Turning Point: ಮುಂಬೈಗೆ ಜಯದ ತಿಲಕ ಹಚ್ಚಿದ್ದು ಇವರೇ..
ಅಹಮದಾಬಾದ್: ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 4 ಸೋಲು ಕಂಡಿತ್ತು. ಈ ಸೋಲಿನ ಸರಪಳಿಯನ್ನು ಕಳಚಿಕೊಳ್ಳಲು ಮುಂಬೈ ಬಿಗ್ ಪ್ಲ್ಯಾನ್‌ನೊಂದಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕೆ ಇಳಿಯಿತು. ಈ ಪಂದ್ಯದಲ್ಲಿ ಮುಂಬೈ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಿತು.
ಗೆಲುವು ಎಂಬ ಮಾಯಾ ಜಿಂಕೆಯನ್ನು ತಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಟ್ಟಿ ಹಾಕಬೇಕು ಎಂಬ ಆಸೆಯನ್ನು ಹೊಂದಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಟಾಸ್ ಕೈ ಕೊಟ್ಟಿತು. ಗುಜರಾತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಮುಂಬೈ ಮೊದಲು ಬ್ಯಾಟಿಂಗ್‌ಗೆ ಮುಂದಾಯಿತು. ಮಾಜಿ ಚಾಂಪಿಯನ್ ಆರಂಭ ಕಳಪೆಯಾಗಿತ್ತು. ಮುಂಬೈ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ನಮನ್ ಧೀರ್ ಹಾಗೂ ತಿಲಕ್ ವರ್ಮಾ 4ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ನೀಡಿದರು. ನಮನ್ 45 ರನ್ ಬಾರಿಸಿ ಔಟ್ ಆದರು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಅಜೇಯ 101 ರನ್ ಗಳಿಸಿ ಅಬ್ವರಿಸಿದರು. ಇವರ 74 ರನ್‌ಗಳನ್ನು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ತಿಲಕ್ ವರ್ಮಾ 8 ಬೌಂಡರಿ, 7 ಸಿಕ್ಸರ್ ಸಿಡಿಸಿದರು. ಡೆತ್ ಓವರ್‌ಗಳಲ್ಲಿ ತಿಲಕ್ ವರ್ಮಾ ಅವರು ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ಬಹುವಾಗಿ ಕಾಡಿದರು. ತಿಲಕ್ ಆರಂಭದಲ್ಲಿ ತಾಳ್ಮೆಯಿಂದ ಇನಿಂಗ್ಸ್ ಆರಂಭಿಸಿದರು. ಇವರು 18 ಎಸೆತಗಳಲ್ಲಿ 65 ರನ್ ಸಿಡಿಸಿದರು. ಇವರು ಅಶೋಕ್ ಶರ್ಮಾ ಅವರ ಓವರ್‌ನಲ್ಲಿ ಸತತ ಐದು ಬೌಂಡರಿ ಬಾರಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಸಫಲರಾದರು.
ಇವರೇ ಗೆಲುವಿನ ರುವಾರಿ
ಅಶೋಕ್ ಶರ್ಮಾ ಅವರು ಎಸೆದ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ತಿಲಕ್ ವರ್ಮಾ ಅಬ್ಬರಿಸಿದರು. ಇವರು ಈ ಓವರ್‌ನ ಮೊದಲ ಎಸೆತದಲ್ಲಿ ಪಾಯಿಂಟ್ ಮೇಲಿಂದ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲೂ ತಿಲಕ್ ಮಿಡ್ ಆಫ್‌ನಲ್ಲಿ ಬೌಂಡರಿ ಬಾರಿಸಿದರು. ನಂತರದ ಎಸೆತದಲ್ಲಿ ಇದೇ ಕ್ಷೇತ್ರದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಿಲಕ್ ವರ್ಮಾ ಅಬ್ಬರಿಸಿದರು

ಈ ಲೀಗ್‌ನಲ್ಲಿ ಸತತ ರನ್‌ಗಳಿಸಲು ವಿಫಲರಾಗಿದ್ದ ತಿಲಕ್ ವರ್ಮಾ ತಮ್ಮ ನೈಜ ಆಟವನ್ನು ಆಡಿದರು. ಈ ಮೂಲಕ ಟೀಕಾಕಾರರಿಗೆ ತಿಲಕ್ ವರ್ಮಾ ಬ್ಯಾಟಿನಿಂದ ಉತ್ತರ ನೀಡಿದರು. ಇವರ ಸ್ಥಿರ ಆಟದ ನೆರವಿನಿಂದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್ ಸೇರಿಸಿತು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮುಂಬೈ ಬೌಲರ್‌ಗಳು ಬಹುವಾಗಿ ಕಾಡಿದರು. ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದು ಮಿಂಚಿದರು. ವೇಗಿ ಅಶ್ವನಿ ಕುಮಾರ್ 4 ವಿಕೆಟ್ ಪಡೆದು ಜಯದಲ್ಲಿ ಮಹತ್ವದ ಕಾಣಿಕೆ ನೀಡಿದರು. ಆದರೆ ಮುಂಬೈ ಈ ಪಂದ್ಯವನ್ನು ಗೆಲ್ಲಲು ತಿಲಕ್ ವರ್ಮಾ ಬಾರಿಸಿದ ಶತಕವೇ ಪ್ರಮುಖ ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications