For Quick Alerts
ALLOW NOTIFICATIONS  
For Daily Alerts
 

ಡೊನಾಲ್ಡ್ ಟ್ರಂಪ್‌ಗೆ ಸಂಕಷ್ಟ ತಂದಿಟ್ಟ ಸಚಿನ್ ತೆಂಡೂಲ್ಕರ್: ವಿಡಿಯೋ

Trump Mentioned Sachin Tendulkar And Virat Kohli Name

ಟೀಮ್ ಇಂಡಿಯಾ ಆಟಗಾರ ಸಚಿನ್ ತೆಂಡೂಲ್ಕರ್ ವಿಶ್ವ ಶ್ರೇಷ್ಟ ಆಟಗಾರ. ದಾಖಲೆ ಮೇಲೆ ದಾಖಲೆ ಮಾಡಿರುವ ಸಚಿನ್ ಯಾವತ್ತೂ ಯಾರಿಗೂ ಮಾತಿನ ಮೂಲಕ ಉತ್ತರಕೊಟ್ಟವರಲ್ಲ. ನೋವು ಕೊಟ್ಟವರಲ್ಲ. ಎಲ್ಲದಕ್ಕೂ ಬ್ಯಾಟಿಂಗ್‌ನಿಂದಲೇ ಉತ್ತರವನ್ನು ನೀಡಿದ ಆಟಗಾರ.

ಇಂತಾ ಸಚಿನ್ ತೆಂಡೂಲ್ಕರ್ ಅಮೆರಿಕಾ ಅಧ್ಯಕ್ಷರಿಗೆ ಇಂದು ಕಸಂಕಷ್ಟವನ್ನು ತಂದಿಟ್ಟಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರದಾಡುವಂತೆ ಮಾಡಿದ್ದಾರೆ. ಮಾತ್ರವಲ್ಲ ಇದೇ ಕಾರಣಕ್ಕೆ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೂ ಒಳಗಾಗಿದ್ದಾರೆ.

ಅರೆ ಯಾರಿಗೂ ಕೆಡುಕು ಬಯಸದ ಲೆಜೆಂಡ್ ಆಟಗಾರ ಸಚಿನ್ ಅಮೆರಿಕಾ ಅಧ್ಯಕ್ಷರಿಗೆ ಅದ್ಹೇಗೆ ಸಂಕಷ್ಟ ತಂದಿಟ್ಟರು ಅಂದುಕೊಂಡ್ರಾ. ಈ ವಿಡಿಯೋ ನೋಡಿ ನಿಮಗೇ ಗೊತ್ತಾಗಲಿದೆ.

ಯಸ್.. ಅಮೆರಿಕದ ಅಧ್ಯಕ್ಷ ಡೊನಾಲ್ಡ ಟ್ರಂಪ್‌ಗೆ ಸಚಿನ್ ತೆಂಡೂಲ್ಕರ್ ನೇರವಾಗೇನು ಸಂಕಷ್ಟ ತಂದಿಟ್ಟಿಲ್ಲ. ಆದರೆ ಸಚಿನ್ ಹೆಸರನ್ನು ಉಚ್ಚರಿಲು ಹೋಗಿ ಟ್ರಂಫ್ 'ಸುಚಿನ್' ತೆಂಡೂಲ್ಕರ್ ಎಂದು ಉಚ್ಛರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಟ್ರೋಲಿಗರಿಗೆ ಆಹಾರವಾಗುವಂತೆ ಮಾಡಿದೆ.

ಸಚಿನ್ ಹೆಸರನ್ನು ತಪ್ಪಾಗಿ ಹೇಳಿದ ಕಾರಣಕ್ಕೆ ನಾನಾ ರೀತಿಯಾಗಿ ಟ್ವಿಟ್ಟರ್‌ನಲ್ಲಿ ತಮಾಷೆಯಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಇಂದು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2 ದಿನಗಳ ಪ್ರವಾಸಕ್ಕೆ ಭಾರತಕ್ಕೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್ ಅಹ್ಮದಾಬಾದ್‌ನಲ್ಲಿನ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನೆರೆದಿದ್ದ ಲಕ್ಷದಷ್ಟು ಜನರನ್ನು ಉದ್ಧೇಶಿಸಿ ಮಾತನಾಡಿದರು.

Story first published: Monday, February 24, 2020, 20:07 [IST]
Other articles published on Feb 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+