ಭಾರತ ಹಾಗೂ ಪಾಕ್ ನಡುವಣ ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂಗಳ ಸಿದ್ಧವಾಗುತ್ತಿದೆ. ಇದೇ ಆಂಗಳದಲ್ಲಿ ಈಗಾಗಲೇ ಟೀಮ್ ಇಂಡಿಯಾ ಈ ಅಂಗಳದಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈಗ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಪಾಕ್ ವಿರುದ್ಧ ಕಾದಾಟ ನಡೆಸಲಿದೆ.
ಉಭಯ ತಂಡಗಳ ನಡುವಣ ಈ ಹಿಂದೆಯೂ ಟಿ20 ಪಂದ್ಯಗಳು ನಡೆದಿವೆ. ಹಾಗಿದ್ದರೆ ಭಾರತ ಹಾಗೂ ಪಾಕ್ ನಡುವಣ ಕಾದಾಟದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಸ್‌ಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಹಾರ್ದಿಕ್ ಪಾಂಡ್ಯ ನಂಬರ್ 1 ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ಪಾಕ್ ವಿರುದ್ಧ ಆಡಿದ 7 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ್ದಾರೆ. ಇನಿಂಗ್ಸ್ ಒಂದರಲ್ಲಿ 8 ರನ್ ನೀಡಿ ಮೂರು ವಿಕೆಟ್ ಪಡೆದಿರುವುದೇ ಹಾರ್ದಿಕ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತದವರೇ ಆದ ಭುವನೇಶ್ವರ್ ಕುಮಾರ್ ಇದ್ದಾರೆ. ಇವರು ಪಾಕ್ ವಿರುದ್ಧ ಒಟ್ಟು 7 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು 11 ವಿಕೆಟ್ ಪಡೆದಿದ್ದಾರೆ. ಈ ವೇಳೆ ಒಂದೇ ಇನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದೇ ಗರಿಷ್ಠ ಸಾಧನೆ ಆಗಿದೆ.
ಹಾರ್ದಿಕ್ ಪಾಂಡ್ಯ, ಭಾರತ, 7 ಪಂದ್ಯ, 13 ವಿಕೆಟ್
ಭುವನೇಶ್ವರ್ ಕುಮಾರ್, ಭಾರತ, 7 ಪಂದ್ಯ, 11 ವಿಕೆಟ್
ಉಮರ್ ಗುಲ್, ಪಾಕಿಸ್ತಾನ, 6 ಪಂದ್ಯ, 11 ವಿಕೆಟ್
ನಾಸೀಮ್ ಶಾ, ಪಾಕಿಸ್ತಾನ, 4 ಪಂದ್ಯ, 7 ವಿಕೆಟ್
ಅರ್ಷದೀಪ್ ಸಿಂಗ್, ಭಾರತ, 4 ಪಂದ್ಯ, 7 ವಿಕೆಟ್
ಉಭಯ ದೇಶಗಳು ಕಣಕ್ಕೆ ಇಳಿದಾಗ ಒಟ್ಟು ಮೂರು ಬೌಲರ್‌ಗಳು ನಾಲ್ಕು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. 2007ರಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡದ ಮೊಹಮ್ಮದ್ ಆಸೀಫ್ 18 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇನ್ನು 2022ರ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ವಿಂಗ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿದ್ದ ಭುವನೇಶ್ವರ್ ಕುಮಾರ್ 26 ರನ್ ನೀಡಿ 4 ವಿಕೆಟ್ ಪಡೆದಿದ್ದರು. 2012ರಲ್ಲಿ ನಡೆದಿದ್ದ ಪಂದ್ಯದಲ್ಲಿ ಉಮರ್ ಗುಲ್ 37 ರನ್ ನೀಡಿ 4 ವಿಕೆಟ್ ಪಡೆದಿದ್ದರು.

ಭುವನೇಶ್ವರ್ ಕುಮಾರ್, 26 ರನ್ 4 ವಿಕೆಟ್
ಹಾರ್ದಿಕ್ ಪಾಂಡ್ಯ, 8 ರನ್, 3 ವಿಕೆಟ್
ಭುವನೇಶ್ವರ್ ಕುಮಾರ್, 9 ರನ್, 3 ವಿಕೆಟ್
ಜಸ್ಪ್ರೀತ್ ಬುಮ್ರಾ, 14 ರನ್, 3 ವಿಕೆಟ್
ಇರ್ಫಾನ್ ಪಠಾಣ್, 16 ರನ್, 3 ವಿಕೆಟ್