For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

Top 5 most runs records in international cricket

ಬೆಂಗಳೂರು: ದಾಖಲೆಗಳು ನಿರ್ಮಾಣವಾಗದೆ ಕ್ರಿಕೆಟ್‌ ಪಂದ್ಯವೊಂದು ನಡೆಯಲು ಸಾಧ್ಯವಿಲ್ಲ. ಕ್ರಿಕೆಟ್ ಅನ್ನೋದೇ ಅಂಕಿ-ಅಂಶಗಳನ್ನಾವಲಂಭಿಸಿ ನಡೆಯುವ ಆಟವಾದ್ದರಿಂದ ಕ್ರಿಕೆಟ್ ಪಂದ್ಯ ನಡೆಯುತ್ತಲೇ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತದೆ. ಹೀಗೆ ಸೃಷ್ಟಿಯಾಗುವ ಕೆಲ ಅಪರೂಪದ ದಾಖಲೆಗಳನ್ನು ಯಾರೊಬ್ಬರೂ ಮುರಿಯಲು ಸಾಧ್ಯವಿಲ್ಲ. ಅವು ಅಪರೂಪದ ಸನ್ನಿವೇಶದಲ್ಲಿ, ಅಥವಾ ವಿಶೇಷ ಪ್ರತಿಭೆಯಡಿಯಲ್ಲಿ ನಿರ್ಮಾಣವಾಗುವ ದಾಖಲೆಗಳು. ಇನ್ನು ಹೆಚ್ಚಿನ ದಾಖಲೆಗಳನ್ನು ಒಬ್ಬಲ್ಲ ಒಬ್ಬ ಪ್ರತಿಭಾನ್ವಿತ ಆಟಗಾರ ಮುರಿಯುತ್ತಾ ಸಾಗಿದ್ದನ್ನೂ ನಾವು ನೋಡಿದ್ದೇವೆ.

ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ದಾಖಲೆಗಳು ನಿರ್ಮಾಣವಾಗಿವೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಕ್ಯಾಚ್, ಹ್ಯಾಟ್ರಿಕ್, ಟೋಟಲ್ ರನ್, ಅತೀ ಕನಿಷ್ಟ ರನ್ ಹೀಗೆ ಪ್ರತಿಯೊಂದರಲ್ಲೂ ದಾಖಲೆಗಳಾಗಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ದಾಖಲೆ ನಿರ್ಮಿಸಿರುವ 5 ಬ್ಯಾಟ್ಸ್‌ಮನ್‌ಗಳ ವಿವರ ಇಲ್ಲಿದೆ.

1. ಸಚಿನ್ ತೆಂಡೂಲ್ಕರ್

1. ಸಚಿನ್ ತೆಂಡೂಲ್ಕರ್

'ಕ್ರಿಕೆಟ್ ದೇವರು' ಎಂದು ಕರೆಯಲಾಗುವ ಭಾರತದ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿಲ್ಲದ ಕ್ರಿಕೆಟ್‌ನ ದಾಖಲೆ ಪಟ್ಟಿಯೊಂದು ಕಾಣಸಿಗುವುದೇ ಅಪರೂಪ. ಬಹುತೇಕ ದಾಖಲೆ ಪಟ್ಟಿಗಳಲ್ಲಿ ಸಚಿನ್ ಇದ್ದೇ ಇರುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲೂ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ಒಟ್ಟಿಗೆ 664 ಪಂದ್ಯಗಳಲ್ಲಿ 48.52ರ ಸರಾಸರಿಯಲ್ಲಿ 34357 ರನ್ ಗಳಿಸಿದ್ದಾರೆ. ಇದರಲ್ಲಿ 100 ಶತಕಗಳು, 164 ಅರ್ಧ ಶತಕಗಳು ಸೇರಿವೆ. ಸಚಿನ್ ಒಟ್ಟಿಗೆ 34 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರು.

2. ಕುಮಾರ ಸಂಗಕ್ಕಾರ

2. ಕುಮಾರ ಸಂಗಕ್ಕಾರ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅತ್ಯಧಿಕ ಅಂತಾರಾಷ್ಟ್ರೀಯ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 594 ಪಂದ್ಯಗಳನ್ನಾಡಿರುವ ಸಂಗಕ್ಕಾರ, 46.77ರ ಸರಾಸರಿಯಂತೆ 28016 ರನ್ ಗಳಿಸಿದ್ದಾರೆ. 63 ಶತಕಗಳು ಮತ್ತು 153 ಬಾರಿ ಅರ್ಧ ಶತಕ ಬಾರಿಸಿದ್ದಾರೆ. 28 ಬಾರಿ ಸಂಗಕ್ಕಾರ ರನ್ ಬಾರಿಸದೆ ಔಟಾಗಿದ್ದರು.

3. ರಿಕಿ ಪಾಂಟಿಂಗ್

3. ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅದ್ಭುತ ಬ್ಯಾಟಿಂಗ್‌ಗಾಗಿ ಗುರುತಿಸಿಕೊಂಡಿದ್ದವರು. 560 ಪಂದ್ಯಗಳಲ್ಲಿ 45.95ರ ಸರಾಸರಿಯಲ್ಲಿ ಪಾಂಟಿಂಗ್ 27483 ರನ್ ಬಾರಿಸಿದ್ದಾರೆ. ಇದರಲ್ಲಿ 71 ಶತಕಗಳು, 146 ಅರ್ಧ ಶತಕಗಳು ಸೇರಿವೆ. ಒಟ್ಟು 39 ಸಾರಿ ರಿಕಿ ಸೊನ್ನೆಗೆ ವಿಕೆಟ್ ನೀಡಿದ್ದರು.

4. ಮಹೇಲ ಜಯವರ್ದನೆ

4. ಮಹೇಲ ಜಯವರ್ದನೆ

ಶ್ರೀಲಂಕಾದ ಮತ್ತೊಬ್ಬ ಪ್ರತಿಭಾನ್ವಿತ ದಾಂಡಿಗ ಮಹೇಲ ಜಯವರ್ದನೆ ಕೂಡ ಅಂತಾರಾಷ್ಟ್ರೀಯ ಅತ್ಯಧಿಕರ ರನ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 652 ಪಂದ್ಯಗಳನ್ನಾಡಿರುವ ಜಯವರ್ದನೆ 39.15ರ ಸರಾಸರಿಯಲ್ಲಿ 25957 ರನ್ ಬಾರಿಸಿದ್ದಾರೆ. 54 ಶತಕ, 136 ಅರ್ಧ ಶತಕಗಳ ದಾಖಲೆ ಜಯವರ್ದನೆ ಹೆಸರಿನಲ್ಲಿದೆ. 47 ಸಾರಿ ಜಯವರ್ಧನೆ 0ಗೆ ನಿರಾಸೆ ಅನುಭವಿಸಿದ್ದರು.

5. ಜಾಕ್ ಕ್ಯಾಲೀಸ್

5. ಜಾಕ್ ಕ್ಯಾಲೀಸ್

ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಜಾಕ್ ಕ್ಯಾಲೀಸ್ ಅಧ್ಬುತ ಬ್ಯಾಟಿಂಗ್‌ಗೆ ಗಮನ ಸೆಳೆದಿದ್ದವರು. ದಕ್ಷಿಣ ಆಫ್ರಿಕಾ ಪರ 519 ಪಂದ್ಯಗಳನ್ನಾಡಿರುವ ಕ್ಯಾಲೀಸ್ 49.10ರ ಸರಾಸರಿಯಂತೆ 25534 ರನ್ ಗಳಿಸಿದ್ದಾರೆ. 62 ಶತಕ, 149 ಅರ್ಧ ಶತಕಗಳ ದಾಖಲೆ ಹೊಂದಿರುವ ಕ್ಯಾಲೀಸ್ ಒಟ್ಟಿಗೆ 33 ಸಾರಿ ಡಕ್ ಔಟ್ ಆಗಿದ್ದಾರೆ.
(ಇನ್ನುಳಿದ ಸ್ಥಾನಗಳಲ್ಲಿ ರಾಹುಲ್ ದ್ರಾವಿಡ್-24208 ರನ್, ಬ್ರಿಯಾನ್ ಲಾರಾ-22358 ರನ್, ವಿರಾಟ್ ಕೊಹ್ಲಿ-21901 ರನ್, ಸನತ್ ಜಯಸೂರ್ಯ-21032 ರನ್, ಶಿವನರೇನ್ ಚಂದ್ರಪಾಲ್-20988 ಇದ್ದಾರೆ).

Story first published: Saturday, July 11, 2020, 19:34 [IST]
Other articles published on Jul 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+