IND vs ENG: ಆತನಿಗೆ ಫ್ರೀ ಹ್ಯಾಂಡ್ ನೀಡುವ ಪ್ರಯತ್ನ; ರಿಷಭ್ ಪಂತ್ ಬಗ್ಗೆ ಮಾಜಿ ಸ್ಪಿನ್ನರ್ ಹೇಳಿದ್ದೇನು?

ಅಚ್ಚರಿಯ ನಡೆಯಲ್ಲಿ ಶನಿವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಪರವಾಗಿ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ರಿಷಭ್ ಪಂತ್ ಅವರನ್ನು ಕಳುಹಿಸಲಾಯಿತು.
ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಭಾರತದ ಟಿ20 ಪಂದ್ಯದ ತಂಡದಲ್ಲಿ ನಿಜವಾಗಿಯೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ. ಆದರೆ ಅವರ ಬಹುತೇಕ ವೃತ್ತಿಜೀವನದ ಹೆಚ್ಚಿನ ಅವಧಿಯನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿದ್ದಾರೆ ಮತ್ತು ಅವರು ಭಾರತಕ್ಕಾಗಿ ಟಿ20 ಸ್ವರೂಪದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸಿದರು. ಈ ಮೂಲಕ ರಿಷಭ್ ಪಂತ್ 15 ಎಸೆತಗಳಲ್ಲಿ 26 ರನ್ ಗಳಿಸಿ ಭಾರತಕ್ಕೆ ಬಲವಾದ ಆರಂಭವನ್ನು ನೀಡಲು ನೆರವಾದರು.
ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಈ ಕ್ರಮವನ್ನು ರಿಷಭ್ ಪಂತ್ ಅವರ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ಆಡಲು "ಫ್ರೀ ಹ್ಯಾಂಡ್' ನೀಡುವ ಒಂದು ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ಫ್ರೀ ಹ್ಯಾಂಡ್ ನೀಡಲು ಪ್ರಯತ್ನಿಸುತ್ತಿರಬಹುದು
"ಬಹುಶಃ ರಿಷಭ್ ಪಂತ್‌ಗೆ ಬ್ಯಾಟಿಂಗ್‌ನಲ್ಲಿ ಫ್ರೀ ಹ್ಯಾಂಡ್ ನೀಡಲು ಪ್ರಯತ್ನಿಸುತ್ತಿರಬಹುದು, ಏಕೆಂದರೆ ಕಳೆದ ಕೆಲವು ಪಂದ್ಯಗಳಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರು ಹೆಚ್ಚು ರನ್ ಗಳಿಸಲಿಲ್ಲ ಎಂದು ನಾವು ನೋಡಿದ್ದೇವೆ. ಅವರು ಕೆಂಪು-ಬಾಲ್‌ನಲ್ಲಿ ಅದ್ಭುತವಾಗಿದ್ದಾರೆ. ಆ ಫಾರ್ಮ್ ಅನ್ನು ಅವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಡೆಯಬೇಕಾಗಿದೆ ಮತ್ತು ಹಾಗಾಗಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಲು ಪ್ರಯತ್ನ ನಡೆಯುತ್ತಿದೆ," ಎಂದು ಪಿಯೂಷ್ ಚಾವ್ಲಾ ESPNcricinfoನಲ್ಲಿ ಹೇಳಿದರು.
"ಏಕೆಂದರೆ, ನೀವು ಅಗ್ರ ಕ್ರಮಾಂಕದಲ್ಲಿ ಇನ್ನಿಂಗ್ಸ್ ತೆರೆಯುವಾಗ ಆರಂಭದಲ್ಲಿ ಚೆಂಡು ಮೈದಾನದಲ್ಲಿ ಹೆಚ್ಚು ಪುಟಿದು ಬರುತ್ತದೆ. ಆಗ ಸ್ಫೋಟಕ ಬ್ಯಾಟಿಂಗ್ ಮಾಡಲು ಸಿದ್ಧರಾಗುತ್ತಾರೆ. ಹೀಗಾಗಿ ತಂಡದ ಮ್ಯಾನೇಜ್‌ಮೆಂಟ್ ರಿಷಭ್ ಪಂತ್‌ಗೆ ಅಗ್ರ ಕ್ರಮಾಂಕದಲ್ಲಿ ಅಂತಹ ಪಾತ್ರವನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ."

ಫೀಲ್ಡರ್‌ಗಳು 30 ಯಾರ್ಡ್ ಸರ್ಕಲ್‌ನೊಳಗೆ ಇರುತ್ತಾರೆ
"ಪವರ್ ಪ್ಲೇನಲ್ಲಿ ಫೀಲ್ಡರ್‌ಗಳು 30 ಯಾರ್ಡ್ ಸರ್ಕಲ್‌ನೊಳಗೆ ಇರುತ್ತಾರೆ. "ಹೋಗಿ ನಿಮ್ಮನ್ನು ವ್ಯಕ್ತಪಡಿಸಿ' ಎಂದಿರುತ್ತಾರೆ. ಅದು ರಿಷಭ್ ಪಂತ್‌ಗೆ ಸ್ವಲ್ಪ ಫ್ರೀ ಹ್ಯಾಂಡ್ ಆಗುತ್ತದೆ. ಆದ್ದರಿಂದ ಅವರು ಇನ್ನಿಂಗ್ಸ್ ತೆರೆಯಲು ಪಂತ್ ಅವರನ್ನು ಕಳುಹಿಸಲು ಕಾರಣವಾಗಿರಬಹುದು," ಎಂದು ಪಿಯುಷ್ ಚಾವ್ಲಾ ಭಾವಿಸಿದರು.
ಆದಾಗ್ಯೂ ಖಾಯಂ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ತಂಡಕ್ಕೆ ಮರಳಿದ ನಂತರ ರಿಷಭ್ ಪಂತ್ ಆರಂಭಿಕರಾಗಿ ಮುಂದುವರಿಯುವ ಸಾಧ್ಯತೆಯಿಲ್ಲ ಎಂದು ಚಾವ್ಲಾ ವಿವರಿಸಿದರು.

ಕೆಎಲ್ ರಾಹುಲ್ ರೀತಿ ರಿಷಭ್ ಪಂತ್ ಆಡುತ್ತಿಲ್ಲ
"ಆರಂಭಿಕ ಹಂತದಲ್ಲಿ ಕೆಎಲ್ ರಾಹುಲ್ ಹೊಂದಿರುವ ರೀತಿಯ ದಾಖಲೆ, ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ನಾನು ಅದನ್ನು ಸಾಮಾನ್ಯವಾಗಿ ರಿಷಭ್ ಪಂತ್ ಅವರಿಂದ ನೋಡುತ್ತಿಲ್ಲ. ಆದರೆ ಅವರು ಪ್ರಯತ್ನಿಸಲು ಬಯಸಿದ್ದಾರೆ ಮತ್ತು ನಾವು ಈ ಹಿಂದೆ ಒಂದೆರಡು ಹೇಳಿಕೆಗಳನ್ನು ನೋಡಿದ್ದೇವೆ. ರಿಷಭ್ ಪಂತ್ ಅವರು ಆಸ್ಟ್ರೇಲಿಯ ತಂಡಕ್ಕೆ ಆ್ಯಾಡಂ ಗಿಲ್‌ಕ್ರಿಸ್ಟ್ ಮಾಡಿರುವ ಪಾತ್ರವನ್ನು ಮಾಡಬಹುದು ಎಂದು ಹಿರಿಯ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರು ಹೇಳಿದ್ದಾರೆ".
"ಆದರೆ, ಕೆಎಲ್ ರಾಹುಲ್ ಅವರು ಕ್ಲಾಸ್ ಆ್ಯಕ್ಟ್ ಆಗಿದ್ದಾರೆ. ಹೀಗಾಗಿ ಒಮ್ಮೆ ಅವರು ತಂಡಕ್ಕೆ ಮರಳಿ ಬಂದರೆ ರಿಷಭ್ ಪಂತ್ ಆ ಸ್ಥಾನಕ್ಕೆ ಹೊಂದಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಪಿಯುಷ್ ಚಾವ್ಲಾ ಸ್ಪಷ್ಟಪಡಿಸಿದರು.

ರಿಷಭ್ ಪಂತ್ 5 ಎಸೆತಗಳಲ್ಲಿ 1 ರನ್‌ಗೆ ಔಟ್
ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲೂ ರಿಷಭ್ ಪಂತ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ ಭಾರತ 216 ರನ್‌ಗಳನ್ನು ಬೆನ್ನಟ್ಟಿದ ಸಂದರ್ಭದಲ್ಲಿ ರಿಷಭ್ ಪಂತ್ 5 ಎಸೆತಗಳಲ್ಲಿ 1 ರನ್‌ಗೆ ಔಟಾದ ಕಾರಣ ಅವರು ಹೆಚ್ಚಿನ ಪ್ರಭಾವ ಬೀರಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದ ಹೊರತಾಗಿಯೂ ಭಾರತ ಅಂತಿಮವಾಗಿ 17 ರನ್‌ಗಳಿಂದ ಪಂದ್ಯವನ್ನು ಸೋತಿತು.
ಬಲಗೈ ಆಟಗಾರ ಸೂರ್ಯಕುಮಾರ್ ಯಾದವ್ ಕೇವಲ 55 ಎಸೆತಗಳಲ್ಲಿ 117 ರನ್ ಗಳಿಸಿದರು, ಆದರೆ ಭಾರತವು ಸರಣಿ ವೈಟ್‌ವಾಶ್ ಮಾಡಲು ವಿಫಲವಾಯಿತಾದರೂ, 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ತವರಿನಲ್ಲಿ ಇಂಗ್ಲೆಂಡ್ ಸರಣಿ ಸೋತು ನಿರಾಸೆ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications