ತ್ರಿಪುರ ಅಂಡರ್-19 ಕ್ರಿಕೆಟ್ ಆಟಗಾರ್ತಿ ಅಯಾಂತಿ ರೇಗ್ ಆತ್ಮಹತ್ಯೆ

ತ್ರಿಪುರ ಅಂಡರ್ -19 ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಅಯಾಂತಿ ರೇಂಗ್(16 ವರ್ಷ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಯಾಂತಿ ತಮ್ಮ ನಿವಾಸದಲ್ಲೇ ಶವವಾಗಿ ಪತ್ತೆಯಾಗಿದ್ದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ದಿನಪತ್ರಿಕೆ ವರದಿ ಮಾಡಿದೆ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಅಯಾಂತಿ ತ್ರಿಪುರ ಅಂಡರ್-19 ತಂಡದಲ್ಲಿ ಕಳೆದ ಒಂದು ವರ್ಷದಿಂದ ಸದಸ್ಯರಾಗಿದ್ದಾರೆ. ಅಂಡರ್-23 ತಂಡದಲ್ಲೂ ತ್ರಿಪುರ ತಂಡವನ್ನು ಅಯಾಂತಿ ಪ್ರತಿನಿಧಿಸಿದ್ದಾರೆ.
ಅಯಾಂತಿ ರೇಂಗ್ ತ್ರಿಪುರ ರಾಜಧಾನಿ ಅಗರ್ತಲಾದಿಂದ 90 ಕಿಲೋಮೀಟರ್ ದೂರದಲ್ಲಿರುವ ಉದಯಪುರ ಉಪವಿಭಾಗದ ವ್ಯಾಪ್ತಿಯ ತೈನಾನಿ ಗ್ರಾಮದ ರೇಂಗ್ ಬುಡಕಟ್ಟು ಜನಾಂಗದವರು. ಪ್ರತಿಭಾನ್ವಿತ ಆಟಗಾರ್ತಿಯಾಗಿದ್ದ ಅಯಾಂತಿ ಕ್ರಿಕೆಟ್‌ನಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದ್ದರು.
ಅಯಾಂತಿ ರೇಂಗ್ ಸಾವಿಗೆ ತ್ರಿಪುರ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ತಿಮೀರ್ ಚಂದಾ ಸಂತಾಪ ಸೂಚಿಸಿದ್ದಾರೆ. ತ್ರಿಪುರಾ ಭವಿಷ್ಯದ ಪ್ರತಿಭೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ. ಆಕೆ ಅಂಡರ್-16 ದಿನಗಳಿಂದ ತಂಡದಲ್ಲಿದ್ದಾರೆ. ಕ್ರಿಕೆಟ್‌ನಲ್ಲಿ ದೊಡ್ಡ ಭರವಸೆಯನ್ನು ಮೂಡಿಸಿದ್ದರು. ಅವರ ಅಗಲಿಕೆಯ ಸುದ್ದಿ ಆಘಾತವನ್ನು ನೀಡಿದೆ ಎಂದು ತಿಮಿರ್ ಚಂದಾ ಸಂತಾಪ ಸೂಚಿಸಿದ್ದಾರೆ.
ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಅಯಾಂತಿ ಎದುರಿಸುತ್ತಿದ್ದರಾ ಎಂಬ ಪ್ರಶ್ನೆಗೆ ತಿಮಿರ್ ಚಂದಾ ಉತ್ತರಿಸುತ್ತಾ, ಕಳೆದ ಋತುವಿನ ಅಂತ್ಯದವರೆಗೂ ಆಕೆ ಉತ್ತಮವಾಗಿಯೇ ಇದ್ದರು, ಆದರೆ ಲಾಕ್‌ಡೌನ್ ಬಳಿಕ ಎಲ್ಲವೂ ನಿಂತುಹೋಗಿತ್ತು. ಈ ಮಧ್ಯೆ ನಾವು ಆನ್‌ಲೈನ್ ತರಬೇತಿಗಳನ್ನು ಕೂಡ ಏರ್ಪಡಿಸಿದ್ದೆವು. ಆದರೆ ಆಕೆಯ ಕೌಟುಂಬಿಕ ಸಮಸ್ಯೆಯ ಬಗ್ಗೆ ನಮಗೆ ಅರಿವಿಲ್ಲ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications