ಕೊಲ್ಕತ್ತವನ್ನು ಸೋಲಿಸಿದ್ದು ಹೈದರಾಬಾದ್ ತಂಡ ಅಲ್ಲ ರಶೀದ್ ಖಾನ್!

ನಿನ್ನೆ (ಮೇ 25) ರಂದು ನಡೆದ ಕೊಲ್ಕತ್ತ ಮತ್ತು ಹೈದರಾಬಾದ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಹೈದರಾಬಾದ್ ಫೈನಲ್ ಪ್ರವೇಶಿಸಿದೆ.
ಹೈದರಾಬಾದ್ ನೀಡಿದ್ದ 175 ರನ್ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತ 160 ರನ್‌ಗಳನ್ನಷ್ಟೆ ಗಳಿಸಿ 14 ರನ್‌ಗಳಿಂದ ಸೋಲನ್ನಪ್ಪಿತು. ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಫ್ಘಾಟನಿಸ್ತಾನ ಬೌಲರ್ ರಶೀದ್ಖಾನ್ ಅವರನ್ನಂತೂ ಟ್ವಿಟ್ಟಿಗರು ಹಾಡಿ ಹೊಗಳುತಿದ್ದಾರೆ.
ರಶೀದ್ ಖಾನ್ ಅವರ ಬೌಲಿಂಗ್‌ಗೆ ಖುದ್ದು ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ. ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ರಶೀದ್ ಖಾನ್ ಅವರ ಪ್ರತಿಭೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ರಶೀದ್ ಬೌಲಿಂಗ್‌ಗೆ ಸಚಿನ್ ಫಿದಾ
ರಶೀದ್ ಖಾನ್ ಬೌಲಿಂಗ್‌ಗೆ ಫಿದಾ ಆಗಿರುವ ಸಚಿನ್ ತೆಂಡೂಲ್ಕರ್ ರಶೀದ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. 'ರಶೀದ್ ಉತ್ತಮ ಬೌಲರ್ ಎಂದು ಗೊತ್ತಿತ್ತು ಆದರೆ ಅವರು ಕೇವಲ ಉತ್ತಮವಷ್ಟೆ ಅಲ್ಲ, ಟಿ20 ಮಾದರಿಯಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಬೌಲರ್, ಅವರು ಉತ್ತಮವಾಗಿ ಬ್ಯಾಟ್ ಕೂಡಾ ಬೀಸಬಲ್ಲರು' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಟ್ವೀಟ್
ರಶೀದ್ ಖಾನ್ ಬೌಲಿಂಗ್‌ಗೆ ಅಭಿಮಾನಿಯಾಗಿರುವ ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಕೂಡ ರಶೀದ್ ಖಾನ್ ಅವರ ಬೌಲಿಂಗ್ ಬ್ಯೂಟಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಭಾನುವಾರದ ಫೈನಲ್ ಪಂದ್ಯಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಅವರು.
ಅಪ್ಘಾನಿಸ್ತಾನದ ಹೆಮ್ಮೆ ರಶೀದ್ ಖಾನ್
ನಿನ್ನೆಯ ಪಂದ್ಯದಲ್ಲಿ 10 ಎಸೆತಕ್ಕೆ 34 ರನ್ ಗಳಿಸಿ, ಎರಡು ಕ್ಯಾಚು, ಒಂದು ರನ್ ಔಟ್, ಮತ್ತು ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ಆಲ್‌ರೌಂಡ್ ಆಟ ಪ್ರದರ್ಶಿಸಿದ ರಶೀದ್ ಖಾನ್ ಅಫ್ಘಾನಿಸ್ತಾನದ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ ಇಲ್ಲೊಬ್ಬರು.
ಈ ಖಾನ್ ಅನ್ನು ನಮಗೆ ಕೊಡಿ
ರಶೀದ್ ಖಾನ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಜೊತೆಗಿರುವ ಚಿತ್ರಗಳನ್ನು ಹಾಕಿರುವ ವರುಣ್ ಎಂಬುವರು 'ಎ ಖಾನ್ ಹಮ್ಕೊ ದೇ ದೇ ಅಪ್ಘಾನ್' (ಈ ಖಾನ್ ಅನ್ನು ನಮಗೆ ಕೊಟ್ಟು ಬಿಡಿ ಅಫ್ಘಾನಿಸ್ತಾನ್) ಎಂದು ತಮಾಷೆಯ ಟ್ವೀಟ್ ಮಾಡಿದ್ದಾರೆ.
ಧೋನಿ ಮತ್ತು ತಂಡ ರಶೀದ್‌ಗೆ ಕಾಯುತ್ತಿದೆ
ಭಾನುವಾರ ಹೈದರಾಬಾದ್ ಮತ್ತು ಚೆನ್ನೈ ತಂಡಗಳು ಐಪಿಎಲ್ ಫೈನಲ್ ಮುಖಾಮುಖಿ ಆಗುತ್ತಿವೆ. ಧೋನಿ ಮತ್ತು ತಂಡ ಹೇಗೆ ರಶೀದ್ ಖಾನ್ ಅವರನ್ನು ಎದುರಿಸಲು ಸಜ್ಜಾಗಿದೆ ಎಂದು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಸಮಿತಿಂಜಯ್ ಶುಕ್ಲಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications