ಧೋನಿ ಡಿಕ್ಕಿ: ಲಾರಿಯೊಂದು ಸ್ಕೂಟರ್ ಗೆ ಗುದ್ದಿದ್ದಂತೆ !
ಮೀರ್ ಪುರ್ (ಬಾಂಗ್ಲಾದೇಶ), ಜೂ.19: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೊದಲ ಏಕದಿನ ಕ್ರಿಕೆಟ್ ಪಂದ್ಯ ಸೋತ ದುಃಖದಲ್ಲಿರುವಾಗಲೇ ಅವರ ಮೇಲೆ ಬಾಂಗ್ಲಾ ಅಭಿಮಾನಿಗಳು ಟ್ವೀಟ್ ಬಾಣ ಬಿಟ್ಟಿದ್ದಾರೆ. ಭಾರತದ ಇನ್ನಿಂಗ್ಸ್ ವೇಳೆ ಧೋನಿ ಅವರು ಯುವ ವೇಗಿ ಮುಸ್ತಫಿಜುರ್ ರಹ್ಮಾನ್ ಗೆ ಗುದ್ದಿದ್ದು ಈಗ ಬಾಂಗ್ಲಾ ಅಭಿಮಾನಿಗಳ ಪಾಲಿಗೆ ಆಘಾತಕಾರಿಯಾಗಿದೆ.
ಜೂ.18ರಂದು ಮೀರ್ ಪುರ್ ನಡೆದು ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಕೆಚ್ಚೆದೆಯ ಪ್ರದರ್ಶನ ನೀಡಿ 79 ರನ್ ಗಳ ಅಂತರದ ಅರ್ಹ ಜಯ ದಾಖಲಿಸಿತು. 308ರನ್ ಗಳ ಚೇಸಿಂಗ್ ನಲ್ಲಿ ಎಂಎಸ್ ಧೋನಿ ಸೇರಿದಂತೆ ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು. [79 ರನ್ ಗಳಿಂದ ಸೋಲು ಕಂಡ ಭಾರತ]
ಪಂದ್ಯದ 25ನೇ ಓವರ್ ನಲ್ಲಿ ಧೋನಿ ಅವರು ರನ್ ಕದಿಯುವಾಗ ಎಡಗೈ ವೇಗಿ ಮುಸ್ತಫಿಝುರ್ ರಹ್ಮಾನ್ ಅವರಿಗೆ ಮೊಣಕೈನಲ್ಲಿ ಗುದ್ದಿದರು. ಅದರೆ, ಧೋನಿ ಬೇಕಂತಲೇ ಈ ರೀತಿ ಮಾಡಿದರು ಎಂದು ಬಾಂಗ್ಲಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಧೋನಿ ವಿರುದ್ಧ ಕ್ರಮ ಜರುಗಿಸಿ ಎಂದಿದ್ದಾರೆ. ಅಲ್ಪಸ್ವಲ್ಪ ಪ್ರಜ್ಞೆ ಇರುವ ಅಭಿಮಾನಿಗಳು ಈ ಪ್ರಸಂಗವನ್ನು ಬಳಸಿಕೊಂಡು ಹಾಸ್ಯದ ಹೊನಲು ಹರಿಸಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಧೋನಿ ಗುದ್ದಾಟದ ಬಗ್ಗೆ ಬಂದಿರುವ ಟ್ವೀಟ್ಸ್ ಇಲ್ಲಿದೆ...

ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು
ಜೂ.18ರಂದು ಮೀರ್ ಪುರ್ ನಡೆದು ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಕೆಚ್ಚೆದೆಯ ಪ್ರದರ್ಶನ ನೀಡಿ 79 ರನ್ ಗಳ ಅಂತರದ ಅರ್ಹ ಜಯ ದಾಖಲಿಸಿತು. 308ರನ್ ಗಳ ಚೇಸಿಂಗ್ ನಲ್ಲಿ ಎಂಎಸ್ ಧೋನಿ ಸೇರಿದಂತೆ ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು.
ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ
ಧೋನಿ ಗುದ್ದಿದ್ದು ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಂತೆ ಕಾಣಿಸುತ್ತಿತ್ತು.
ಧೋನಿ ಬೌಲರ್ ಕೆಳಗೆ ಉರಳಿಸಲಿಲ್ಲ ಸದ್ಯ
ಧೋನಿ ಬೌಲರ್ ಕೆಳಗೆ ಉರಳಿಸಲಿಲ್ಲ ಸದ್ಯ,, ಬಾಂಗ್ಲಾ ಫ್ಯಾನ್ಸ್ ಈಗ ಇದಕ್ಕೆ ಪ್ರತಿಕ್ರಿಯಿಸುವುದನ್ನು ನೋಡಬೇಕು
ಜೇಠ್ಮಲಾನಿಗೆ ಕರೆ ಮಾಡಿ ಕೇಸ್ ಬುಕ್ ಮಾಡಿ
ಮುಸ್ತಫಿಝುರ್ ಅವರು ಜೇಠ್ಮಲಾನಿಗೆ ಕರೆ ಮಾಡಿ ಧೋನಿ ವಿರುದ್ಧ ಗುದ್ದೋಡು ಕೇಸ್ ಬುಕ್ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ
ಇದಪ್ಪ ಸಕತ್ ಕಾಮಿಡಿ ಎಂದರೆ
ಧೋನಿ ಗುದ್ದಿದ್ದಕ್ಕೆ ಮುಸ್ತಫಿಝುರ್ ಗೆ ತೀವ್ರ ಗಾಯವಾಗಿದೆಯಂತೆ
ಧೋನಿ ಮುಸ್ತಫಿಝುರ್ ಗೆ ಗುದ್ದಿದ್ದು
ನಾಯಕ ಧೋನಿ ರನ್ ಕದಿಯುವಾಗ ಮುಸ್ತಫಿಝುರ್ ಗೆ ಗುದ್ದಿದ್ದು ಹೀಗೆ
ಧೋನಿಗೆ ಶಿಕ್ಷೆ ಆಗಲೇಬೇಕು
ಧೋನಿಗೆ ಶಿಕ್ಷೆ ಆಗಲೇಬೇಕು ಎಂದ ಅಭಿಮಾನಿಗಳು, ಧೋನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧೋನಿ ಬೇಕಂತಲೇ ಮಾಡಿದ್ದು
ಧೋನಿ ಬೇಕಂತಲೇ ಮಾಡಿದ್ದು ಎಂದ ಅಭಿಮಾನಿಗಳು
ಅದ್ಭುತ ಪ್ರದರ್ಶನ ನೀಡಿದ ಮುಸ್ತಫಿಜುರ್
ಮೊದಲ ಪಂದ್ಯವಾಡಿದ ಮುಸ್ತಫಿಜುರ್ ಅದ್ಭುತ ಪ್ರದರ್ಶನ ನೀಡಿ, 9.2 ಓವರ್ ಗಳಲ್ಲಿ 50 ರನ್ನಿತ್ತು 5 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications