾರಿ ಪಂದ್ಯಗಳು ಏಕಪಕ್ಷೀಯವಾದರೆ, ಇನ್ನು ಹಲವು ಬಾರಿ ತಂಡಗಳು ಚಿಕ್ಕ ಅಂತರದ ಗೆಲುವನ್ನು ಸಾಧಿಸಿವೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವು ಯಾವುದು? ಅಗ್ರ ಸ್ಥಾನದಲ್ಲಿರುವು ತಂಡ ಯಾವುದು? ಎಂಬ ಮಾಹಿತಿ ಇಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ರನ್‌ಗಳ ಲೆಕ್ಕಾಚಾರದಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಕೀರ್ತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲ್ಲುತ್ತದೆ. 2017ರ ಐಪಿಎಲ್‌ನ 45ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಡೆಲ್ಲಿ 13.4 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ 146 ರನ್‌ಗಳ ಜಯ ದಾಖಲಿಸಿತು. ಇದು ಐಪಿಎಲ್‌ನಲ್ಲಿ ರನ್‌ಗಳ ಅಂತರದಲ್ಲಿ ದಾಖಲಾದ ಅತಿ ದೊಡ್ಡ ಗೆಲುವಾಗಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಾಣಿಸಿಕೊಳ್ಳುತ್ತದೆ. 2016ರ ಐಪಿಎಲ್ ಆವೃತ್ತಿಯ 44ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 248 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ 18.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ 144 ರನ್‌ಗಳ ಅಂತರದಿಂದ ಜಯ ಸಾಧಿಸಿತು.
140 ರನ್ ಜಯ ಸಾಧಿಸಿದ್ದ ಕೆಕೆಆರ್
ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಪಂದ್ಯ ನಡೆದಿದ್ದು 2008, ಏಪ್ರಿಲ್ 18 ರಂದು. ಅಂದು ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಆರ್‌ಸಿಬಿ 15.1 ಓವರ್‌ಗಳಲ್ಲಿ 82 ರನ್ ಸೇರಿಸಿ ಸರ್ವಪತನ ಕಂಡಿತು. ಕೆಕೆಆರ್ 140 ರನ್ ಗೆಲುವಿನ ನಗೆ ಬೀರಿತ್ತು.
ಆರ್‌ಸಿಬಿಗೂ ಪಟ್ಟಿಯಲ್ಲಿ ಸ್ಥಾನ
ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮತ್ತೆ ಆರ್‌ಸಿಬಿ ತಂಡ ಸ್ಥಾನ ಪಡೆದಿದೆ. ಮೇ 6, 2015 ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 3 ವಿಕೆಟ್‌ಗೆ 226 ರನ್ ಸೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಪಂಜಾಬ್ ಇಲೆವೆನ್ ಪಂಜಾಬ್ 88 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ 138 ರನ್ ಅಂತರದ ಜಯ ಸಾಧಿಸಿತು.

ಈ ಪಟ್ಟಿಯ ಐದನೇ ಸ್ಥಾನದಲ್ಲಿ ಆರ್‌ಸಿಬಿ ತಂಡ ಕಾಣಿಸಿಕೊಳ್ಳುತ್ತದೆ. ಈ ತಂಡ 2013ರ ಐಪಿಎಲ್‌ನ 31ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 5 ವಿಕೆಟ್‌ಗೆ 263 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್ ಸೇರಿಸಿತ್ತು. ಆರ್‌ಸಿಬಿ 130 ರನ್ ಗೆಲುವು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications