ಐಪಿಎಲ್: ಟ್ವಿಟರ್ ವಿರುದ್ಧ ಆರ್‌ಸಿಬಿ ಅಸಮಾಧಾನ, ಏನಿದು ವಿವಾದ!?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಬಾಕಿಯಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ದ ಮೂರು ಬಾರಿಯ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 7ನೇ ಸ್ಥಾನಿಯಾಗಿ ಟೂರ್ನಿ ಮುಗಿಸಿತ್ತು. ಈ ಬಾರಿ ಮತ್ತೆ ಬಲಿಷ್ಠ ತಂಡವಾಗಿ ಹೊರಹೊಮ್ಮಲು ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಎದುರು ನೋಡುತ್ತಿದೆ.
ಸಾಮಾಜಿಕ ಜಾಲತಾಣವಾದ ಟ್ವಿಟರ್ ವಿರುದ್ಧ ಆರ್‌ಸಿಬಿ ಫ್ರಾಂಚೈಸಿ ಅಸಮಾಧಾನ ವ್ಯಕ್ತಪಡಿಸಿ ಇತ್ತೀಚೆಗೆ ಟ್ವೀಟ್ ಮಾಡಿದೆ. ಈ ಟ್ವೀಟ್ ಬೆನ್ನಲ್ಲೇ ಆರ್‌ಸಿಬಿ-ಸಿಎಸ್‌ಕೆ ಅಭಿಮಾನಿಗಳ ಮಧ್ಯೆ ಟ್ವೀಟ್ ವಾರ್‌ಗಳೂ ಶುರುವಾಗಿವೆ. ಏನಿದು ವಿವಾದ? ಇಲ್ಲಿದೆ ವಿವರಣೆ.
ಟ್ವಿಟರ್‌ನಲ್ಲಿ ಫ್ರಾಂಚೈಸಿ ಇಮೋಜಿಗಳು
ಐಪಿಎಲ್ ಸೀಸನ್‌ಗಳಿಗಾಗಿಯೇ ಟ್ವಿಟರ್ ವಿಶೇಷ ಇಮೋಜಿಗಳನ್ನು ಬಿಡುಗಡೆ ಮಾಡಿದೆ. ಅಂದರೆ ನಾವು ಹ್ಯಾಷ್‌ಟ್ಯಾಗ್ ಹಾಕಿ ಐಪಿಎಲ್ ತಂಡಗಳ ಹೆಸರು ಬರೆದರೆ ತಂಡದ ಹೆಸರುಗಳ ಜೊತೆಗೆ ಆಯಾ ತಂಡಗಳ ಜೆರ್ಸಿಯ ಇಮೋಜಿ ಕಾಣಿಸಿಕೊಳ್ಳುತ್ತವೆ. ಇದು ಆಯಾ ಫ್ರಾಂಚೈಸಿಗಳ ಅಭಿಮಾನಿಗಳು ಟ್ವೀಟ್ ಮಾಡುವಾಗ ಅವರಿಗೆ ಖುಷಿ ಕೊಡುತ್ತದೆ. ಆದರೆ ಇಲ್ಲೊಂದು ಎಡವಟ್ಟಾಗಿದೆ.
ಆರ್‌ಸಿಬಿ ಟೈಪ್ ಮಾಡಿದರೆ ಸಿಎಸ್‌ಕೆ ಜೆರ್ಸಿ
ಹ್ಯಾಷ್ ಟ್ಯಾಗ್ ಹಾಕಿ ಆರ್‌ಸಿಬಿ ಹೆಸರು ಟೈಪ್ ಮಾಡಿದಾಗ ಆರ್‌ಸಿಬಿ ಜೆರ್ಸಿಯ ಇಮೋದಿ ಕಾಣಿಸಬೇಕು. ಆದರೆ ಆರ್‌ಸಿಬಿ ಜೆರ್ಸಿ ಕಾಣಿಸುತ್ತಿಲ್ಲ. ಬದಲಿಗೆ ಸಿಎಸ್‌ಕೆ ಜೆರ್ಸಿ ಕಾಣಿಸುತ್ತಿದೆ. ಟ್ವಿಟರ್‌ನ ಈ ತಪ್ಪನ್ನು ಆರ್‌ಸಿಬಿ ಅಭಿಮಾನಿಗಳು ಬೇಗ ಕಂಡುಹುಡುಕಿದ್ದಾರೆ. ಆಗ ಗೊಂದಲ ಶುರುವಾಗಿದೆ. ಟ್ವೀಟ್ ವಾರ್‌ಗಳೂ ಶುರುವಾಗಿವೆ. ಸಿಎಸ್‌ಕೆ ಅಭಿಮಾನಿಗಳು ಕೊಹ್ಲಿ ಧರಿಸಿರುವ ಆರ್‌ಸಿಬಿ ಜೆರ್ಸಿಗೂ ಹಳದಿ ಬಣ್ಣ ಬಳಿದು ಟ್ವೀಟ್ ಮಾಡತೊಡಗಿದ್ದಾರೆ. ಯೆಲ್ಲೋ ಎಲ್ಲೆಲ್ಲೂ ಇದೆ ಎಂಬ ಮಾತುಗಳು ಕೇಳಿಬರತೊಡಗಿವೆ.ಈ ಸಂಗತಿ ಮುಂದಿಟ್ಟುಕೊಂಡು ಇತ್ತ ಸಿಎಸ್‌ಕೆ ಕೂಡ ಇನ್ನಷ್ಟು ಆರ್‌ಸಿಬಿ ಅಭಿಮಾನಿಗಳಿಗೆ ಉರಿಸತೊಡಗಿದೆ.
ಆರ್‌ಸಿಬಿ ಫ್ರಾಂಚೈಸಿ ಅಸಮಾಧಾನ
ಟ್ವಿಟರ್‌ನಿಂದಾದ ಈ ತಪ್ಪಿಗೆ ಆರ್‌ಸಿಬಿ, ಟ್ವಿಟರ್ ವಿರುದ್ಧ ಅಸಮಾಧಾನ ಹೊರಹಾಕಿ ಟ್ವೀಟ್ ಮಾಡಿದೆ. 'ಹೇಯ್ ಟ್ವಿಟರ್ ಇಂಡಿಯಾ, ನಿಮಗೆ ಒಳ್ಳೆಯ ಟೆಕ್ ಇಂಜಿನಿಯರ್‌ಗಳು ಬೇಕಾಗಬಹುದು ಎಂದು ಅನ್ನಿಸುತ್ತಿದೆ. ಕೆಲಸಕ್ಕೆ ಒಳ್ಳೆಯ ಇಂಜಿನಿಯರ್‌ಗಳು ಬೇಕಾದರೆ ಬೆಂಗಳೂರಿನಲ್ಲೇ ಹುಡುಕಾಟ ಶುರುಮಾಡಿ' ಎಂದು ಬರೆದುಕೊಂಡಿದೆ. ಜೊತೆಗೆ #WhatsWithYourEmojis ಹ್ಯಾಷ್ ಟ್ಯಾಗ್ ಕೂಡ ಬಳಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications