IND vs BAN: ಬಾಂಗ್ಲಾ ವಿರುದ್ಧದ 3 ಭಾರತೀಯ ಬ್ಯಾಟರ್‌ಗಳಿಂದ ದ್ವಿಶತಕ ಸಾಧನೆ, ಕನ್ನಡಿಗನಿಗೂ ಸ್ಥಾನ
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಮೊದಲ ಟೆಸ್ಟ್‌ಗೆ ದಿನಗಳಣನೆ ಆರಂಭವಾಗಿದೆ. ಈ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಈಗಾಗಲೇ ಸ್ಟಾರ್ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಪಾಕ್ ವಿರುದ್ಧದ ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಬಾಂಗ್ಲಾ ತಂಡ ಉತ್ಸಾಹದಲ್ಲಿದೆ. ಉಭಯ ತಂಡಗಳು ಭರ್ಜರಿ ಫಾರ್ಮ್‌ನಲ್ಲಿದ್ದು ಗೆಲುವಿನ ಕನಸು ಕಾಣುತ್ತಿವೆ.
ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಹಲವು ಆಟಗಾರರು ಶಕತ ಬಾರಿಸಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಬಾಂಗ್ಲಾ ವಿರುದ್ಧ ಟೆಸ್ಟ್‌ನಲ್ಲಿ ಹಲವು ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಇನ್ನು ಮೂವರು ಆಟಗಾರರು ದ್ವಿಶತಕ ಬಾರಿಸಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಪಟ್ಟಿಯಲ್ಲಿ ಕನ್ನಡಿಗನಿಗೂ ಸ್ಥಾನವಿದೆ.

ಸಚಿನ್ @ 248
ಢಾಕಾದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್ ಅಬ್ಬರಿಸಿತ್ತು. ಬಾಂಗ್ಲಾ ವಿರುದ್ಧ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಕೀರ್ತಿ ಮುಂಬೈಕರ್‌ಗೆ ಸಲ್ಲುತ್ತದೆ. 2004ರಲ್ಲಿ ಬಾಂಗ್ಲಾ ಪ್ರವಾಸ ಬೆಳೆಸಿದ್ದ ಟೀಮ್ ಇಂಡಿಯಾದ ಭಾಗವಾಗಿದ್ದ ಸಚಿನ್ ತೆಂಡೂಲ್ಕರ್ ಢಾಕಾದಲ್ಲಿ ಅಮೋಘ 248 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು.
ಈ ಇನಿಂಗ್ಸ್ ಸದ್ಯದ ವರೆಗೂ ಎರಡೂ ದೇಶಗಳ ನಡುವಣ ಟೆಸ್ಟ್‌ನಲ್ಲಿ ಅತಿ ದೊಡ್ಡ ಇನಿಂಗ್ಸ್ ಆಗಿದೆ. ಇವರನ್ನು ಬಿಟ್ಟರೆ ಉಳಿದ ಆಟಗಾರರು ಈ ದಾಖಲೆಯನ್ನು ಮುಟ್ಟಲು ಸಾಧ್ಯವೇ ಆಗಲಿಲ್ಲ.

ಮುತ್ತಿನ ನಗರಿಯಲ್ಲಿ ವಿರಾಟ್ ಮುತ್ತಿನಂತಹ ಇನಿಂಗ್ಸ್
ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಉತ್ತಮ ರನ್ ಕಲೆ ಹಾಕಿದ್ದಾರೆ. 2017ರಲ್ಲಿ ಬಾಂಗ್ಲಾ ತಂಡ ಭಾರತ ಪ್ರವಾಸ ಬೆಳೆಸಿದ್ದಾಗ, ವಿರಾಟ್ ಬ್ಯಾಟ್ ಆರ್ಭಟಿಸಿತ್ತು. ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 204 ರನ್ ಗಳಿಸಿದ್ದರು. ಇವರ ಈ ಇನಿಂಗ್ಸ್‌ನ ವಿಶೇಷತೆ ಅಂದರೆ, ಈ ಇನಿಂಗ್ಸ್‌ನಲ್ಲಿ ಒಂದೇ ಒಂದೂ ಸಿಕ್ಸರ್ ಸಹ ಇರಲಿಲ್ಲ. 24 ಬೌಂಡರಿಗಳ ನೆರವಿನಿಂದ ವಿರಾಟ್ ಈ ಅಮೋಘ ಇನಿಂಗ್ಸ್ ಕಟ್ಟಿದ್ದರು. ಇದುವರೆಗೆ ಬಾಂಗ್ಲಾದೇಶದ ಯಾವುದೇ ಬ್ಯಾಟ್ಸ್‌ಮನ್ ಭಾರತದ ವಿರುದ್ಧ ದ್ವಿಶತಕ ಸಿಡಿಸಿಲ್ಲ ಎಂಬುದೂ ಗೊತ್ತೇ ಇದೆ.

ಕನ್ನಡಿಗ ಮಯಾಂಕ್ ದ್ವಿಶತಕ ಸಾಧನೆ
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ಇದೆ. ಇವರು 2019ರಲ್ಲಿ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ್ದರು. ಇಂದೋರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮಯಾಂಕ್ 243 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಮಯದಲ್ಲಿ, ಮಯಾಂಕ್ ಅಗರ್ವಾಲ್ ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಈ ಬಾರಿಯ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿಯಲ್ಲಿ ಯಾವ ಬ್ಯಾಟರ್ ದ್ವಿಶತಕ ಬಾರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications