ಫ್ರೀ ಹಿಟ್‌ನಲ್ಲಿ ಔಟಾದ ಮೋಹಿನ್ ಅಲಿ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದೆ. ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ ಎಬಿ ಡಿವಿಲಿಯರ್ಸ್ ಅರ್ಧಶತಕ ದಾಖಲಿಸಿ ತಂಡದ ಪರ ಏಕೈಕ ವಾರಿಯರ್ ಆಗಿ ಹೋರಾಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕೊಹ್ಲಿ ಓಪನಿಂಗ್ ಬಂದು ಕೇವಲ ಆರು ರನ್‌ಗೆ ಔಟಾಗಿದ್ದು ಆರ್‌ಸಿಬಿಗೆ ಆರಂಭದಲ್ಲೇ ಆಘಾತ ನೀಡಿತು. ನಂತರದಲ್ಲಿ ದೇವದತ್ ಪಡಿಕ್ಕಲ್ ಕೂಡ ಕೇವಲ 1ರನ್‌ಗೆ ವಿಕೆಟ್ ಒಪ್ಪಿಸಿದ್ರು.
ಮೂರನೇ ಕ್ರಮಂಕಾದಲ್ಲಿ ಕಣಕ್ಕಿಳಿದಿದ್ದ ಆ್ಯರೋನ್ ಫಿಂಚ್ ಆಟವು 32 ರನ್‌ಗಳಿಗೆ ಮುಕ್ತಾಯವಾಯಿತು. ಪರಿಣಾಮ ನಂತರದಲ್ಲಿ ಕಣಕ್ಕಿಳಿದ ಮೋಯಿನ್ ಅಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಬಹುದು ಎಂದು ಯಾರೂ ಊಹಿಸಿರ್ಲಿಲ್ಲ.
ಶಬಾಜ್ ನದೀಮ್ ಓವರ್‌ನಲ್ಲಿ ಫ್ರೀ ಹಿಟ್‌ನಲ್ಲಿ ಮೋಹಿನ್ ಅಲಿ ರನ್‌ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ಸಿಂಗಲ್ಸ್ ಕದಿಯಲು ಹೋಗಿ ರಶೀದ್ ಖಾನ್ ಚುರುಕು ಫೀಲ್ಡಿಂಗ್‌ಗೆ ಬಲಿಯಾದ್ರು. ಮೋಹಿನ್ ಅಲಿ ಫ್ರೀ ಹಿಟ್‌ನಲ್ಲಿ ಔಟಾಗುತ್ತಿದ್ದಂತೆ ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications