Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಪಾರ್ಟಿ: ವಿಲಕ್ಷಣ ಪೋಸ್ ನೀಡಿ ಟ್ರೋಲ್ ಆದ ಆ್ಯಡಂ ಜಂಪಾ

Twitter Trolls Adam Zamba For His Weird Action During RCBs Party

ಯುಎಇನಲ್ಲಿ ಮುಕ್ತಾಯ ಹಂತಕ್ಕೆ ಸಾಗುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2016 ರ ನಂತರ ಇದೇ ಮೊದಲ ಬಾರಿಗೆ ಅವರು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಪಂದ್ಯಾವಳಿಯ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಅವರನ್ನು ಎದುರಿಸಲಿದ್ದಾರೆ.

ನಾಕೌಟ್ ಹಂತಕ್ಕೂ ಮೊದಲು ಪ್ರಾಂಚೈಸಿ ನಾಯಕ ವಿರಾಟ್ ಕೊಹ್ಲಿ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸದರು ಬುಧವಾರ ರಾತ್ರಿ ಖಾಸಗಿ ಬೋಟ್‌ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು.

ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪಾರ್ಟಿಯಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿದ್ದರು. ಅಲ್ಲದೆ ಕ್ರಿಕೆಟಿಗರು ಕೆಲವು ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ರೀತಿಯಾದ ವೀಡಿಯೋಗಳು ಆರ್‌ಸಿಬಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಜೊತೆಗೆ ಆಟಗಾರರು ಸಹ ತಮ್ಮ ತಂಡದ ಸದಸ್ಯರೊಂದಿಗೆ ಸಾಕಷ್ಟು ಫೋಟೋಗಳನ್ನು ಕ್ಲಿಕ್ ಮಾಡಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್‌ಸಿಬಿ ವೇಗಿ ನವದೀಪ್ ಸೈನಿ ಕೂಡ ಶುಕ್ರವಾರ ತಮ್ಮ ತಂಡದ ಸದಸ್ಯರೊಂದಿಗೆ ಖುಷಿಪಟ್ಟ ಕ್ಷಣಗಳನ್ನು ಪೋಸ್ಟ್‌ ಮಾಡಿದ್ದಾರೆ. ಅವರು ಪೋಸ್ಟ್ ಮಾಡಿದ ಚಿತ್ರಗಳಲ್ಲಿ, ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಡಂ ಜಂಪಾ, ಮೊಹಮ್ಮದ್ ಸಿರಾಜ್ ಜೊತೆಗೆ ಕುಳಿತಿದ್ದಾರೆ ಮತ್ತು ಕೆಲವು ವಿಲಕ್ಷಣ ಪೋಸ್‌ಗಳನ್ನು ನೀಡಿದ್ದಾರೆ. ಜಂಪಾ ಸಿರಾಜ್‌ನ ಕಿವಿಗೆ ಬಹಳ ಹತ್ತಿರದಲ್ಲಿ ಮುಖವನ್ನು ತೆಗೆದುಕೊಂಡು ಹೋಗಿದ್ದು, ಬಹುಶಃ ಅವರಿಗೆ ಫೋಟೋ ಕ್ಲಿಕ್ ಮಾಡಿರುವುದು ತಿಳಿದಂತಿಲ್ಲ.

ಸೈನಿ ಚಿತ್ರಗಳನ್ನು ಪೋಸ್ಟ್ ಮಾಡಿದ ತಕ್ಷಣ ಟ್ವಿಟ್ಟರ್‌ ಬಳಕೆದಾರರು ಅದನ್ನು ಗಮನಿಸಿದ್ದರಲ್ಲಿ ಆಶ್ಚರ್ಯವಿಲ್ಲ ಮತ್ತು ಅವರು ಆ್ಯಡಂ ಜಂಪಾ ಅವರ ವಿಚಿತ್ರ ಕಾರ್ಯಗಳಿಗಾಗಿ ಸಖತ್ ಟ್ರೋಲ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಂಪ ಟ್ರೆಂಡ್ ಆಗುತ್ತಿರುವುದು ಇದೇ ಮೊದಲಲ್ಲ. ಮಾರ್ಕಸ್ ಸ್ಟೋಯಿನಿಸ್ ಅವರೊಂದಿಗಿನ ಅವರ ಒಡನಾಟ ಎಲ್ಲರಿಗೂ ಚಿರಪರಿಚಿತವಾಗಿದೆ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಪಂದ್ಯಗಳ ಸಮಯದಲ್ಲಿ ಇವರಿಬ್ಬರು ಒಟ್ಟಿಗೆ ಕುಳಿತು ವಿಭಿನ್ನ ಪೋಸ್ ನೀಡಿದ್ದರು.

ಇದೀಗ ಜಂಪಾ ಅವರ ಕಾರ್ಯಗಳಿಗಾಗಿ ಟ್ರೋಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ವಿಭಿನ್ನ ರೀತಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಅನ್ನು ಟ್ರೋಲ್ ಮಾಡಿದ್ದಾರೆ.












Story first published: Friday, November 6, 2020, 17:06 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+