Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳು

Top five Bowlers with most five-wicket in an innings in Tests

ಬೆಂಗಳೂರು: ವೃತ್ತಿ ಬದುಕಿನಲ್ಲಿ 800 ವಿಕೆಟ್‌ ಪಡೆದ, ಒಂದೇ ಇನ್ನಿಂಗ್ಸ್‌ನಲ್ಲಿ 10ಕ್ಕೆ ಹತ್ತೂ ವಿಕೆಟ್‌ಗಳನ್ನು ಉರುಳಿಸಿದ ಅಪ್ರತಿಮ ಬೌಲರ್‌ಗಳಿದ್ದಾರೆ. ಸುದೀರ್ಘ ಕ್ರಿಕೆಟ್ ಮಾದರಿ ಟೆಸ್ಟ್‌ನಲ್ಲಿ ಅದ್ಭುತ ಬೌಲಿಂಗ್ ಸಾಧನೆ ತೋರಿದ ಬೌಲಿಂಗ್ ಮಾಂತ್ರಿಕರಿದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್ ಮಾದರಿಯಾದ ಟೆಸ್ಟ್‌ನಲ್ಲಿ ಅಪರೂಪದ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಅನೇಕ ದಂತಕತೆಗಳ ಬಗ್ಗೆ ನಾವು ಕೇಳಿದ್ದೇವೆ. ಈ ಬಾರಿ ಟೆಸ್ಟ್‌ನಲ್ಲಿ ಬೌಲಿಂಗ್‌ಗಾಗಿ ದಾಖಲೆ ನಿರ್ಮಿಸಿರುವ, ಅಪರೂಪದ ಸಾಧಕರ ಟಾಪ್ ಐದು ಪಟ್ಟಿಯಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್‌ ಪಡೆಯುವ ಬೌಲರ್ ವಿಶೇಷ ಗೌರವ ಗಿಟ್ಟಿಸಿಕೊಳ್ಳುತ್ತಾನೆ. ಬೌಲರ್‌ ಒಬ್ಬ 5ಕ್ಕೂ ಹೆಚ್ಚು ವಿಕೆಟ್‌ ಪಡೆಯುತ್ತಾನೆಂದರೆ ಅದೊಂಥರಾ ಬ್ಯಾಟ್ಸ್‌ಮನ್ ಶತಕಕ್ಕೂ ಹೆಚ್ಚು ರನ್‌ ಗಳಿಸಿದ ಗೌರವಕ್ಕೆ ಸಮ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಪಡೆದ ಟಾಪ್ 5 ಮಾಂತ್ರಿಕ ಬೌಲರ್‌ಗಳ ಮಾಹಿತಿ ಇಲ್ಲಿದೆ.

1. ಮುತ್ತಯ್ಯ ಮುರಳೀಧರನ್

1. ಮುತ್ತಯ್ಯ ಮುರಳೀಧರನ್

ಕ್ರಿಕೆಟ್‌ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಮುತ್ತಯ್ಯ ಮುರಳೀಧರನ್. ಶ್ರೀಲಂಕಾದ ಬೌಲಿಂಗ್ ದಂತಕತೆ ಮುರಳೀಧರನ್ ತನ್ನ 18 ವರ್ಷಗಳ ವೃತ್ತಿಬದುಕಿನಲ್ಲಿ 133 ಟೆಸ್ಟ್ ಪಂದ್ಯಗಳಲ್ಲಿ 67 ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಅಷ್ಟೇ ಅಲ್ಲ, 22 ಸಾರಿ 10 ವಿಕೆಟ್ (ಎರಡೂ ಇನ್ನಿಂಗ್ಸ್‌ಗಳು ಸೇರಿ) ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ನಲ್ಲಿ ಮುರಳೀಧರನ್ ಬೆಸ್ಟ್ ಬೌಲಿಂಗ್ ಫಿಗರ್ ಎಂದರೆ 9/51. ಟೆಸ್ಟ್‌ನಲ್ಲಿ 800 ವಿಕೆಟ್‌ ದಾಖಲೆ ಈಗಲೂ ಮುರಳೀಧರನ್ ಹೆಸರಿನಲ್ಲಿದೆ.

2. ಶೇನ್ ವಾರ್ನ್

2. ಶೇನ್ ವಾರ್ನ್

ಸ್ಪಿನ್ ಕಿಂಗ್ ಶೇನ್ ವಾರ್ನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬರೋಬ್ಬರಿ 37 ಸಾರಿ ಇನ್ನಿಂಗ್ಸ್‌ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 145 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟಿಗೆ 708 ವಿಕೆಟ್‌ ದಾಖಲೆ ವಾರ್ನ್ ಹೆಸರಿನಲ್ಲಿದೆ.

3. ರಿಚರ್ಡ್ ಹ್ಯಾಡ್ಲೀ

3. ರಿಚರ್ಡ್ ಹ್ಯಾಡ್ಲೀ

70ರಿಂದ 80ರ ದಶಕದಲ್ಲಿ ನ್ಯೂಜಿಲೆಂಡ್‌ ವೇಗಿ ರಿಚರ್ಡ್ ಹ್ಯಾಡ್ಲೀ ಅಪಾಯಕಾರಿ ಬೌಲರ್‌ಗಳಲ್ಲಿ ಗುರುತಿಸಿಕೊಂಡಿದ್ದರು. 86 ಟೆಸ್ಟ್ ಪಂದ್ಯಗಳನ್ನಾಡಿರುವ ಹ್ಯಾಡ್ಲೀ ಟೆಸ್ಟ್‌ ಕ್ರಿಕೆಟ್‌ನಲ್ಲಿ 36 ಬಾರಿ 5ಕ್ಕೂ ಹೆಚ್ಚು ವಿಕೆಟ್‌ಗಳನ್ನು ಮುರಿದಿದ್ದಾರೆ. ಹ್ಯಾಡ್ಲೀಯ ಬೆಸ್ಟ್ ಬೌಲಿಂಗ್ ಫಿಗರ್ ಎಂದರೆ 9/52. ಟೆಸ್ಟ್ ಇನ್ನಿಂಗ್ಸ್‌ ಒಂದರಲ್ಲಿ 9 ವಿಕೆಟ್‌ ಪಡೆದ ಕೆಲವೇ ಕೆಲವು ಬೌಲರ್‌ಗಳಲ್ಲಿ ಹ್ಯಾಡ್ಲೀ ಕೂಡ ಒಬ್ಬರು.

4. ಅನಿಲ್ ಕುಂಬ್ಳೆ

4. ಅನಿಲ್ ಕುಂಬ್ಳೆ

ಭಾರತದ ಸ್ಪಿನ್ ಮಾಂತ್ರಿಕ, ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಅತೀ ಹೆಚ್ಚು ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಪಡೆದ ದಾಖಲೆ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. 132 ಟೆಸ್ಟ್ ಪಂದ್ಯಗಳನ್ನಾಡಿರುವ ಕುಂಬ್ಳೆ 35 ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಉರುಳಿಸಿದ್ದಾರೆ. ಇನ್ನಿಂಗ್ಸ್‌ ಒಂದರಲ್ಲಿ 10ಕ್ಕೆ ಹತ್ತೂ ವಿಕೆಟ್‌ಗಳನ್ನು ಮುರಿದ ವಿಶ್ವದ ಎರಡನೇ ಬೌಲರ್‌ ಕುಂಬ್ಳೆ (ಇಂಗ್ಲೆಂಡ್‌ನ ಜಿಮ್ ಲ್ಯಾಕರ್ ಮೊದಲಿಗ-1956). ಟೆಸ್ಟ್‌ನಲ್ಲಿ ಕುಂಬ್ಳೆ ಒಟ್ಟಿಗೆ 619 ವಿಕೆಟ್‌ ದಾಖಲೆ ಹೊಂದಿದ್ದಾರೆ.

5. ರಂಗನಾ ಹೆರಾತ್

5. ರಂಗನಾ ಹೆರಾತ್

ಶ್ರೀಲಂಕಾ ಬೌಲರ್‌ ರಂಗನಾ ಹೆರಾತ್ ಹೆಸರಿನಲ್ಲಿ ಟೆಸ್ಟ್‌ನಲ್ಲಿ 34 ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಮುರಿದ ದಾಖಲೆಯಿದೆ. 19 ವರ್ಷಗಳ ವೃತ್ತಿ ಬದುಕಿನಲ್ಲಿ 93 ಟೆಸ್ಟ್ ಪಂದ್ಯಗಳನ್ನಾಡಿರುವ ರಂಗನಾ ಹೆರಾತ್, 34 ಬಾರಿ 5ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಹೆರಾತ್ ಬೆಸ್ಟ್ ಬೌಲಿಂಗ್ ಫಿಗರ್ 9/127. ಟೆಸ್ಟ್‌ನಲ್ಲಿ ಒಟ್ಟಾರೆ 433 ವಿಕೆಟ್‌ ದಾಖಲೆ ಹೆರಾತ್ ಮಾಡಿದ್ದಾರೆ.

Story first published: Saturday, May 30, 2020, 23:21 [IST]
Other articles published on May 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+