ಬ್ಯಾಟಿಂಗ್‌ನಲ್ಲಿ ಕೊಹ್ಲಿ, ರಾಹುಲ್ ಕಾಪಿ ಮಾಡಿದ್ದು ಚಾಹಲ್ ಶೈಲಿಯನ್ನಂತೆ !

ಟೀಮ್ ಇಂಡಿಯಾದ ಫನ್ನಿ ಹುಡುಗ ಅಂದ್ರೆ ಅದು ಬೌಲರ್ ಯುಜುವೇಂದ್ರ ಚಾಹಲ್. ಆನ್‌ಫೀಲ್ಡ್‌ನಲ್ಲಿ ಎಷ್ಟು ಪ್ರತಿಭಾವಂತನೋ ಆಫ್‌ಫೀಲ್ಡ್‌ನಲ್ಲಿ ಚಾಹಲ್ ಅಷ್ಟೇ ತಲೆಹರಟೆ. ಚಾಹಲ್ ಈ ಗುಣದಿಂದ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಅಚ್ಚುಮೆಚ್ಚು.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಕ್ಟುವ್ ಆಗಿರುವ ಚಾಹಲ್ ಟ್ವಿಟರ್‌ನಲ್ಲಿ ನಾಯಕನನ್ನೂ ಸೇರಿಸಿ ಟ್ರಾಲ್ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಅರನಭಿಕ ಆಟಗಾರ ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್‌ನ ಸಂದರ್ಭದ ಶಾಟ್‌ವೊಂದನ್ನು ತಮ್ಮ ಪೋಸ್‌ಕೊಟ್ಟ ಫೋಟೋ ಜೊತೆಗೆ ಹೋಲಿಸಿ ತಮಾಷೆಮಾಡಿದ್ದಾರೆ.
ಕೆ.ಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯದ ಸಂದರ್ಭದಲ್ಲಿ ಅಪ್ಪರ್ ಕಟ್ ಶಾಟ್‌ನ ಫೋಟೋವನ್ನು ಚಾಹಲ್ ತಮ್ಮ ಟ್ರೋಲ್‌ಗೆ ಬಳಸಿಕೊಂಡಿದ್ದಾರೆ. ಇದಕ್ಕೆ ಅಷ್ಟೇ ಫನ್ನಿಯಾಗಿರುವ ಒಕ್ಕಣೆಯನ್ನು ನೀಡಿದ್ದಾರೆ ಚಾಹಲ್.
ಚಾಹಲ್ ಈ ಪೋಸ್ಟ್‌ನ ಜೊತೆಗೆ 'ನನ್ನ ಶೈಲಿಯನ್ನು ನಕಲು ಮಾಡಿದ ಸಂದರ್ಭ. ಅಷ್ಟೇನೂ ಕೆಟ್ಟದಾಗಿಲ್ಲ. ಪ್ರಯತ್ನ ಮುಂದುವರಿಯಲಿ' ಎಂದು ಬರೆದುಕೊಂಡು ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
ಹ್ಯಾಮಿಲ್ಟನ್‌ನಲ್ಲಿ ಮೂರನೇ ಪಂದ್ಯಕ್ಕೂ ಮುನ್ನ ಚಾಹಲ್ ಈ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಸಾಕಷ್ಟು ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications