Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಯಾರು ಗೊತ್ತಾ? ಈ ಪಟ್ಟಿಯಲ್ಲಿ RCB ಆಟಗಾರರಿಗೆ ಇದೇಯಾ ಸ್ಥಾನ

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಅಬ್ಬರಿಸಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಪಾರ ಅಭಿಮಾನಿಗಳ ಮನ ಗೆಲ್ಲಲು ಆಟಗಾರರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡದಲ್ಲೂ ಅವಕಾಶ ಸಿಗುವ ಚಾನ್ಸ್ ಹೆಚ್ಚು..

ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಬ್ಬರಿಸುವ ಆಟಗಾರರ ಸಂಖ್ಯೆ ಏನು ಕಮ್ಮಿ ಇಲ್ಲ. ಒಮ್ಮೆ ಅಬ್ಬರಿಸಿದರೆ ಸ್ಟಾರ್ ಗಿರಿ ಫಿಕ್ಸ್‌. ಪಂದ್ಯದ ಫಲಿತಾಂಶವನ್ನೇ ಬುಡ ಮೇಲು ಮಾಡಿದ ಆಟಗಾರರು ಸಾಕಷ್ಟಿದ್ದಾರೆ. ನಾವು ಇಂದು ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಬಗ್ಗೆ ನೋಡೋಣ..

Top Man of the Match Winners in IPL RCB Players Standing

ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಆಟಗಾರರ ಪಟ್ಟಿಯಲ್ಲಿ, ಆರ್‌ಸಿಬಿ ಪರ ಮಿಂಚಿರುವ ಆಟಗಾರರೇ ಹೆಚ್ಚು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತು ಕೊಳ್ಳುವ ಇಬ್ಬರೂ ಆಟಗಾರರು ಸಹ ರೆಡ್‌ ಜೆರ್ಸಿ ತೊಟ್ಟು ತಮ್ಮ ಧಮಾಕೆದಾರ ಪ್ರದರ್ಶನವನ್ನು ನೀಡಿದ್ದಾರೆ.

ಧೋನಿ ಹಾಗೂ ಡೇವಿಡ್‌ ವಾರ್ನರ್‌ಗೂ ಸ್ಥಾನ

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಪಟ್ಟಿಯನ್ನು ನೋಡುತ್ತಾ ಹೋದರೆ, ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ 17 ಪ್ರಶಸ್ತಿಗಳನ್ನು ಪಡೆದಿದ್ದು, ಐದನೇ ಸ್ಥಾನದಲ್ಲಿದ್ದಾರೆ. ಧೋನಿ ಸಿಎಸ್‌ಕೆ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿರುವ ಆಟಗಾರ ಎಂದರೆ ಡೇವಿಡ್ ವಾರ್ನರ್. ಇವರು 18 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Top Man of the Match Winners in IPL RCB Players Standing

ರೋಹಿತ್‌ ಮುಡಿಗೆ 19 ಗರಿ

ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 5880 ರನ್ ಸೇರಿಸಿದ್ದಾರೆ. ಇವರ ಕ್ಲಾಸಿಕ್ ಆಟಕ್ಕೆ 19ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿದೆ.

ಯುನಿವರ್ಸಲ್ ಬಾಸ್‌ಗೆ 22 ಪ್ರಶಸ್ತಿ

ಐಪಿಎಲ್‌ನಲ್ಲಿ ತನ್ನ ಸುನಾಮಿ ಬ್ಯಾಟಿಂಗ್ ಶೈಲಿಯಿಂದಲೇ ಹೆಸರುವಾಸಿ ಆಟಗಾರ ಎಂದರೆ ವಿಂಡೀಸ್ ತಂಡದ ಕ್ರಿಸ್‌ ಗೇಲ್‌.. ಇವರು ಸಹ ಆರ್‌ಸಿಬಿ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರ ಭರ್ಜರಿ ಆಟಕ್ಕೆ 22 ಬಾರಿ ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿಗಳು ಸಂದಿವೆ. ಐಪಿಎಲ್‌ನಲ್ಲಿ ಇವರು, 6 ಶತಕ, 31 ಅರ್ಧಶತಕಗಳೊಂದಿಗೆ 4965 ಸಿಡಿಸಿದ್ದಾರೆ.

Top Man of the Match Winners in IPL RCB Players Standing

ಪಟ್ಟಿಯಲ್ಲಿ ಎಬಿಡಿಗೆ ಮೊದಲ ಸ್ಥಾನ

ಎಬಿಡಿ ವಿಲಿಯರ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಇವರು ಆರ್‌ಸಿಬಿ ಪರ ಅದೆಷ್ಟೋ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಇವರಿಗೆ 25 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಐಪಿಎಲ್‌ನ 170 ಪಂದ್ಯಗಳಲ್ಲಿ ಇವರು 5162 ರನ್ ಸಿಡಿಸಿದ್ದಾರೆ. 2021ರಲ್ಲಿ ಎಬಿಡಿ ಕ್ರಿಕೆಟ್‌ನ ಎಲ್ಲ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

Story first published: Thursday, March 7, 2024, 9:01 [IST]
Other articles published on Mar 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+