ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ಕೋವಿಡ್ ಪರೀಕ್ಷೆಯಲ್ಲಿ ಪಾಸ್

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕೊವಿಡ್-19 ಎರಡನೇ ಪರೀಕ್ಷೆಯಲ್ಲೂ ಪಾಸ್ ಆಗಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುವುದಕ್ಕೂ ಮುನ್ನ ವಿಂಡೀಸ್ ತಂಡ ಮತ್ತೊಂದು ಕೊನೇಯ ಪರೀಕ್ಷೆಗೆ ಒಳಗಾಗಲಿದೆ.
ವೆಸ್ಟ್ ಇಂಡೀಸ್‌ನ ಎಲ್ಲಾ ಆಟಗಾರರರು ಮತ್ತು ಸಿಬ್ಬಂದಿ ಸದ್ಯ ಕ್ರೈಸ್ಟ್ ಚರ್ಚ್‌ನ ಹೊರಭಾಗದಲ್ಲಿರುವ ಲಿಂಕನ್ ಯೂನಿವರ್ಸಿಟಿಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಇತ್ತಂಡಗಳು 3 ಟಿ20ಐ ಮತ್ತು 2 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ.
ನವೆಂಬರ್ 27ರಂದು ಮೊದಲನೇ ಟಿ20 ಪಂದ್ಯ ಮೌಂಟ್‌ಮಾಂಗನ್ಯುಯಿಯಲ್ಲಿ ನಡೆದರೆ, ದ್ವಿತೀಯ ಟಿ20 ಪಂದ್ಯ ಇದೇ ಸ್ಟೇಡಿಯಂನಲ್ಲಿ ನವೆಂಬರ್ 29ಕ್ಕೆ ಮತ್ತು ತೃತೀಯ ಪಂದ್ಯ ನವೆಂಬರ್ 30ಕ್ಕೆ ನಡೆಯಲಿದೆ. ಡಿಸೆಂಬರ್ 3ರಂದು ಮೊದಲನೇ ಟೆಸ್ಟ್ ಪಂದ್ಯ ಹ್ಯಾಮ್ಟನ್‌ನಲ್ಲಿ, ಡಿಸೆಂಬರ್ 11ರಂದು ದ್ವಿತೀಯ ಟೆಸ್ಟ್ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ.
'ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದ ಎಲ್ಲಾ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಮೂರು ಕೋವಿಡ್-19 ಪರೀಕ್ಷೆಗಳಲ್ಲಿ ಎರಡರಲ್ಲಿ ಪಾಸಾಗಿದ್ದಾರೆ,' ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications